Just In
Don't Miss!
- Sports
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ
- Automobiles
ಮತ್ತೊಮ್ಮೆ ಸ್ಪಾಟ್ ಟೆಸ್ಟ್ ನಡೆಸಿದ 2021ರ ರಾಯಲ್ ಎನ್ಫೀಲ್ಡ್ ಕ್ಲಾಸಿಕ್ 350 ಬೈಕ್
- News
ಸಿಯೆಟ್ ತ್ರೈಮಾಸಿಕ ವರದಿ: ಲಾಭದ ಪ್ರಮಾಣ 128 ಕೋಟಿ ರೂಪಾಯಿಗೆ ಏರಿಕೆ
- Education
SBI PO Mains Admit Card 2021: ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Lifestyle
ಜ. 25ಕ್ಕೆ ಕುಂಭ ರಾಶಿಗೆ ಬುಧನ ಸಂಚಾರ: 12 ರಾಶಿಗಳ ಮೇಲೆ ಇದರ ಪ್ರಭಾವವೇನು?
- Finance
ಷೇರುಪೇಟೆಯಲ್ಲಿ ಉತ್ಸಾಹ; ಹೂಡಿಕೆದಾರರ ಸಂಪತ್ತು 3.50 ಲಕ್ಷ ಕೋಟಿ ರು. ಹೆಚ್ಚಳ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದೀಪಿಕಾ ಪಡುಕೋಣೆ ಚಿತ್ರದ ರೀಮೇಕ್‌ನಲ್ಲಿ ತ್ರಿಷಾ ನಟನೆ!
ಬಹುಭಾಷಾ ನಟಿ ತ್ರಿಷಾ ಕೃಷ್ಣನ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತಮಿಳು ಇಂಡಸ್ಟ್ರಿಯಲ್ಲಿ ಹೆಚ್ಚು ಬ್ಯುಸಿ ಇರುವ ನಟಿ ಆರೇಳು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದೀಗ, ಮತ್ತೊಂದು ಸಿನಿಮಾದ ಕುರಿತು ಸುದ್ದಿ ಹೊರಬಿದ್ದಿದೆ.
ಬಾಲಿವುಡ್‌ನಲ್ಲಿ ದೊಡ್ಡ ಹಿಟ್ ಆದ ಚಿತ್ರವೊಂದನ್ನು ಸೌತ್‌ನಲ್ಲಿ ರೀಮೇಕ್ ಮಾಡುತ್ತಿದ್ದು, ಈ ಚಿತ್ರದಲ್ಲಿ ತ್ರಿಷಾ ಮುಖ್ಯ ಮಾತ್ರ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಹೌದು, 2015ರ ಹಿಟ್ ಚಿತ್ರ ಪೀಕು ರೀಮೇಕ್ ಆಗುವ ಸಾಧ್ಯತೆ ಹೆಚ್ಚಿದ್ದು, ದೀಪಿಕಾ ಪಡುಕೋಣೆ ಪಾತ್ರದಲ್ಲಿ ತ್ರಿಷಾ ಅಭಿನಯಿಸಲಿದ್ದಾರೆ ಎನ್ನಲಾಗಿದೆ. ಮುಂದೆ ಓದಿ...
ಮದುವೆ ವಿಚಾರದಲ್ಲಿ ಮತ್ತೆ ಸುದ್ದಿಯಾದ ಬಹುಭಾಷಾ ನಟಿ ತ್ರಿಷಾ

