ನನ್ನ ಹನಿಮೂನ್‌ ಅರೆಂಜ್ ಮಾಡಿ ; ಉದ್ಯಮಿ ಜೊತೆ ಮದುವೆ ವದಂತಿ- ಸತ್ಯ ಹೇಳಿದ ತ್ರಿಶಾ

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಇಲ್ಲಿ ದಿನಕ್ಕೊಂದು ಸುದ್ದಿ ಹುಟ್ಟಿಕೊಳ್ತಾವೆ. ಹಾಗಂತೆ.. ಹೀಗಂತೆ .. ಎಂಬ ಅಂತೆ ಕಂತೆ ಸಂತೆಯಲ್ಲಿ ಹಲವಾರು ಸುದ್ದಿಗಳು ಸದ್ದು ಮಾಡುತ್ತಾವೆ. ಹೀಗೆ ಸದ್ದು ಮಾಡುವ ಸುದ್ದಿಗಳಲ್ಲಿ ಅರ್ಧ ಸತ್ಯವಾದರೆ ಉಳಿದಿದೆಲ್ಲವೂ ಮಿಥ್ಯ ಆಗಿರುತ್ತಾವೆ. ಆ ಪೈಕಿ ತಮ್ಮ ಕುರಿತು ಕೆಲ ಸುದ್ದಿಗಳನ್ನು ಕಂಡು..

ಸಾಮಾನ್ಯವಾಗಿ ಕೆಲ ತಾರೆಯರು ಸುಮ್ಮನಾಗುತ್ತಾರೆ. ಇನ್ನೂ ಕೆಲವರು ಉರಿದು ಬೀಳುತ್ತಾರೆ. ತಮ್ಮ ಕುರಿತು ಇಲ್ಲ ಸಲ್ಲದ ಸುದ್ದಿ ಹಬ್ಬಿಸಿದವರ ವ್ಯಂಗ್ಯವಾಡುತ್ತಾರೆ ಉದಾಹರಣೆಗೆ ತ್ರಿಶಾ ಕೃಷ್ಣನ್. ಹೌದು, ತ್ರಿಶಾಗೆ ಈಗ 42ರ ಹರೆಯ. ಆದರೆ .. ಇನ್ನೂ ಮದುವೆಯಾಗಿಲ್ಲ. ಈ ಹಿನ್ನೆಲೆ ಹಲವರಿಗೆ ಇವರ ಮದುವೆ ಚಿಂತೆ ಕಾಡುತ್ತಿದೆ.

Trisha Krishnan Smashes Wedding Rumors with Witty Honeymoon Clapback

ಇನ್ನು ಕಾಲಿವುಡ್‌ನ ಸೂಪರ್ ಸ್ಟಾರ್ ವಿಜಯ್ ಜೊತೆ ತ್ರಿಶಾ ಹೆಸರು ತಳುಕು ಹಾಕಿಕೊಂಡು ಹಲವು ವರ್ಷವಾಗಿವೆ. ತ್ರಿಶಾ ಅವರಿಗೋಸ್ಕರ ವಿಜಯ್ ತಮ್ಮ ಪತ್ನಿ ಸಂಗೀತಾಗೆ ವಿಚ್ಛೇದನ ನೀಡುತ್ತಾರೆ ಎನ್ನುವ ಸುದ್ದಿ ಅಂದಿನಿಂದ ಇಂದಿನವರೆಗೆ ಚಾಲ್ತಿಯಲ್ಲಿದೆ.

ಆದರೆ.. ಈ ವಿಚಾರಕ್ಕೆ ಸಂಬಂಧಿಸಿದಂತೆ ತ್ರಿಶಾ ಆಗಲಿ.. ವಿಜಯ್ ಆಗಲಿ.. ಮೌನ ಮುರಿದಿಲ್ಲ. ಹೀಗಾಗಿ ಮೌನಂ ಸಮ್ಮತಿ ಲಕ್ಷಣಂ ಎಂದುಕೊಂಡು ಒಂದು ವರ್ಗ ವಿಜಯ್ ಮತ್ತು ತ್ರಿಶಾ ಕಲ್ಯಾಣ ಕಣ್ತುಂಬಿಕೊಳ್ಳಲು ಕಾದು ಕುಂತಿದ್ದರೆ ಮತ್ತೊಂದು ವರ್ಗ ಬೇರೆಯವರ ಜೊತೆ ತ್ರಿಶಾ ಮದುವೆ ಮಾಡಿಸಲು ಹಾತೊರೆಯುತ್ತಿದೆ.

