ನನಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ, ಕಣ್ಣೀರು ಹಾಕಿದ ನಟಿ..!

ಬಣ್ಣದ ಪ್ರಪಂಚದಲ್ಲಿ ಅನೇಕ ನಾಯಕಿಯರು ಸಹಜ ಸೌಂದರ್ಯಕ್ಕೆ ಸರಳ ಸಾಧನೆಗಳ ಮೊರೆ ಹೋಗುತ್ತಾರೆ. ಆದರೂ ಕೂಡ ಕೆಲವೊಮ್ಮೆ ಜೀವನ ಶೈಲಿ, ಆಹಾರ ಕ್ರಮದಲ್ಲಾಗುವ ವ್ಯತ್ಯಾಸ, ಕಾಲ ಕಾಲಕ್ಕೆ ದೇಹದಲ್ಲಿ ಆಗುವ ಹಾರ್ಮೋನ್‌ಗಳ ಏರುಪೇರಿಂದ ದೇಹದ ಸೌಂದರ್ಯದಲ್ಲಿ ವ್ಯತ್ಯಾಸ ಕಾಣಿಸುತ್ತೆ. ಇದನ್ನರಿಯದ ಅನೇಕರು ಸುಖಾ ಸುಮ್ಮನೆ ಸೆಲೆಬ್ರೀಟಿಗಳಿಗೆ ಪ್ರಶ್ನೆಗಳನ್ನು ಮಾಡುತ್ತಾರೆ. ದೇಹಾಕೃತಿ ಎಂಬ ತೀರಾ ವೈಯಕ್ತಿಕ ವಿಷಯವನ್ನು

ಟೀಕಿಸಿ ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತಾರೆ. ಇನ್ನು ಕೆಲವರು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೀರಾ ಎಂಬ ಪ್ರಶ್ನೆಯನ್ನು ಕೂಡ ಮಾಡುತ್ತಾರೆ. ಸಾಮಾನ್ಯವಾಗಿ ಈ ತರಹದ ಪ್ರಶ್ನೆಗಳು ಎದುರಾದಾಗ ಅನೇಕರು ಸುಮ್ಮನಾಗುತ್ತಾರೆ. ಯಾಕೆಂದರೆ ಮಾತನಾಡಿ ಪ್ರಯೋಜನ ಇಲ್ಲ ಎನ್ನುವುದು ಅವರ ಭಾವನೆ.

trolled-and-targeted-pavithra-lakshmi-responds-to-plastic-surgery-buzz-with-raw-emotional-postactr

ಆದರೆ, ಇನ್ನು ಕೆಲವರು ತಮ್ಮ ಬಗ್ಗೆ ಇಲ್ಲ ಸಲ್ಲದ ಮಾತು ಕೇಳಿ ಬಂದಾಗ ಪಿತ್ತ ನೆತ್ತಿಗೇರಿಸಿಕೊಂಡು ಕೆಂಡ ಕಾರುತ್ತಾರೆ. ಇದಕ್ಕೆ ಪವಿತ್ರಾ ಲಕ್ಷ್ಮಿ ಸದ್ಯದ ಉದಾಹರಣೆ.

ಹೌದು, ಪವಿತ್ರಾ ಲಕ್ಷ್ಮಿ, ಓ ಕಾದಲ್ ಕಣ್ಮಣಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಚೆಲುವೆ. ಆ ನಂತರ ನಾ ಸೇಕರ್, ಉಲ್ಲಾಸಂ, ಅದೃಷ್ಯಂ, ಯುಗಿ ಚಿತ್ರಗಳ ಮೂಲಕ ತಮಿಳುನಾಡು ಮಾತ್ರವಲ್ಲದೇ ಕೇರಳದಲ್ಲಿ ಕೂಡ ಮನೆ ಮಾತಾದ ಪವಿತ್ರಾ ಲಕ್ಷ್ಮಿ ಕಳೆದ ವರ್ಷ ಓನ್ಸ್ ಅಪೋನ್ ಎ ಟೈಮ್ ಇನ್ ಮದ್ರಾಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

ಇಂಥಾ ಪವಿತ್ರಾ ಲಕ್ಷ್ಮಿ ಮುಖದಲ್ಲಿ ಮತ್ತು ದೇಹದಲ್ಲಿ ಇತ್ತೀಚೆಗೆ ಕೆಲ ಬದಲಾವಣೆಗಳಾಗಿವೆ. ಈ ಬದಲಾವಣೆಗಳನ್ನು ಗಮನಿಸಿದ ಅನೇಕರು ಪವಿತ್ರಾ ಲಕ್ಷ್ಮಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಪ್ಲ್ಯಾಸ್ಟಿಕ್ ದೇಹ, ಪ್ಲ್ಯಾಸ್ಟಿಕ್ ಮುಖ ಎಂದೆಲ್ಲ ಹೀಯಾಳಿಸುತ್ತಿದ್ದಾರೆ.

