ನಿಮಗೆ ನಿದ್ದೆಯಾದರೂ ಹೇಗೆ ಬರುತ್ತೆ ? ಕೆಂಡ ಕಾರಿದ ತ್ರಿಶಾ..!
ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಹಾಗಂಥ ತೀರಾ ಹೊಲಸಾಗಿ ಟ್ರೋಲ್ ಕೂಡ ಮಾಡಬಾರದು. ಯಾಕೆಂದರೆ ಕೆಲ ಒಮ್ಮೆ ಹೀಗೆ ಮಾಡಲಾಗುವ ಟ್ರೋಲ್ ವ್ಯಕ್ತಿಯೊಬ್ಬನ ಮಾನಸಿಕ ತೊಂದರೆಗೆ ಕಾರಣವಾಗಬಹುದು. ಆಘಾತಕ್ಕೆ ಕಾರಣವಾಗಿ ಒತ್ತಡವನ್ನು ಹೆಚ್ಚಿಸಬಹುದು.
ಇದಕ್ಕೆ ಕೈಗನ್ನಡಿ ಎಂಬಂತೆ ತ್ರಿಶಾ ಸದ್ಯ ಟ್ರೋಲಿಗರ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಹೌದು,ಮೌನಂ ಪೇಸಿಯದೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ತ್ರಿಶಾ ಆ ನಂತರ ಮತ್ತೆ ಹಿಂದೆ ತಿರುಗಿ ನೋಡಲಿಲ್ಲ.

ಬದಲಿಗೆ ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಕೂಡ ಅಭಿನಯಿಸಿದರು. ಅಭಿಮಾನಿಗಳ ಹೃದಯವನ್ನು ಗೆದ್ದರು. ಚಿತ್ರರಂಗಕ್ಕೆ ಬಂದು 25 ವಸಂತಗಳಾದರು ಕೂಡ ಇವತ್ತು ತ್ರಿಶಾ ಡಿಮ್ಯಾಂಡ್ ಕಡಿಮೆಯಾಗಿಲ್ಲ. ಇಂಥಾ ತ್ರಿಶಾ ಅಭಿನಯದ ಗುಡ್ ಬ್ಯಾಡ್ ಅಗ್ಲಿ ಚಿತ್ರ ಸದ್ಯ ತೆರೆಗೆ ಬಂದಿದೆ. ಚಿತ್ರ ನೋಡಿದವರು ಅವರ ಅವರ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಅಜಿತ್ ಅಭಿನಯಕ್ಕೆ ಮತ್ತು ಚಿತ್ರಕ್ಕೆ ಮನ ಸೋತರೆ ಇನ್ನು ಹಲವರು ಚಿತ್ರ ಅಷ್ಟಕಷ್ಟೇ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ಆದರೆ ಇಷ್ಟಕ್ಕೆ ಸುಮ್ಮನಾಗದ ಇನ್ನು ಹಲವರು ತ್ರಿಶಾ ಅವರ ಕುರಿತು ತೀರಾ ಮಾತನಾಡಬಾರದ್ದನ್ನೆಲ್ಲ ಮಾತನಾಡುತ್ತಿದ್ದಾರೆ. ತೀರಾ ವ್ಯೆಯಕ್ತಿಕವಾಗಿ ನಿಂದಿಸುತ್ತಿದ್ದಾರೆ. ತ್ರಿಶಾಗೆ ಅಭಿನಯದ ಗಂಧ ಗಾಳಿ ಗೊತ್ತಿಲ್ಲವೆಂದು ಟ್ರೋಲ್ ಮಾಡುತ್ತಿದ್ದಾರೆ.
ಇನ್ನು ನಯನತಾರಾ ಮತ್ತು ತ್ರಿಶಾ ನಡುವೆ ಸಂಬಂಧ ಹಳಸಿರುವ ವಿಚಾರ ಎಲ್ಲರಿಗೆ ಗೊತ್ತಿರುವುದೇ. ಒಂದು ಕಾಲದಲ್ಲಿ ಆಪ್ತ ಸ್ನೇಹಿತೆಯರಾಗಿದ್ದ ತ್ರಿಶಾ ಮತ್ತು ನಯನತಾರಾ ಒಬ್ಬರನ್ನೊಬ್ಬರು ಮಾತನಾಡಿಸಿ ಅನೇಕ ವರ್ಷಗಳೇ ಆಗಿವೆ. ಇನ್ನು ಕೇವಲ ಸಿನಿಮಾ ವಿಚಾರದಲ್ಲಿ ಮಾತ್ರವಲ್ಲ ಸಂಭಾವನೆ ವಿಚಾರದಲ್ಲಿ ಕೂಡ ಇಬ್ಬರ ನಡುವೆ ತೀವೃ ಪೈಪೋಟಿ ಇದೆ ಎನ್ನುವ ಮಾತು ಪಕ್ಕದ ತಮಿಳುನಾಡಿನಲ್ಲಿ ಆಗಾಗ ಕೇಳಿ ಬರುತ್ತಿರುತ್ತೆ.
