ಕೊನೆಗೂ ಡಿವೋರ್ಸ್ ವಿವಾದದ ಬಗ್ಗೆ ಮೌನ ಮುರಿದ ದಳಪತಿ ವಿಜಯ್; 'ನೋವಿನ' ಮಾತು ಆಡಿದ ನಟ
ತಮಿಳು ನಟ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ವಾರದ ಹಿಂದೆ ಸಂಗೀತಾ ಡಿವೋರ್ಸ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತಿ ವಿಜಯ್ ಅವರಿಗೆ ನಟಿಯೊಬ್ಬಳ ಜೊತೆ ಸಂಬಂಧವಿದೆ. ಇದರಿಂದ ನನಗೆ, ನನ್ನ ಮಕ್ಕಳಿಗೆ ಅವಮಾನವಾಗುತ್ತಿದೆ. ಹಾಗಾಗಿ ದೂರಾಗಲು ನಿರ್ಧರಿಸಿದ್ದೇವೆ ಎಂದಿದ್ದಾರೆ.
ಈ ಹಿಂದೆ ಕೂಡ ವಿಜಯ್ ಡಿವೋರ್ಸ್ ಬಗ್ಗೆ ವದಂತಿ ಹರಿದಾಡಿತ್ತು. ಆಗ ನಟಿ ತ್ರಿಶಾ ಜೊತೆ ವಿಜಯ್ ಹೆಸರು ತಳುಕು ಹಾಕಿಕೊಂಡಿತ್ತು. ಈಗ ಸಂಗೀತಾ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ತ್ರಿಶಾ ಬಗ್ಗೆ ಚರ್ಚೆ ಶುರುವಾಗಿತ್ತು. ವಿಜಯ್ ಹಾಗೂ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಲು ತ್ರಿಶಾ ಕಾರಣ ಎನ್ನುವ ಚರ್ಚೆ ನಡೀತಿದೆ. ಇದರ ಬೆನ್ನಲ್ಲೇ ವಿಜಯ್ ಹಾಗೂ ತ್ರಿಶಾ ಒಟ್ಟಿಗೆ ಒಂದೇ ಕಾರಿನಲ್ಲಿ ಬಂದು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದು ಚರ್ಚೆ ಹುಟ್ಟಾಕ್ಕಿದೆ. ಕೊನೆಗೂ ಈ ವಿವಾದದ ಬಗ್ಗೆ ವಿಜಯ್ ಮುರಿದಿದ್ದಾರೆ.

ಟಿವಿಕೆ ಪಕ್ಷ ಸ್ಥಾಪಿಸಿ ವಿಜಯ್ ತಮಿಳುನಾಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇಂದು(ಮಾರ್ಚ್ 7) ತಮ್ಮ ಪಕ್ಷದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಿದರು. ಸಾಕಷ್ಟು ಮಹಿಳೆಯರು ಈ ಸಮಾವೇಶದಲ್ಲಿ ಭಾಗಿ ಆಗಿದ್ದರು. ಪಕ್ಷದ ಪ್ರಣಾಳಿಕೆಯಲ್ಲಿ ಮಹಿಳೆಯರಿಗಾಗಿ 6 ಸ್ಕೀಮ್‌ಗಳನ್ನು ವಿಜಯ್ ಘೋಷಿಸಿದ್ದಾರೆ. ಇದೇ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾದ ವಿವಾದದ ಬಗ್ಗೆ ವಿಜಯ್ ಮಾತನಾಡಿದ್ದಾರೆ.
ನೇರವಾಗಿ ಏನನ್ನೂ ಹೇಳದೇ ವಿಜಯ್ ತಮ್ಮ ಅಭಿಮಾನಿಗಳು, ಕಾರ್ಯಕರ್ತರನ್ನು ಉದ್ದೇಶಿಸಿ. ಏನು ತಲೆ ಕೆಡಿಸಿಕೊಳ್ಳಬೇಡಿ. ಭರವಸೆಯಿಂದ ಇರಿ ಎಂದಿದ್ದಾರೆ. "ಸಾಕಷ್ಟು ಸಮಸ್ಯೆಗಳ ನಡುವೆ ಇತ್ತೀಚೆಗೆ ಒಂದಷ್ಟು ವಿಚಾರಗಳು ನಡೀತಿದೆ ಅಲ್ವಾ.. ಅದಕ್ಕಾಗಿ ನೀವೆಲ್ಲಾ ಹೋರಾಡುತ್ತಿರುವುದು ನೋಡಿದೆ. ಅದನ್ನು ನೋಡಿ ನನಗೆ ನೋವಾಗುತ್ತಿದೆ. ಅದೆಲ್ಲಾ ನಾನು ನೋಡ್ಕೊತ್ತೀನಿ. ನಾನು, ನೀವು ಎಲ್ಲಾ ಸೇರಿ ಮೊದಲು ಜನರ ಸಮಸ್ಯೆಗಳನ್ನು ನೋಡೋಣ" ಎಂದಿದ್ದಾರೆ.
