41ರ ಹರೆಯದಲ್ಲಿ ಮದುವೆಗೆ ಸಿದ್ಧವಾದ ತ್ರಿಶಾ, ಸದ್ದಿಲ್ಲದೇ ನಡೆದೇ ಹೋಯ್ತಾ ನಿಶ್ಚಿತಾರ್ಥ ಸಮಾರಂಭ..?
ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದಕ್ಕೆ ತ್ರಿಶಾ ಸುತ್ತ ಮುತ್ತ ಹರಡಿರುವ ಸುದ್ದಿ ಮತ್ತೊಂದು ಉದಾಹರಣೆ.
ಹೌದು, ಮೌನಂ ಪೇಸಿಯದೇ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ತ್ರಿಶಾ ಆ ನಂತರ ಮತ್ತೆ ಹಿಂದೆ ತಿರುಗಿ ನೋಡಲಿಲ್ಲ. ಒಂದಾದ ಮೇಲೊಂದು ಚಿತ್ರಗಳನ್ನು ಮಾಡುತ್ತ ತನ್ನದೇ ಛಾಪು ಮೂಡಿಸಿದ ತ್ರಿಶಾ ಕೇವಲ ತಮಿಳು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಲಿಲ್ಲ. ಬದಲಿಗೆ ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಕೂಡ ಅಭಿನಯಿಸಿದರು. ಅಭಿಮಾನಿಗಳ ಹೃದಯವನ್ನು ಗೆದ್ದರು. ಚಿತ್ರರಂಗಕ್ಕೆ ಬಂದು 25 ವಸಂತಗಳಾದರು ಕೂಡ ಇವತ್ತು ತ್ರಿಶಾ ಡಿಮ್ಯಾಂಡ್ ಕಡಿಮೆಯಾಗಿಲ್ಲ.

ಇಂಥಾ ತ್ರಿಶಾ ಸದ್ದು ಗದ್ದಲ ಮಾಡದೇ ಯಾರಿಗೂ ಹೇಳದೇ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಾ ಎನ್ನುವ ಅನುಮಾನ ಈಗ ಅನೇಕರನ್ನು ಕಾಡುತ್ತಿದೆ. ಯಾಕೆಂದರೆ ತ್ರಿಶಾ ಹಸಿರು ಬಣ್ಣದ ಸೀರೆಯನ್ನು ಧರಿಸಿ, ಮಲ್ಲಿಗೆ ಹೂವು ಮುಡಿದು ಕಂಗೊಳಿಸಿದ್ದಾರೆ. ವಿಶೇಷ ಅಂದರೆ ತ್ರಿಶಾ ಅವರ ಮುಡಿಗೆ ಯಾರೋ ಹೂ ಮುಡಿಸಿದ್ದಾರೆ. ಮುಖದಲ್ಲಿ ನಾಚಿಕೆ, ನವಿರಾದ ನಗು ಇದೆ. ಮೂಗುತಿಯಲ್ಲಿ ಅಂದವಾಗಿ ಕಾಣಿಸುತ್ತಿದ್ದಾರೆ. ಕೈ ಬೆರಳಿನಲ್ಲಿ ಆಕರ್ಷಕ ಉಂಗುರ ಹಾಕಿಕೊಂಡಿದ್ದಾರೆ. ಪ್ರೀತಿ ಯಾವಾಗಲೂ ಗೆಲ್ಲುತ್ತೆ ಎಂದು ಬರೆದುಕೊಂಡಿದ್ದಾರೆ.
ತ್ರಿಶಾ ಅವರ ಈ ರೂಪ ಮತ್ತು ಬರೆದುಕೊಂಡ ಸಾಲನ್ನು ನೋಡಿದ ಅನೇಕರು ತ್ರಿಶಾ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಮಾತನಾಡಲು ಶುರುಮಾಡಿದ್ದಾರೆ. ತ್ರಿಶಾ ಹಂಚಿಕೊಂಡ ಫೋಟೊವನ್ನು ರೀಪೋಸ್ಟ್ ಮಾಡುತ್ತಿದ್ದಾರೆ. ಫೋಟೊವನ್ನು ಮೆಚ್ಚಿಕೊಂಡು ಶುಭಾಶಯವನ್ನು ಕೂಡ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಕೋರುತ್ತಿದ್ದಾರೆ. ಹುಡುಗ ಯಾರು ಎನ್ನುವ ಪ್ರಶ್ನೆಯನ್ನು ಕೂಡ ಕೇಳುತ್ತಿದ್ದಾರೆ.