ರೀಮೇಕ್ ಹಕ್ಕು ಖರೀದಿ!
ತಮಿಳಿನ ವೆಬ್‌ಸೈಟ್‌ವೊಂದು ವರದಿ ಮಾಡಿರುವ ಪ್ರಕಾರ, ದೊಡ್ಡ ನಿರ್ಮಾಣ ಸಂಸ್ಥೆಯೊಂದು ಪೀಕು ಚಿತ್ರದ ರೀಮೇಕ್ ಹಕ್ಕೂ ಖರೀದಿಸಿದೆಯಂತೆ. ತಮಿಳಿನ ಜೊತೆ ತೆಲುಗಿನಲ್ಲೂ ಈ ಸಿನಿಮಾ ಮಾಡುವ ಯೋಜನೆ ಹಾಕಿದ್ದು, ದೀಪಿಕಾ ಪಾತ್ರದಲ್ಲಿ ತ್ರಿಷಾ ನಟಿಸಬಹುದು ಎಂದು ವರದಿಯಾಗಿದೆ.
1999ರಲ್ಲಿ ತನ್ನ ಜೀವನ ಬದಲಿಸಿದ ಅದೃಷ್ಟದ ದಿನ ಸ್ಮರಿಸಿದ ತ್ರಿಷಾ

ಅಮಿತಾಭ್ ಬಚ್ಚನ್ ಪಾತ್ರಕ್ಕೆ ಯಾರು?
ದೀಪಿಕಾ ಪಡುಕೋಣೆ ಪಾತ್ರದಲ್ಲಿ ತ್ರಿಷಾ ಅವರನ್ನು ನೋಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಆದ್ರೆ, ಅಮಿತಾಭ್ ಬಚ್ಚನ್ ಅವರ ಪಾತ್ರಕ್ಕೆ ಯಾರು ಎಂಬ ಪ್ರಶ್ನೆ ಉಂಟಾಗಿದೆ. 70 ವರ್ಷದ ಹಿರಿಯ ವ್ಯಕ್ತಿ ಪಾತ್ರದಲ್ಲಿ ಬಿಗ್ ಬಿ ನಟಿಸಿದ್ದರು. ಈ ಪಾತ್ರವನ್ನು ಸೌತ್‌ನಲ್ಲಿ ಮಾಡುವುದಾದರೇ ಯಾರು ಎಂದು ಹುಡುಕಲಾಗುತ್ತಿದೆ.

ಇರ್ಫಾನ್ ಖಾನ್ ಸಹ ಇದ್ದರು
ಶೂಜಿಕ್ ಸರ್ಕಾರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ಅಮಿತಾಬ್, ದೀಪಿಕಾ ಪಡುಕೋಣೆ ಜೊತೆ ಇರ್ಫಾನ್ ಖಾನ್ ಸಹ ಪ್ರಮುಖ ಪಾತ್ರ ವಹಿಸಿದ್ದರು. ಸುಮಾರು 24 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಸಿನಿಮಾ 145 ಕೋಟಿಗೂ ಹೆಚ್ಚು ಗಳಿಕೆ ಕಂಡಿತ್ತು. ಈ ಪಾತ್ರಕ್ಕಾಗಿ 2016ನೇ ವರ್ಷದಲ್ಲಿ ಅಮಿತಾಬ್ ಬಚ್ಚನ್ ಗೆ ಅತ್ಯುತ್ತಮ ನಟ ಪ್ರಶಸ್ತಿ ಸಹ ಲಭಿಸಿತ್ತು.
'ಕಾಂಪ್ರಮೈಸ್' ಮಾಡಿಕೊಂಡು ತ್ರಿಶಾ ನಾಯಕಿಯಾಗಿದ್ದು: ವಿಡಿಯೋ ಇದೆ ಎಂದ ನಟಿ

ತ್ರಿಷಾ ಮುಂದಿನ ಚಿತ್ರಗಳು
ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ತ್ರಿಷಾ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚದುರಂಗ ವೇಟೈ 2, ರಾಮ್, ಶುಗರ್, ರಾಂಗೀ, ಘರ್ಜನೈ ಸೇರಿದಂತೆ ಇನ್ನು ಕೆಲವು ಹೊಸ ಪ್ರಾಜೆಕ್ಟ್‌ಗಳಲ್ಲಿ ತ್ರಿಷಾ ನಟಿಸುತ್ತಿದ್ದಾರೆ.