ಮಾತು ಮುಂದುವರೆಸಿರುವ ವಿಜಯ್ "ತುಂಬಾ ಹರ್ಟ್ ಆಗಬೇಡಿ. ಅಷ್ಟು ಮುಖ್ಯ ಅಲ್ಲ ಅದು. ಕಾನ್ಫಿಡೆಂಟ್ ಆಗಿರಿ. ಒಳ್ಳೆಯದೇ ನಡೆಯುತ್ತೆ. ಗೆಲುವು ನಿಶ್ಚಿತ" ಎಂದು ಹೇಳಿದ್ದಾರೆ. ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ಬಗ್ಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆ ನಡೀತಿದೆ. ಕೆಲ ಅಭಿಮಾನಿಗಳು ವಿಜಯ್ ಬೆಂಬಲಕ್ಕೆ ನಿಂತಿದ್ದಾರೆ. ಅದು ಅವರ ವೈಯಕ್ತಿಕ ವಿಚಾರ, ನಿಮಗೇನು ಸಮಸ್ಯೆ.. ವಿಜಯ್ ಕದ್ದು ಮುಚ್ಚಿ ಓಡಾಡುತ್ತಿಲ್ಲ. ರಾಜಾರೋಷವಾಗಿ ಓಡಾಡುತ್ತಿದ್ದಾರೆ ಎಂದು ಟೀಕಿಸುವವರಿಗೆ ತಿರುಗೇಟು ನೀಡುತ್ತಿದ್ದಾರೆ.
ಬಹುತೇಕರು ವಿಜಯ್ ನಡೆಯನ್ನು ಒಪ್ಪಲು ಸಿದ್ಧರಿಲ್ಲ. ಜನನಾಯಕನಾಗಿ ಜನರ ಸೇವೆಗೆ ಬರುವವನು ತನ್ನ ಮನೆಯವರನ್ನೆ ಸರಿಯಾಗಿ ನೋಡಿಕೊಳ್ಳಲಿಲ್ಲ, ಇನ್ನು ರಾಜ್ಯವನ್ನು ಉದ್ಧಾರ ಮಾಡ್ತಾನಾ ಎಂದು ಟ್ರೋಲ್ ಮಾಡುತ್ತಿದ್ದಾರೆ. ಎದುರಾಳಿ ಪಕ್ಷಗಳಿಗೆ ಇದು ಒಳ್ಳೆ ಅಸ್ತ್ರವಾಗಿಬಿಟ್ಟಿದೆ.
ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ವಿಜಯ್ ಕಣ್ಣಿಟ್ಟಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದ್ದಾರೆ. ನಿಮ್ಮ ಕ್ಷೇತ್ರದ ಅಭ್ಯರ್ಥಿ ಅಲ್ಲ. ನನ್ನ ಮುಖ ನೋಡಿ ವೋಟ್ ಹಾಕಿ, ನಿಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತ ಹಾಕಿದ್ರೆ ನನಗೆ ಹಾಕಿದಂತೆ ಎಂದು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.
ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ವಿಜಯ್ ಮುಂದೆ ಸಿನಿಮಾಗಳಲ್ಲಿ ನಟಿಸಲ್ಲ ಎನ್ನಲಾಗ್ತಿದೆ. 'ಜನ ನಾಯಗನ್' ವಿಜಯ್ ನಟನೆಯ ಕೊನೆಯ ಸಿನಿಮಾ ಎನ್ನಲಾಗ್ತಿದೆ. ಒಂದು ವೇಳೆ ಪಾಲಿಟಿಕ್ಸ್‌ನಲ್ಲಿ ಸೋತರೆ ಮತ್ತೆ ಸಿನಿಮಾಗಳಲ್ಲಿ ನಟಿಸಬಹುದು ಎನ್ನುವ ಚರ್ಚೆ ನಡೀತಿದೆ. ಇದೆಲ್ಲದರ ನಡುವೆ ಎರಡು ತಿಂಗಳು ಕಳೆದರೂ 'ಜನ ನಾಯಗನ್' ಸಿನಿಮಾ ಮಾತ್ರ ಬಿಡುಗಡೆ ಆಗಲೇಯಿಲ್ಲ.


Click it and Unblock the Notifications











