For Quick Alerts
  ALLOW NOTIFICATIONS  
  For Daily Alerts

  'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?

  |

  ತಮಿಳಿನ ಸ್ಟಾರ್ ನಟ ವಿಜಯ್‌ಗೆ ದೊಡ್ಡ ಅಭಿಮಾನಿ ವರ್ಗವಿದೆ. ಭಾರಿ ಸಂಖ್ಯೆಯ ಅಭಿಮಾನಿಗಳ ಜೊತೆಗೆ ಹೇಟರ್ಸ್ ಸಹ ದೊಡ್ಡ ಸಂಖ್ಯೆಯಲ್ಲಿಯೇ ಇದ್ದಾರೆ. ಅದರಲ್ಲಿಯೂ ಅಜಿತ್ ಅಭಿಮಾನಿಗಳಿಗೆ ವಿಜಯ್ ಅನ್ನು ಟ್ರೋಲ್ ಮಾಡುವುದೆಂದರೆ ಎಲ್ಲಿಲ್ಲದ ಪ್ರೀತಿ.

  ಇದೀಗ ನಿನ್ನೆಯಷ್ಟೆ ಅಜಿತ್ ನಟನೆಯ ಹೊಸ ಸಿನಿಮಾ 'ತುಣಿವು' ಸಿನಿಮಾದ ಟೀಸರ್ ಬಿಡುಗಡೆ ಆಗಿದೆ. ಅದರ ಬೆನ್ನಲ್ಲೆ ನಟ ವಿಜಯ್‌ರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ ಅಜಿತ್ ಅಭಿಮಾನಿಗಳು, ಈ ಬಾರಿ ಇದಕ್ಕೆ ನಟ ಸೂರ್ಯ ಅಭಿಮಾನಿಗಳು ಸಹ ಸೇರಿಕೊಂಡಿದ್ದಾರೆ.

  ವಿಜಯ್‌ರನ್ನು ಟ್ರೋಲ್ ಮಾಡಲು ಕಾರಣವೂ ಇದೆ. ಅದೆಂದರೆ ಅವರ ಕ್ಯಾಮಿಯೋ ಪ್ರೀತಿ. ನಟ ವಿಜಯ್ ಇದೀಗ ಶಾರುಖ್ ಖಾನ್ ಅನ್ನು ತಮ್ಮ ಹೊಸ ಸಿನಿಮಾಕ್ಕೆ ಕರೆ ತರುತ್ತಿದ್ದಾರೆ. ಜೊತೆಗೆ ತಾವೂ ಸಹ ಶಾರುಖ್ ಖಾನ್‌ರ ಹೊಸ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ವಿಜಯ್‌ರನ್ನು ಟ್ರೋಲ್ ಮಾಡಲು ಪ್ರಮುಖ ಕಾರಣ.

  ವಿಜಯ್ ವಿರುದ್ಧ ಸತತ ಟ್ರೋಲಿಂಗ್

  ವಿಜಯ್ ವಿರುದ್ಧ ಸತತ ಟ್ರೋಲಿಂಗ್

  'ವಿಜಯ್‌ ಕ್ಯಾಮಿಯೋ ಬೆಗ್ಗರ್' (ಅತಿಥಿ ಪಾತ್ರಕ್ಕೆ ಭಿಕ್ಷೆ ಬೇಡುವ ವಿಜಯ್) ಎಂಬ ಹ್ಯಾಷ್‌ಟ್ಯಾಗ್‌ ಟ್ವಿಟ್ಟರ್‌ನಲ್ಲಿ ಸತತವಾಗಿ ಟ್ರೆಂಡ್ ಆಗುತ್ತಿದ್ದು, ಶಾರುಖ್ ಖಾನ್ ಅನ್ನು ತಮ್ಮ ಹೊಸ ಸಿನಿಮಾಕ್ಕೆ ಕರೆ ತರುತ್ತಿರುವುದಕ್ಕೆ ವಿಜಯ್‌ರನ್ನು ಟ್ರೋಲ್ ಮಾಡಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವಾಗಿ ಹಲವು ಮೀಮ್‌ಗಳನ್ನು ಹರಿಬಿಡಲಾಗುತ್ತಿದೆ. ಜೊತೆಗೆ ವಿಜಯ್‌ರ ಬೋಳು ತಲೆಯ ಚಿತ್ರಗಳನ್ನು ಹಂಚಿಕೊಂಡು, ವಿಜಯ್ ವಿಗ್‌ ಹಾಕಿಕೊಂಡು ಬೋಳು ತಲೆ ಮುಚ್ಚಿಕೊಳ್ಳುತ್ತಾರೆ ಎಂದು ಹೀಯಾಳಿಸಲಾಗುತ್ತಿದೆ.

