For Quick Alerts
  ALLOW NOTIFICATIONS  
  For Daily Alerts

  ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಾದ ಬಹುಭಾಷಾ ನಟಿ ತ್ರಿಷಾ

  |

  ದಕ್ಷಿಣ ಭಾರತದ ಖ್ಯಾತ ನಟಿ ತ್ರಿಷಾ ಕೃಷ್ಣನ್ ಸಿನಿಮಾ ವಿಚಾರಕ್ಕಿಂತ ಮದುವೆ ವಿಚಾರದಲ್ಲಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ. 37 ವರ್ಷ ತ್ರಿಷಾ ಮದುವೆ ಯಾವಾಗ ಮತ್ತು ಯಾರನ್ನು ಮದುವೆ ಆಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿರುವ ವಿಷಯ.

  ಒಮ್ಮೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಂತರ ಅದನ್ನು ಬ್ರೇಕ್ ಅಪ್ ಸಹ ಮಾಡಿದ್ದರು. ಇದಾದ ಮೇಲೆ ತ್ರಿಷಾ ಖಾಸಗಿ ಜೀವನದ ಬಗ್ಗೆ ಅಭಿಮಾನಿಗಳು ಹೆಚ್ಚು ಯೋಚನೆ ಮಾಡುತ್ತಿದ್ದಾರೆ. ತ್ರಿಷಾ ಸಹ ತಮ್ಮ ಮದುವೆ ಕುರಿತು ಸಂದರ್ಶನವೊಂದರಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಜೀವನ ಹೇಗೆ ಎನ್ನುವುದನ್ನು ತ್ರಿಷಾ ತಿಳಿಸಿದ್ದಾರೆ. ಮುಂದೆ ಓದಿ...

  ನನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಗಬೇಕು

  ನನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಗಬೇಕು

  ''ನನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಇನ್ನು ನನಗೆ ಸಿಕ್ಕಿಲ್ಲ. ಅಂತಹ ವ್ಯಕ್ತಿ ತಕ್ಷಣ ನಾನು ಮದುವೆ ಆಗುತ್ತೇನೆ'' ಎಂದಿರುವ ತ್ರಿಷಾ ಲವ್ ಮ್ಯಾರೇಜ್ ಕುರಿತು ಆಸಕ್ತಿ ಹೊಂದಿರುವುದಾಗಿ ತಿಳಿಸಿದ್ದಾರೆ. ಸದ್ಯಕ್ಕೆ ಯಾರನ್ನಾದರೂ ಪ್ರೀತಿಸುತ್ತಿದ್ದಾರೆ ಎನ್ನುವ ಕುರಿತು ಹೇಳಲಿಲ್ಲ.

  ಮದುವೆ ಬಗ್ಗೆ ತನ್ನ ಮನದಾಸೆ ಹಂಚಿಕೊಂಡ ನಟಿ ತ್ರಿಷಾ ಕೃಷ್ಣನ್!ಮದುವೆ ಬಗ್ಗೆ ತನ್ನ ಮನದಾಸೆ ಹಂಚಿಕೊಂಡ ನಟಿ ತ್ರಿಷಾ ಕೃಷ್ಣನ್!

  ನಾನು ಒಂಟಿಯಾಗಿರಲು ಸಿದ್ಧ

  ನಾನು ಒಂಟಿಯಾಗಿರಲು ಸಿದ್ಧ

  ''ನನ್ನನ್ನು ಅರ್ಥ ಮಾಡಿಕೊಳ್ಳುವ ವ್ಯಕ್ತಿ ಸಿಕ್ಕಿದ ನಂತರ ಮದುವೆಯಾಗುತ್ತೇನೆ ಎಂದಿರುವ ತ್ರಿಷಾ, ಒಂದು ವೇಳೆ ನನ್ನನ್ನು ಅರ್ಥ ಮಾಡಿಕೊಂಡ ವ್ಯಕ್ತಿ ಸಿಗದೇ ಹೋದರು ನನಗೆ ಚಿಂತೆ ಇಲ್ಲ. ನಾನು ಶಾಶ್ವತವಾಗಿ ಒಬ್ಬಂಟಿಯಾಗಿ ಉಳಿಯಲು ಸಿದ್ಧವಿದ್ದೇನೆ'' ಎಂದು ತ್ರಿಷಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

  ನಿಶ್ಚಿತಾರ್ಥ ಮುರಿದು ಬಿದ್ದಿತ್ತು

  ನಿಶ್ಚಿತಾರ್ಥ ಮುರಿದು ಬಿದ್ದಿತ್ತು

  ಹಲವು ವರ್ಷಗಳ ಕಾಲ ತೆಲುಗು ನಟ ರಾಣಾ ದಗ್ಗುಬಾಟಿ ಜೊತೆ ಲವ್ವಲ್ಲಿ ಇದ್ದರು. ಇಬ್ಬರ ಬಗ್ಗೆಯೂ ಗಾಸಿಪ್ ಸಹ ಹೆಚ್ಚಾಗಿಯೇ ಇತ್ತು. ಆಮೇಲೆ ಏನಾಯ್ತೋ ಇದು ಮುಂದುವರಿಯಲಿಲ್ಲ. ನಂತರ 2015ರಲ್ಲಿ ಚೆನ್ನೈನ ಉದ್ಯಮಿ ವರುಣ್ ಮನೈನ್ ಜೊತೆ ತ್ರಿಷಾ ಎಂಗೇಜ್ ಮೆಂಟ್ ಮಾಡಿಕೊಂಡರು. ಕೆಲವು ತಿಂಗಳ ಬಳಿಕ ಈ ನಿಶ್ಚಿತಾರ್ಥವನ್ನು ಸಹ ಮುರಿದುಕೊಂಡರು.

  1999ರಲ್ಲಿ ತನ್ನ ಜೀವನ ಬದಲಿಸಿದ ಅದೃಷ್ಟದ ದಿನ ಸ್ಮರಿಸಿದ ತ್ರಿಷಾ1999ರಲ್ಲಿ ತನ್ನ ಜೀವನ ಬದಲಿಸಿದ ಅದೃಷ್ಟದ ದಿನ ಸ್ಮರಿಸಿದ ತ್ರಿಷಾ

  ರೆಬಲ್ ಸ್ಟಾರ್ ಮೇಲಿನ ಪ್ರೀತಿಯನ್ನು ಮತ್ತೆ ಸಾಬೀತು ಪಡಿಸಿದ ಮಂಡ್ಯ ಜನ | Filmibeat Kannada
  ಸಿಂಬು ಜೊತೆ ವಿವಾಹ?

  ಸಿಂಬು ಜೊತೆ ವಿವಾಹ?

  ಇದೆಲ್ಲ ಆದ್ಮೇಲೆ ಸಿನಿಮಾ ಕಡೆ ಹೆಚ್ಚು ಗಮನ ನೀಡಿದ ತ್ರಿಷಾ ಖಾಸಗಿ ವಿಚಾರವಾಗಿ ಸೈಲೆಂಟ್ ಆಗಿದ್ದರು. ಆಮೇಲೆ ಇದ್ದಕ್ಕಿದ್ದಂತೆ ತಮಿಳು ನಟ ಸಿಂಬು ಜೊತೆ ತ್ರಿಷಾ ವಿವಾಹವಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತು. ಆದ್ರೆ ಇದು ಕೇವಲ ವದಂತಿ ಅಷ್ಟೇ. ಇಬ್ಬರು ಕೇವಲ ಸ್ನೇಹಿತರು ಮಾತ್ರ.

  English summary
  South beauty Trisha Krishnan is planning a Love Marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X