ಹೀಗಾಗಿಯೇ ನೊಂದು ಬೆಂದು ಹೋಗಿರುವ ಪವಿತ್ರಾ ಲಕ್ಷ್ಮಿ, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಮನದ ನೋವು ಹಂಚಿಕೊಂಡಿದ್ದಾರೆ. ಹೀಗೆಲ್ಲ ಮಾಡಬೇಡಿ, ಮಾತನಾಡಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಈ ಕುರಿತು ಬರೆದುಕೊಂಡಿರುವ ಪವಿತ್ರಾ ಲಕ್ಷ್ಮಿ, ನನ್ನ ದೇಹದಲ್ಲಿನ ಬದಲಾವಣೆ ಮತ್ತು ತೂಕದಲ್ಲಿ ಹೆಚ್ಚಳ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಮಾತುಗಳು ಕೇಳಿ ಬರುತ್ತಿವೆ. ಹಲವು ಬಾರಿ ಕಾಮೆಂಟ್ ಮತ್ತು ಸ್ಟೋರಿಗಳ ಮೂಲಕ ನಾನು ಸ್ಪಷ್ಟೀಕರಣ ನೀಡಿದರೂ ಕೂಡ ನನ್ನ ಬಗ್ಗೆ ಇನ್ನು ಅನೇಕರು ಮಾತನಾಡುತ್ತಲೇ ಇದ್ದಾರೆ ಎಂದು ಹೇಳಿದ್ದಾರೆ.

ಮುಂದುವರೆದು ಸುಖಾ ಸುಮ್ಮನೆ ಪ್ಲ್ಯಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇನೆ ಎಂದು ನನ್ನ ಬಗ್ಗೆ ಅಪಪ್ರಚಾರ ಮಾಡಬೇಡಿ ಎಂದು ಹೇಳಿರುವ ಪವಿತ್ರಾ ಲಕ್ಷ್ಮಿ, ಕೆಲವರು ತೀರಾ ಕೀಳಾಗಿ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ ಅದನ್ನು ಹೇಳುವುದು ಕೂಡ ಕಷ್ಟ ಎಂದು ಹೇಳಿದ್ದಾರೆ. ನಾನು ಯಾವತ್ತು ಪ್ಲಾಸ್ಟಿಕ್ ಸರ್ಜರಿಗೆ ಒಳಗಾಗಿಲ್ಲ ಸುಮ್ಮನೆ ಏನೇನೋ ಮಾತನಾಡಬೇಡಿ ಎಂದಿದ್ದಾರೆ.

ನನಗೆ ಗಂಭೀರ ಆರೋಗ್ಯ ಸಮಸ್ಯೆ ಇದೆ, ನನ್ನ ದೇಹದಲ್ಲಿನ ಬದಲಾವಣೆಗೆ ಇದೇ ಪ್ರಮುಖ ಕಾರಣವೆಂದಿರುವ ಪವಿತ್ರಾ ಲಕ್ಷ್ಮಿ ನಾನು ಸೂಕ್ತ ಚಿಕಿತ್ಸೆಯನ್ನು ಸದ್ಯ ಪಡೆಯುತ್ತಿದ್ದೇನೆ, ದಯವಿಟ್ಟು ಅರ್ಥ ಮಾಡಿಕೊಳ್ಳಿ ನಿಮ್ಮ ಮನರಂಜನೆಗಾಗಿ ನನ್ನ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಬರೆಯಬೇಡಿ, ವದಂತಿಗಳನ್ನು ಹಬ್ಬಿಸಬೇಡಿ, ನನಗೆ ನನ್ನದೇ ಆದ ಜೀವನ ಇದೆ, ನನ್ನ ಹೆಸರು ಹಾಳು ಮಾಡಬೇಡಿ, ನನ್ನ ಭವಿಷ್ಯಕ್ಕೆ ಕೊಡಲಿ ಪೆಟ್ಟು ಹಾಕಬೇಡಿ ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ. ಆದಷ್ಟು ಬೇಗ ಗುಣಮುಖಳಾಗಿ ನಾನು ನಿಮ್ಮ ಮುಂದೆ ಮತ್ತೆ ಬರುತ್ತೇನೆ ಎಂದು ಕೂಡ ಪವಿತ್ರಾ ಲಕ್ಷ್ಮಿ ತಮ್ಮ ಬರಹದಲ್ಲಿ ಬರೆದುಕೊಂಡಿದ್ದಾರೆ.

ಇನ್ನುಳಿದಂತೆ ಪವಿತ್ರಾ ಲಕ್ಷ್ಮಿ ಟೈಮ್ ಎನ್ನಾ ಬಾಸ್ ಎಂಬ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಕೋಕು ವಿತ್ ಕೊಮಾಲಿಯಲ್ಲಿ ಸ್ಫರ್ಧಿಯಾಗಿ ಕೂಡ ಭಾಗವಹಿಸಿದ್ದ ಪವಿತ್ರಾ ಲಕ್ಷ್ಮಿ, ಈ ರಿಯಾಲಿಟಿ ಶೋದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ.

More from Filmibeat

English summary
Pavithra Lakshmi, known for films like Naai Sekar, Yugi, and Jigiri Dosthu, has dismissed plastic surgery rumours as baseless and hurtful. The actress, who rose to fame through a reality show, revealed she is battling a health issue and requested privacy from the media and public
Read more about: plastic surgery actress kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X