  'ವಾರಿಸು' ಸಿನಿಮಾ ಗೆಲ್ಲಿಸಿಕೊಳ್ಳಲು ವಿಜಯ್ ಯತ್ನ

  'ವಾರಿಸು' ಸಿನಿಮಾ ಗೆಲ್ಲಿಸಿಕೊಳ್ಳಲು ವಿಜಯ್ ಯತ್ನ

  'ಬೀಸ್ಟ್' ಸಿನಿಮಾ ಅಟ್ಟರ್ ಫ್ಲಾಪ್ ಆದ ಬಳಿಕ ತಮ್ಮ ಮುಂದಿನ ಸಿನಿಮಾ 'ವಾರಿಸು' ಅನ್ನು ಗೆಲ್ಲಿಸಿಕೊಳ್ಳಲೇ ಬೇಕು ಎಂದು ಜಿದ್ದಿಗೆ ಬಿದ್ದಿರುವ ವಿಜಯ್, ಶಾರುಖ್ ಖಾನ್ ಅನ್ನು ಸಿನಿಮಾದಲ್ಲಿ ಅತಿಥಿ ಪಾತ್ರಕ್ಕೆಂದು ಕರೆತಂದಿದ್ದಾರೆ ಎಂದು ಹಲವರು ಟ್ರೋಲರ್‌ಗಳು ಟ್ರೋಲ್ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ತಮ್ಮ ತಾರಾ ಮೌಲ್ಯವನ್ನು ಹೆಚ್ಚಿಸಿಕೊಳ್ಳುವ ಕಾರಣದಿಂದ ವಿಜಯ್, ಶಾರುಖ್ ಖಾನ್ ನಟಿಸುತ್ತಿರುವ ಹೊಸ ಸಿನಿಮಾ 'ಜವಾನ್'ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

  'ವಿಕ್ರಂ' ಸಿನಿಮಾದಲ್ಲಿ ಸೂರ್ಯ ಪಾತ್ರ ಸೂಪರ್ ಹಿಟ್ ಆಗಿತ್ತು

  'ವಿಕ್ರಂ' ಸಿನಿಮಾದಲ್ಲಿ ಸೂರ್ಯ ಪಾತ್ರ ಸೂಪರ್ ಹಿಟ್ ಆಗಿತ್ತು

  'ವಿಕ್ರಂ' ಸಿನಿಮಾದಲ್ಲಿ ಸೂರ್ಯ ಮಾಡಿರುವ ಅತಿಥಿ ಪಾತ್ರವನ್ನು ಉದಾಹರಣೆಯಾಗಿ ನೀಡಿಯೂ ಕೆಲವರು ವಿಜಯ್ ಅನ್ನು ಟ್ರೋಲ್ ಮಾಡುತ್ತಿದ್ದು, 'ಅತಿಥಿ ಪಾತ್ರವೆಂದರೆ 'ವಿಕ್ರಂ' ಸಿನಿಮಾದಲ್ಲಿ ಸೂರ್ಯ ಮಾಡಿದ್ದ ಪಾತ್ರ (ರೋಲೆಕ್ಸ್ ಪಾತ್ರ) ಅದನ್ನು ಮೀರಿಸಲು ಇನ್ಯಾರಿಂದಲೂ ಸಾಧ್ಯವಿಲ್ಲ'' ಎಂದಿದ್ದಾರೆ. ಕಮಲ್ ಹಾಸನ್‌ರ 'ವಿಕ್ರಂ' ಸಿನಿಮಾದಲ್ಲಿ ಸೂರ್ಯ ನಿರ್ವಹಿಸಿದ್ದ ರೋಲೆಕ್ಸ್‌ ಅತಿಥಿ ಪಾತ್ರ ಸೂಪರ್ ಡೂಪರ್ ಹಿಟ್ ಆಗಿತ್ತು. ಇಡೀ ಸಿನಿಮಾದ ಮೌಲ್ಯವನ್ನು ಕೆಲವೇ ನಿಮಿಷಗಳಲ್ಲಿ ಸೂರ್ಯ ತಮ್ಮ ಅದ್ಭುತ ಎಂಟ್ರಿ, ನಟನೆ ಹಾಗೂ ಹಿನ್ನೆಲೆ ಸಂಗೀತದಿಂದ ಎತ್ತಿ ನಿಲ್ಲಿಸಿದ್ದರು.

  'ವಾರಿಸು' ಸಿನಿಮಾದಲ್ಲಿ ವಿಜಯ್ ನಟನೆಯ

  'ವಾರಿಸು' ಸಿನಿಮಾದಲ್ಲಿ ವಿಜಯ್ ನಟನೆಯ

  ವಿಜಯ್ ಪ್ರಸ್ತುತ 'ವಾರಿಸು' ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದಿಲ್ ರಾಜು ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ನಿರ್ದೇಶನವನ್ನು ವಂಶಿ ಪೈಡಪಲ್ಲಿ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಇದೇ ಸಿನಿಮಾದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಆ ಸಿನಿಮಾದ ಬಳಿಕ 'ವಿಕ್ರಂ' ನಿರ್ದೇಶಕ ಲೋಕೇಶ್ ಕನಕರಾಜ್ ನಿರ್ದೇಶನದ ಸಿನಿಮಾದಲ್ಲಿ ವಿಜಯ್ ನಟಿಸಲಿದ್ದಾರೆ.

  English summary
  Heavy trolling happening against Tamil star hero Vijay. CameoBeggarVijay is trending on twitter. Shah Rukh Khan doing cameo in Vijay's upcoming movies. Vijay also doing cameo in SRK's Jawan movie.
  Friday, September 23, 2022, 14:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X