ದಳಪತಿ ವಿಜಯ್ ಜೊತೆ ಸಂಬಂಧಕ್ಕೆ ಎಳ್ಳು-ನೀರು ? 42ರ ಹರೆಯದಲ್ಲಿ ಮದುವೆಗೆ ರೆಡಿಯಾದ ತ್ರಿಶಾ - ಅದೃಷ್ಟವಂತ ಯಾರು?

ಊಹಾಪೋಹ, ಗಾಳಿ ಸುದ್ದಿ, ಗ್ಲ್ಯಾಮರ್ ಪ್ರಪಂಚದಲ್ಲಿ ಮತ್ತು ಚಿತ್ರರಂಗದ ತಾರೆಯರ ಬದುಕಿನಲ್ಲಿ ತುಂಬಾನೇ ಕಾಮನ್ನು. ಅವರು ತಮ್ಮ ವ್ಯೆಯಕ್ತಿಕ ಜೀವನದಲ್ಲಿ ಒಂದು ಬೊಂಬೆ ಜೊತೆ ಆಟ ಆಡಿದರೂ ಕೂಡ ಅದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇದೆಲ್ಲ ಗೊತ್ತಿದ್ದರು ಕೂಡ ಕೆಲವರು ಇಲ್ಲಿ ಬದುಕು ಮುನ್ನಡೆಸುತ್ತಿದ್ದಾರೆ. ಯಾರು ಏನೇ ಅಂದರೂ ಯಾವುದಕ್ಕೂ ಕೇರ್ ಮಾಡದೇ ಬದುಕುತ್ತಿದ್ದಾರೆ.

ಉದಾಹರಣೆಗೆ ಗ್ಲಾಮರ್ ಗೊಂಬೆ ತ್ರಿಶಾ ಮತ್ತು ಇಳಯ ದಳಪತಿ ವಿಜಯ್. ಹೌದು, ತ್ರಿಶಾ ಮತ್ತು ಇಳಯ ದಳಪತಿ ವಿಜಯ್ ನಡುವೆ ಅಕ್ರಮ ಸಂಬಂಧ ಇದೆ ಎಂಬ ಮಾತು ಇಂದು, ನಿನ್ನೆಯದ್ದಲ್ಲ. ವರ್ಷಾನು ವರ್ಷಗಳಿಂದ ಈ ಮಾತು ಕೇಳಿ ಬರುತ್ತಾನೇ ಇದೆ.

Trisha Set To Marry Soon Parents Approve Chandigarh Businessman Over Thalapathy Vijay Rumours

ಇಬ್ಬರ ಸಂಬಂಧದ ಕುರಿತು ಎಷ್ಟರ ಮಟ್ಟಿಗೆ ಹಲವರಿಗೆ ಅನುಮಾನ ಇದೆ ಅಂದರೆ ತ್ರಿಶಾ ಅವರಿಗೆ ಮನ ಸೋತ ವಿಜಯ್ ತಮ್ಮ ಪತ್ನಿ ಸಂಗೀತಾ ಅವರಿಗೆ ವಿಚ್ಛೇದನವನ್ನು ನೀಡಲು ಮುಂದಾಗಿದ್ದಾರೆ ಎನ್ನುವ ಮಾತು ಕೂಡ ಚೆನ್ನೈನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತೆ. ಇನ್ನೇನು ತ್ರಿಶಾ ಮತ್ತು ವಿಜಯ್ ಮದುವೆಯಾಗಿಯೇ ಬಿಡುತ್ತಾರೆ ಎಂಬಂತೆ ಚರ್ಚೆ ನಡೆಯುತ್ತೆ.