ಹೀಗಿರುವಾಗ ಗುಡ್ ಬ್ಯಾಡ್ ಅಗ್ಲಿ ಚಿತ್ರದ ವಿಚಾರದಲ್ಲಿ ಕೆಲವರು ಬೇಕು ಬೇಕಂತಲೇ ನಯನತಾರಾ ಅವರ ಹೆಸರನ್ನು ಎಳೆದರು ತರುತ್ತಿದ್ದಾರೆ. ಅಜಿತ್ ಎದುರು ತ್ರಿಶಾ ಬದಲು ನಯನತಾರಾ ಅಭಿನಯಿಸಿದ್ದರೆ ಚಿತ್ರದ ಫಲಿತಾಂಶವೇ ಬೇರೆಯಾಗುತ್ತಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ತ್ರಿಶಾ ಮತ್ತು ನಯನತಾರಾ ಇಬ್ಬರಲ್ಲಿ ಅತ್ಯುತ್ತಮ ಅಭಿನೇತ್ರಿ ಯಾರು ಎಂದು ಚರ್ಚೆಯನ್ನು ಕೂಡ ಮಾಡುತ್ತಿದ್ದಾರೆ.
ಇದೆಲ್ಲವನ್ನು ತ್ರಿಶಾ ಗಮನಿಸಿದ್ದಾರಾ ಗೊತ್ತಿಲ್ಲ. ಆದರೆ, ಗುಡ್ ಬ್ಯಾಡ್ ಅಗ್ಲಿ ಚಿತ್ರದ ಬಿಡುಗಡೆಯ ನಂತರ ತ್ರಿಶಾಗೆ ಟ್ರೋಲ್‌ಗಳಿಂದ ಕಿರಿಕಿರಿಯಂತೂ ಆಗುತ್ತಿದೆ. ಹೀಗಾಗಿಯೇ ಕೆರಳಿ ಕೆಂಡವಾಗಿರುವ ತ್ರಿಶಾ ವಿಷ ಕಾರುವ ಮಹಾಜನರೇ ನಿಮಗೆ ನಿದ್ದೆಯಾದರೂ ಹೇಗೆ ಬರುತ್ತೆ ಎಂದು ಕಿಡಿ ಕಾರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಾಯಿಗೆ ಬಂದಂತೆ ಮಾತನಾಡುವುದರಲ್ಲಿಯೇ ದಿನ ಕಳೆಯುತ್ತೀರಾ ಎಂದಿರುವ ತ್ರಿಶಾ ನಿಮ್ಮ ಜೊತೆ ವಾಸ ಮಾಡುವ ಜನರ ಮೇಲೆ ನನಗೆ ಕನಿಕರ ಇದೆ ಎಂದು ಹೇಳಿದ್ದಾರೆ. ನೀವು ಮಾಡುತ್ತಿರುವುದು ನೀಚ ಮತ್ತು ಹೇಡಿತನದ ಕೆಲಸ ಎಂದು ಕೂಡ ಹೇಳಿದ್ದಾರೆ. ಆ ದೇವರ ಆಶೀರ್ವಾದ ನಿಮ್ಮೆಲ್ಲರ ಮೇಲಿರಲಿ ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಸದ್ಯಕ್ಕೆ ತ್ರಿಶಾ ಅವರ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ನಾಂದಿ ಹಾಡಿದೆ. ಯಾವತ್ತು ಯಾವದಕ್ಕೂ ಹೆಚ್ಚಿನ ಪ್ರತಿಕ್ರಿಯೆ ನೀಡದ ತ್ರಿಶಾ ಏಕಾಏಕಿ ಹೀಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಪ್ರಶ್ನೆ ಹಲವರನ್ನು ಹಾಡುತ್ತಿದೆ. ನಯನತಾರಾ ಅಭಿಮಾನಿಗಳಿಗೆ ತ್ರಿಶಾ ತಮ್ಮ ಪೋಸ್ಟ್ ಮೂಲಕ ತಿರುಗೇಟು ನೀಡಿದ್ದಾರಾ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ.
ಇಷ್ಟಕ್ಕೆ ಸುಮ್ಮನಾಗದ ಮತ್ತೂ ಕೆಲವರು ತ್ರಿಶಾ ಮತ್ತು ನಯನತಾರಾ ನಡುವೆ ಹೋಲಿಕೆ ಮಾಡುತ್ತಿದ್ದಾರೆ.


Click it and Unblock the Notifications