ಇದಕ್ಕೆ ಕೈಗನ್ನಡಿ ಎಂಬಂತೆ ನಿನ್ನೆ-ಮೊನ್ನೆ ತ್ರಿಶಾ ಮದುವೆ ವಿಚಾರ ದಕ್ಷಿಣ ಭಾರತದಲ್ಲಿ ಸದ್ದು ಮಾಡಿತ್ತು. ಮನೆಯವರು ನೋಡಿರುವ ಚಂದೀಗಢದ ಉದ್ಯಮಿ ಜೊತೆ ತ್ರಿಶಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಇಷ್ಟೇ ಅಲ್ಲ ಈಗಾಗಲೇ ಸದ್ದಿಲ್ಲದೇ ನಿಶ್ಚಿತಾರ್ಥ ಸಮಾರಂಭ ಕೂಡ ನಡೆದಿದೆ ಎಂಬ ಮಾತು ಕೂಡ ಕೇಳಿ ಬಂದಿತ್ತು.

ಈ ಮಾತುಗಳು ತ್ರಿಶಾ ಅವರ ಕಿವಿಗೆ ಈಗ ತಲುಪಿವೆ. ಕೆರಳಿಸಿವೆ. ಹೀಗಾಗಿಯೇ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಉತ್ತರವನ್ನು ನೀಡಿರುವ ತ್ರಿಶಾ ''ಜನರು ನನ್ನ ಜೀವನವನ್ನು ನನಗಾಗಿ ಪ್ಲ್ಯಾನ್‌ ಮಾಡುವುದನ್ನು
ನಾನು ಇಷ್ಟ ಪಡುತ್ತೇನೆ. ನನ್ನ ಹನಿಮೂನ್ ಕೂಡ ಅವರೇ ನಿಗಧಿ ಪಡಿಸಲಿ ಎಂದು ಕಾಯುತ್ತಿದ್ದೇನೆ'' ಎಂದು ಹೇಳಿದ್ದಾರೆ. ಈ ಮೂಲಕ ಮದುವೆಯ ಮಾತು ಕತೆಗಳಿಗೆ ಬ್ರೇಕ್ ಹಾಕಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿದವರಿಗೆ ತಿರುಗೇಟನ್ನು ಕೂಡ ನೀಡಿದ್ದಾರೆ.

Trisha Krishnan Smashes Wedding Rumors with Witty Honeymoon Clapback

ಅಂದ್ಹಾಗೇ ಕಳೆದ ವರ್ಷ ಇಳಯ ದಳಪತಿ ವಿಜಯ್ ಅವರ 50ನೇ ವರ್ಷದ ಹುಟ್ಟುಹಬ್ಬದ ಸಮಯದಲ್ಲಿ ವಿಜಯ್ ಜೊತೆ ತ್ರಿಶಾ ಕಾಣಿಸಿಕೊಂಡಿದ್ದರು.ಆ ಸಮಯದಲ್ಲಿ ಈ ಕುರಿತು ಗಾಯಕಿ ಸುಚಿತ್ರಾ ಬಾಂಬ್ ಸಿಡಿಸಿದ್ದರು. ದಳಪತಿ ವಿಜಯ್ ತಮ್ಮ ಪತ್ನಿಗೆ ವಿಚ್ಛೇದನ ನೀಡಲು ಬಯಸಿದ್ದಾರೆ, ವಿಜಯ್ ತಮ್ಮ ಪತ್ನಿಯಿಂದ ದೂರು ಉಳಿದು ವರ್ಷಗಳೇ ಕಳೆದಿವೆ. ಇಬ್ಬರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆಂದು ಹೇಳಿದ್ದರು. ಎಂಜಿಆರ್ ಹಾಗೂ ಜಯಲಲಿತಾರಂತೆಯೇ ತ್ರಿಶಾ ಜೊತೆ ಬಾಂಧವ್ಯ ಇಟ್ಟುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.

ಇನ್ನುಳಿದಂತೆ ಉದ್ಯಮಿ ವರುಣ್ ಮಣಿಯನ್ ಜೊತೆ ತ್ರಿಶಾ ಹತ್ತು ವರ್ಷದ ಹಿಂದೆ ಮದುವೆಯಾಗಬೇಕಿತ್ತು. ಇಬ್ಬರ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಆದರೆ ಆ ನಂತರ ಈ ಸಂಬಂಧ ಮುರಿದು ಬಿತ್ತು. ಆ ನಂತರ ರಾಣಾ ದಗ್ಗುಬಾಟಿ ಜೊತೆ ತ್ರಿಶಾ ಹೆಸರು ಥಳುಕು ಹಾಕಿಕೊಂಡಿತ್ತು. ಇಬ್ಬರು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಹೀಗೆ ಕಾಲ ಕಾಲಕ್ಕೆ ಪ್ರೀತಿ ಸಂಬಂಧಗಳ ವಿಚಾರದಲ್ಲಿ ಸುದ್ದಿಯಾಗುವ ತ್ರಿಶಾ ಸದ್ಯ ಮದುವೆಯಾಗುತ್ತಿರುವ ವದಂತಿಯನ್ನು ಮತ್ತೊಮ್ಮೆ ತಳ್ಳಿ ಹಾಕಿದ್ದಾರೆ.

More from Filmibeat

English summary
South actress Trisha Krishnan shuts down fresh rumors of her impending marriage to a Chandigarh businessman. Find out how she addressed the gossip with a single, sharp social media post.
Read more about: trisha rumours kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X