ಇದಕ್ಕೆ ಪೂರಕವಾಗಿ ತ್ರಿಶಾ ಮತ್ತು ವಿಜಯ್ ಹಾಗೇ ನಡೆದುಕೊಳ್ಳುತ್ತಾರೆ ಕೂಡ. ಹಲವು ಕಡೆ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಒಟ್ಟಿಗೆ ಪ್ರವಾಸಕ್ಕೆ ತೆರಳುತ್ತಾರೆ. ಇತ್ತೀಚಿನ ದಿನಗಳಲ್ಲಂತೂ ತಮಿಳುನಾಡಿನ ಜನ ವಿಜಯ್ ಅವರನ್ನು ಅವರ ಪತ್ನಿ ಸಂಗೀತಾ ಅವರಿಗಿಂತ ಹೆಚ್ಚು ತ್ರಿಶಾ ಅವರ ಜೊತೆಯಲ್ಲಿಯೇ ನೋಡಿದ್ದಾರೆ.

ಆದರೆ ಈಗ ಈ ಸಂಬಂಧಕ್ಕೆ ತ್ರಿಶಾ ಎಳ್ಳು ನೀರು ಬಿಡುವ ಮನಸ್ಸು ಮಾಡಿದಂತೆ ಇದೆ. ವಿಜಯ್ ಮತ್ತು ತಮ್ಮ ಸಂಬಂಧದ ಕುರಿತು ಕೇಳಿ ಬರುತ್ತಿರುವ ಅಂತೆ ಕಂತೆಗಳಿಗೆಲ್ಲಾ ಬ್ರೇಕ್ ಹಾಕಲು ಮುಂದಾದಂತೆ ಇದೆ. ಇದಕ್ಕೆ ಪೂರಕವಾಗಿ ಸದ್ಯ ತ್ರಿಶಾ ಮದುವೆಯ ಸುದ್ದಿ ಸದ್ದು ಮಾಡಲು ಶುರು ಮಾಡಿದೆ. ಮನೆಯವರು ನೋಡಿದ ಹುಡುಗನ ಜೊತೆ ತ್ರಿಶಾ ಮದುವೆಯಾಗುತ್ತಿದ್ದಾರೆ ಎಂದು ''ಸಿಯಾಸತ್'' ವೆಬ್ ಸೈಟ್ ವರದಿಯನ್ನು ಮಾಡಿದೆ.

ತ್ರಿಶಾ ಅವರನ್ನು ಮದುವೆಯಾಗುತ್ತಿರುವ ಚಂಡೀಗಢದ ಉದ್ಯಮಿ ಎಂದು ''ಸಿಯಾಸತ್'' ವರದಿಯನ್ನು ಮಾಡಿದ್ದು, ವರನ ಕುಟುಂಬದ ಜೊತೆ ತ್ರಿಶಾ ಅವರ ಪೋಷಕರಿಗೆ ಹಲವು ವರ್ಷದ ನಂಟಿದೆ ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. ತ್ರಿಶಾ ಕೈ ಹಿಡಿಯುತ್ತಿರುವ ಈ ಅದೃಷ್ಟವಂತ ಉದ್ಯಮಿಯ ಹೆಸರೇನು..? ಎನ್ನುವುದು ಈ ವರದಿಯಲ್ಲಿ ಬಹಿರಂಗವಾಗಿಲ್ಲವಾದರೂ ಪೋಷಕರ ಒತ್ತಾಸೆಯಂತೆ ತ್ರಿಶಾ ಕೂಡ ಮದುವೆಯಾಗಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಲಾಗಿದೆ.

trisha-set-to-marry-soon-parents-approve-chandigarh-businessman-over-thalapathy-vijay-rumours

ಅಂದ್ಹಾಗೇ ಇದೇ ವರ್ಷದ ಮಾರ್ಚ್‌ನಲ್ಲಿ ತ್ರಿಶಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಹಸಿರು ಬಣ್ಣದ ಸೀರೆಯನ್ನು ಧರಿಸಿ, ಮಲ್ಲಿಗೆ ಹೂವು ಮುಡಿದು ಕಂಗೊಳಿಸಿದ್ದರು. ವಿಶೇಷ ಅಂದರೆ ತ್ರಿಶಾ ಅವರ ಮುಡಿಗೆ ಯಾರೋ ಹೂ ಮುಡಿಸಿದಂತೆ ಭಾಸವಾಗುತ್ತಿತ್ತು. ಮುಖದಲ್ಲಿ ನಾಚಿಕೆ, ನವಿರಾದ ನಗು ಇದೆ. ಮೂಗುತಿಯಲ್ಲಿ ಅಂದವಾಗಿ ತ್ರಿಶಾ ಕಾಣಿಸುತ್ತಿದ್ದರು. ಕೈ ಬೆರಳಿನಲ್ಲಿ ಆಕರ್ಷಕ ಉಂಗುರ ಕೂಡ ಹಾಕಿಕೊಂಡಿದ್ದರು. ಇಷ್ಟೇ ಅಲ್ಲ ಪ್ರೀತಿ ಯಾವಾಗಲೂ ಗೆಲ್ಲುತ್ತೆ ಎಂದು ಬರೆದುಕೊಂಡಿದ್ದರು ತ್ರಿಶಾ.

ತ್ರಿಶಾ ಅವರ ಈ ರೂಪ ಮತ್ತು ಬರೆದುಕೊಂಡ ಸಾಲನ್ನು ನೋಡಿದ ಅನೇಕರು ತ್ರಿಶಾ ಸದ್ದಿಲ್ಲದೇ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಮಾತನಾಡಿಕೊಂಡಿದ್ದರು. ಈಗ ನೋಡಿದರೆ ಮದುವೆಯ ಸುದ್ದಿ ಹಬ್ಬಿದೆ. ಈ ಹಿನ್ನೆಲೆ ಮಾರ್ಚ್‌ನಲ್ಲಿ ನಿಜಕ್ಕೂ ತ್ರಿಶಾ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎನ್ನುವ ಅನುಮಾನ ಈಗ ಇವರ ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಾಗಿದೆ.

ಇನ್ನುಳಿದಂತೆ ಎಲ್ಲವೂ ಅಂದುಕೊಂಡತೆ ಆಗಿದ್ದರೆ ಒಂದು ದಶಕದ ಹಿಂದೆಯೇ ತ್ರಿಶಾ ಮದುವೆಯಾಗಬೇಕಿತ್ತು. ಉದ್ಯಮಿ ವರುಣ್ ಮಣಿಯನ್ ಅವರ ಜೊತೆ ತ್ರಿಶಾ ಅವರ ನಿಶ್ಚಿತಾರ್ಥ ಕೂಡ ನಡೆದಿತ್ತು. ಆದರೆ ಆ ನಂತರ ಅದೇನಾಯ್ತೋ ಗೊತ್ತಿಲ್ಲ. ಮದುವೆಯಾಗಲು ತ್ರಿಶಾ ರೆಡಿಯಾಗಲಿಲ್ಲ. ಮದುವೆ ಮುರಿದು ಬಿದ್ದಿದ್ದೇಕೆ ಎನ್ನುವುದನ್ನು ಕೂಡ ಹೇಳಲಿಲ್ಲ.

ಒಟ್ನಲ್ಲಿ ಸದ್ಯ ತ್ರಿಶಾ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. 42ರ ಹರೆಯದ ತ್ರಿಶಾ ಮದುವೆಯಾಗುವ ನಿರ್ಧಾರವನ್ನು ಮಾಡಿದ್ದಾರಾ ? ಹರಿದಾಡುತ್ತಿರುವ ಈ ಸುದ್ದಿ ನಿಜ ಆಗಿದ್ದೇ ಆದಲ್ಲಿ ತ್ರಿಶಾ ಕೈ ಹಿಡಿಯುತ್ತಿರುವ ಆ ಹುಡುಗ ಯಾರು ? ಹೆಸರೇನು..? ಎಂಬ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸದ್ಯದಲ್ಲಿಯೇ ಸಿಗುವ ನಿರೀಕ್ಷೆ ಇದೆ.

More from Filmibeat

English summary
All the details on Trisha's wedding news! Find out who the mysterious Chandigarh businessman is that her family has chosen over the constant buzz with Thalapathy Vijay.
Read more about: trisha rumours kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X