'96' ಜಾನು ಪಾತ್ರಕ್ಕೆ ತ್ರಿಷಾ ಪಡೆದ ಪ್ರಶಸ್ತಿಗಳ ಸಂಖ್ಯೆ ಇಷ್ಟು
ಸೌತ್ ಬ್ಯೂಟಿ ತ್ರಿಷಾ ಕೆರಿಯರ್ ನಲ್ಲಿ '96' ಸಿನಿಮಾ ಮರೆಯಲಾಗದ ನೆನಪುಗಳನ್ನು ನೀಡಿದೆ. ಈ ಸಿನಿಮಾ ತ್ರಿಷಾ ದೊಡ್ಡ ಹೆಸರು, ಯಶಸ್ಸು, ಪ್ರಶಸ್ತಿ, ಪ್ರೀತಿ ಎಲ್ಲವನ್ನು ನೀಡಿದೆ.
'96' ಸಿನಿಮಾದ ಜಾನು ಪಾತ್ರ ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿತ್ತು. ಈ ಸಿನಿಮಾದ ನಟನೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನು ತ್ರಿಷಾ ಪಡೆದಿದ್ದಾರೆ. ಆ ಪ್ರಶಸ್ತಿಗಳ ಸಂಖ್ಯೆಯನ್ನು ಸ್ವತಃ ತ್ರಿಷಾ ತಿಳಿಸಿ ಸಂತಸ ಹಂಚಿಕೊಂಡಿದ್ದಾರೆ.
ಜಾನು ಪಾತ್ರಕ್ಕಾಗಿ ಬರೋಬ್ಬರಿ 11 ಪ್ರಶಸ್ತಿಗಳು ತ್ರಿಷಾಗೆ ಬಂದಿವೆ. ಕೆಲ ದಿನಗಳ ಹಿಂದೆಯಷ್ಟೇ ಅತ್ಯುತ್ತಮ ನಟಿ ಫಿಲ್ಮ್ ಫೇರ್ ಪ್ರಶಸ್ತಿ ತ್ರಿಷಾಗೆ ಸಿಕ್ಕಿದೆ. ಈ ಪೈಕಿ ಸೈಮಾ ಪ್ರಶಸ್ತಿ ಕೂಡ ಇದೆ. ತಮಗೆ ಬಂದ ಪ್ರಶಸ್ತಿಗಳ ರಾಶಿ ಜೊತೆಗೆ ಫೋಟೋ ಕ್ಕಿಕ್ಕಿಸಿಕೊಂಡಿದ್ದಾರೆ.

ಇದರ ಜೊತೆಗೆ 'ಹೇ ಜುಡೆ' ಮಲೆಯಾಳಂ ಸಿನಿಮಾ ಸಹ ತ್ರಿಷಾಗೆ 3 ಪ್ರಶಸ್ತಿಗಳನ್ನು ತಂದುಕೊಟ್ಟಿದೆ. ಈ ಎರಡು ಸಿನಿಮಾಗಳು ಕಳೆದ ವರ್ಷ ಬಿಡುಗಡೆಯಾಗಿದ್ದು, ಈ ವರ್ಷ ಪೂರ್ತಿ ತ್ರಿಷಾ ಅವರ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ.
'96' ವಿಜಯ್ ಸೇತುಪತಿ ನಟನೆಯ ಸಿನಿಮಾ. ಚಿತ್ರದ ಕ್ಯೂಟ್ ಲವ್ ಸ್ಟೋರಿ ಜನರಿಗೆ ಬಹಳ ಇಷ್ಟ ಆಗಿದೆ. ತ್ರಿಷಾ ತುಂಬ ಚೆನ್ನಾಗಿ ನಟಿಸಿದ್ದಾರೆ. ಜಾನು ಪಾತ್ರ ಅವರ ಕೆರಿಯರ್ ನ ಬೆಸ್ಟ್ ಪಾತ್ರಗಳ ಪೈಕಿ ಒಂದಾಗಿದೆ.


Click it and Unblock the Notifications











