ಎಐ ಇಮೇಜ್ ಪೋಸ್ಟ್ ಮಾಡಿ ತ್ರಿಶಾ ನಾಟಕ? ವಿಜಯ್ ಜೊತೆ ಬರ್ತ್‌ಡೇ ಸೆಲೆಬ್ರೇಷನ್ ಸುಳ್ಳಾ?
ತಮಿಳುನಾಡು ಸಿಎಂ ವಿಜಯ್ ಹಾಗೂ ನಟಿ ತ್ರಿಶಾ ರಿಲೇಷನ್‌ಶಿಪ್ ವಿಚಾರ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಆಗುತ್ತಲೇ ಇದೆ. ಇತ್ತೀಚೆಗೆ ವಿಜಯ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಪ್ರತಿ ವರ್ಷ ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದ ತ್ರಿಶಾ ಈ ಬಾರಿ ಮೌನಕ್ಕೆ ಜಾರಿದ್ದರು. ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅಕೌಂಟ್ ಅನ್‌ಫಾಲೋ ಮಾಡಿದ್ದಾರೆ, ಇಬ್ಬರ ನಡುವೆ ಬ್ರೇಕಪ್ ಆಗಿದೆ ಎಂದು ಗುಲ್ಲಾಗಿತ್ತು. ಅಷ್ಟರಲ್ಲೇ ಸ್ಪೆಷಲ್ ಪೋಸ್ಟ್ ಮಾಡಿ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
ವಿಜಯ್ ಜೊತೆ ಕೇಕ್ ಕಟ್ ಮಾಡಿ ಬರ್ತ್‌ಡೇ ಸೆಲೆಬ್ರೇಟ್ ಮಾಡಿರುವ ಫೋಟೊ ವೈರಲ್ ಆಗ್ತಿದೆ. ಟೇಬಲ್ ಮೇಲೆ ನಾಲ್ಕೈದು ಬರ್ತ್‌ಡೇ ಕೇಕ್‌ಗಳಿವೆ. ಕೇಕ್ ನೋಡುತ್ತಿರುವ ವಿಜಯ್ ಅವರನ್ನು ನೋಡಿ ತ್ರಿಶಾ ಮಂದಹಾಸ ಬೀರಿರುವ ಫೋಟೊ ಇದು. ಪ್ರತಿಬಾರಿ ವಿಜಯ್ ಜೊತೆಗಿನ ಫೋಟೊ ಪೋಸ್ಟ್ ಮಾಡಿ ತ್ರಿಶಾ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದರು. ಈ ಬಾರಿ ಒಟ್ಟಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿರುವ ಫೋಟೊ ಹಾಕಿದ್ದಾರೆ. ಇದೇ ಕಾರಣಕ್ಕೆ ಪೋಸ್ಟ್ ಮಾಡುವುದು ಕೊಂಚ ತಡವಾಗಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಆ ಫೋಟೊ ನಿಜನಾ? ಎಐ ಸೃಷ್ಟಿನಾ ಎನ್ನುವ ಚರ್ಚೆ ಶುರುವಾಗಿದೆ.

ವಿಜಯ್ ಜೊತೆ ತ್ರಿಶಾ ಹೀಗೆ ಕೇಕ್ ಕಟ್ ಮಾಡಿರುವುದು ಸುಳ್ಳು, ಎಐ ಬಳಿಸಿ ಫೋಟೊ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಬ್ರೇಕಪ್ ಎಂದು ಹರಡಿದ್ದ ವದಂತಿಗೆ ತೆರೆ ಎಳೆಯಲು ಹೀಗೆ ಮಾಡಿದ್ದಾರೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಆ ಫೋಟೊ ನಿಜಾನಾ? ಎಐ ಜನರೇಟೆಡ್ ಫೋಟೊನಾ ಎಂದು ಕಂಡು ಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. AI Image Detector ಆಪ್‌ಗಳಲ್ಲಿ ಫೋಟೊ ಅಪ್‌ಲೋಡ್ ಮಾಡಿ ಚೆಕ್ ಮಾಡುತ್ತಿದ್ದಾರೆ. ಗಾಯಕಿ ಸುಚಿತ್ರಾ ಕೂಡ ಇದು ಎಐ ಇಮೇಜ್ ಎಂದು ಕಾಮೆಂಟ್ ಮಾಡಿರುವುದು ವೈರಲ್ ಆಗ್ತಿದೆ.