ಅಂದ್ಹಾಗೇ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಒಂದು ದಶಕದ ಹಿಂದೆಯೇ ತ್ರಿಶಾ ಮದುವೆಯಾಗಬೇಕಿತ್ತು. ಉದ್ಯಮಿ ವರುಣ್ ಮಣಿಯನ್ ಅವರ ಜೊತೆ ತ್ರಿಶಾ ಅವರ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ಮದುವೆಯಾಗಲು ತ್ರಿಶಾ ರೆಡಿಯಾಗಲಿಲ್ಲ. ಮದುವೆ ಮುರಿದು ಬಿದ್ದಿದ್ದೇಕೆ ಎನ್ನುವುದನ್ನು ಕೂಡ ಹೇಳಲಿಲ್ಲ.
ಹೀಗೆ ನಿಶ್ಚಿತಾರ್ಥ ಮುರಿದುಕೊಂಡ ತ್ರಿಶಾ ಆಗಾಗ ಇಳಯ ದಳಪತಿ ವಿಜಯ್ ಅವರ ಕಾರಣಕ್ಕೆ ಕೂಡ ಸುದ್ದಿಯಲ್ಲಿರುತ್ತಾರೆ.ತ್ರಿಶಾ ಮತ್ತು ಇಳಯ ದಳಪತಿ ನಡುವೆ ಅಕ್ರಮ ಸಂಬಂಧ ಇದೆ ಎಂದು ತಮಿಳುನಾಡಿನ ಜನ ಆಗಾಗ ಮಾತನಾಡಿಕೊಳ್ಳುತ್ತಿರುತ್ತಾರೆ. ವರ್ಷಾನುವರ್ಷಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ. ಎಷ್ಟರ ಮಟ್ಟಿಗೆ ಅಂದರೆ ತ್ರಿಶಾ ಅವರಿಗೆ ಮನ ಸೋತ ವಿಜಯ್ ತಮ್ಮ ಪತ್ನಿ ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೂಡ ಚೆನ್ನೈನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ.ಇದಕ್ಕೆ ಪೂರಕವಾಗಿ ತ್ರಿಶಾ ಮತ್ತು ವಿಜಯ್ ಹಾಗೇ ನಡೆದುಕೊಳ್ಳುತ್ತಾರೆ ಕೂಡ.
ಒಟ್ನಲ್ಲಿ ಸದ್ಯ ತ್ರಿಶಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ತ್ರಿಶಾ ನಿಶ್ಚಿತಾರ್ಥ ಸಮಾರಂಭ ಸದ್ದಿಲ್ಲದೇ ನಡೆದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಸೀರೆಯಲ್ಲಿ ಕಂಗೊಳಿಸುತ್ತಿರುವ ತ್ರಿಶಾ ಅವರ ಫೋಟೊ ಕೂಡ ವೈರಲ್ ಆಗಿದೆ. ನಿಜಕ್ಕೂ 41ರ ಹರೆಯದ ತ್ರಿಶಾ ಮದುವೆಯಾಗುವ ನಿರ್ಧಾರವನ್ನು ಮಾಡಿದ್ದಾರಾ ? ಹರಿದಾಡುತ್ತಿರುವ ಈ ಸುದ್ದಿ ನಿಜ ಆಗಿದ್ದೇ ಆದಲ್ಲಿ ತ್ರಿಶಾ ಕೈ ಹಿಡಿಯುತ್ತಿರುವ ಆ ಹುಡುಗ ಯಾರು ? ಎಂಬ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸದ್ಯದಲ್ಲಿಯೇ ಸಿಗುವ ನಿರೀಕ್ಷೆ ಇದೆ.


Click it and Unblock the Notifications