ಸುಚಿ ಲೀಕ್ಸ್ ವಿವಾದದಿಂದ ಗಾಯಕಿ ಸುಚಿತ್ರಾ ರಾಮದುರೈ ಭಾರೀ ಚರ್ಚೆ ಹುಟ್ಟುಹಾಕಿದ್ದರು. ಮೊದಲಿನಿಂದಲೂ ತಮಿಳು ಚಿತ್ರರಂಗದ ಕೆಲ ನಟ, ನಟಿಯರ ಬಗ್ಗೆ ಆಕೆ ಆರೋಪ ಮಾಡುತ್ತಾ ಬರ್ತಿದ್ದಾರೆ. ಅದರಲ್ಲೂ ತ್ರಿಶಾ ಹಾಗೂ ಧನುಷ್ ಬಗ್ಗೆ ಕೊಂಚ ಖಾರವಾಗಿಯೇ ಮಾತನಾಡುತ್ತಿದ್ದಾರೆ. ವಿಜಯ್ ಹಾಗೂ ತ್ರಿಶಾ ರಿಲೇಶನ್‌ಶಿಪ್ ಬಗ್ಗೆ ಕೂಡ ಆಕೆಯ ಕಾಮೆಂಟ್ಸ್ ವೈರಲ್ ಆಗಿತ್ತು. ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅಕೌಂಟ್ ಅನ್ನು ತ್ರಿಶಾ ಫಾಲೋ ಮಾಡ್ತಿಲ್ಲ ಎನ್ನುವುದು ನಿಜ. ಆದರೆ ಇಬ್ಬರ ನಡುವೆ ಬ್ರೇಕಪ್ ಎನ್ನುವುದೆಲ್ಲಾ ಸುಳ್ಳು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ವಿಜಯ್ ಇಂತಹ ಶರ್ಟ್ ಹಾಕಲ್ಲ.. ಶರ್ಟ್ ನೈಜವಾಗಿ ಕಾಣ್ತಿಲ್ಲ... ಟೇಬಲ್‌ಗೆ ಶರ್ಟ್ ಅಂಟಿಕೊಂಡಂತೆ ಕಾಣ್ತಿದೆ.. ಇದನ್ನೆಲ್ಲಾ ನೋಡಿದ್ರೆ ಎಐ ಫೋಟೊ ಎನಿಸುತ್ತದೆ. ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ವಿಜಯ್ ಭಾಗಿ ಆಗಿರುವ ಫೋಟೊ ಬಳಸಿ ಎಐ ಫೋಟೊ ಕ್ರಿಯೇಟ್ ಮಾಡಿದಂತೆ ಕಾಣ್ತಿದೆ ಎಂದು ಸುಚಿತ್ರಾ ಹೇಳಿದ್ದಾರೆ. ವಿಜಯ್ ಹಾಗೂ ಸಂಗೀತಾ ದಂಪತಿಗೆ ಕಾನೂನಾತ್ಮಕವಾಗಿ ಡಿವೋರ್ಸ್ ಇನ್ನು ಸಿಕ್ಕಿಲ್ಲ. ಮತ್ತೊಂದು ಕಡೆ ಇಬ್ಬರೂ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದಾರೆ ಎನ್ನುವ ಅಂತೆಕಂತೆ ಸುದ್ದಿ ಹರಿದಾಡ್ತಿದೆ. ಅದೆಲ್ಲದರ ನಡುವೆ ತ್ರಿಶಾ ಹೀಗೆ ಫೋಟೊ ಹಾಕುವುದು ಸರಿಯಲ್ಲ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ತ್ರಿಶಾ ಇಷ್ಟು ಕೀಳುಮಟ್ಟಕ್ಕೆ ಇಳಿಯುತ್ತಾರೆ ಎಂದುಕೊಂಡಿರಲಿಲ್ಲ. ವಿಜಯ್‌ಗೆ ಇಬ್ಬರು ಮಕ್ಕಳಿದ್ದಾರೆ. ಅದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ತ್ರಿಶಾ ನಡೆದುಕೊಳ್ಳಬೇಕು. ಹೀಗೆ ಫೋಟೊ ಪೋಸ್ಟ್ ಮಾಡಿ ಏನು ಸಾಧಿಸಿದರು ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications