For Quick Alerts
  ALLOW NOTIFICATIONS  
  For Daily Alerts

  ಮಕ್ಕಳ ಹೆಸರಲ್ಲಿರುವ ಟ್ವಿಟ್ಟರ್ ಖಾತೆ ಬಗ್ಗೆ ದಳಪತಿ ವಿಜಯ್ ಹೇಳಿದ್ದೇನು?

  |

  ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಮಕ್ಕಳಾದ ಜೇಸನ್ ಸಂಜಯ್ ಮತ್ತು ಮಗಳು ದಿವ್ಯಾ ಸಾಶಾ ಹೆಸರಿನಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದು, ಅಭಿಮಾನಿಗಳು ಸಾಕಷ್ಟು ಫಾಲೋ ಮಾಡಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಮಕ್ಕಳ ಟ್ವಿಟ್ಟರ್ ಖಾತೆ ವೈರಲ್ ಆಗುತ್ತಿದ್ದಂತೆ ವಿಜಯ್ ಶಾಕ್ ಆಗಿದ್ದಾರೆ.

  ತಕ್ಷಣ ಮಕ್ಕಳ ಹೆಸರಿನಲ್ಲಿರುವ ಟ್ವಿಟ್ಟರ್ ಖಾತೆ ಪರಿಶೀಲಿಸಿ, ಇದು ನಕಲಿ ಖಾತೆ ಎಂದು ಬಹಿರಂಗ ಪಡಿಸಿದ್ದಾರೆ. ವಿಜಯ್ ಕಡೆ ಪಿ ಆರ್ ಒ ಮಾಹಿತಿ ನೀಡಿ, ದಿವ್ಯಾ ಮತ್ತು ಸಂಜಯ್ ಇಬ್ಬರು ಟ್ವಿಟ್ಟರ್ ನಲ್ಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

  ಪಿ ಆರ್ ಒ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, "ದಳಪತಿ ವಿಜಯ್ ಮಕ್ಕಳಾದ ದಿವ್ಯಾ ಸಶಾ ಮತ್ತು ಜೇಸನ್ ಸಂಜಯ್ ಟ್ವಿಟ್ಟರ್ ನಲ್ಲಿ ಇಲ್ಲ. ಅವರ ಹೆಸರಿನಲ್ಲಿ ಇರುವ ಟ್ವಿಟ್ಟರ್ ಖಾತೆಗಳು ನಕಲಿ" ಎಂದು ಹೇಳಿದ್ದಾರೆ. ಬಳಿಕ ವಿಜಯ್ ಅಭಿಮಾನಿಗಳು ಟ್ವಿಟ್ಟರ್ ಖಾತೆಯ ಸ್ಕ್ರೀನ್ ಶಾಟ್ ತೆಗೆದು ನಕಲಿ ಎಂದು ಶೇರ್ ಮಾಡುತ್ತಿದ್ದಾರೆ.

  ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳನ್ನು ತೆರೆದು ಅಭಿಮಾನಿಗಳನ್ನು ವಂಚಿಸುವುದು ಇದೇ ಮೊದಲಲ್ಲ. ಅನೇಕ ಸೆಲೆಟ್ರಿಗಳ ಹೆಸರಿನಲ್ಲಿ ಫೇಕ್ ಖಾತೆ ತೆರೆದು ಅಭಿಮಾನಿಗಳನ್ನು ಮೋಸ ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದೀಗ ವಿಜಯ್ ಮಕ್ಕಳಿಗೂ ನಕಲಿ ಖಾತೆಗಳ ಕಾಟ ಶುರುವಾಗಿದೆ. ಸಂಜಯ್ ಖಾತೆಯಿಂದ ಕೆಲವು ವಿಡಿಯೋಗಳು ಮತ್ತು ಫೋಟೋಗಳನ್ನು ಹಂಚಿಕೊಳ್ಳಲಾಗಿದೆ. ಅಭಿಮಾನಿಗಳು ಇದು ವಿಜಯ್ ಮಕ್ಕಳ ಅಧಿಕೃತ ಖಾತೆ ಎಂದು ಭಾವಿಸಿ ಫಾಲೋ ಮಾಡಿ, ವಿಡಿಯೋ ಶೇರ್ ಮಾಡುತ್ತಿದ್ದಾರೆ.

  ಅಂದಹಾಗೆ ವಿಜಯ್ ಮಕ್ಕಳು ಇನ್ನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ವಿದ್ಯಾಭ್ಯಾಸದಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಪುತ್ರ ಜೇಸನ್ ಸಂಜಯ್ ಕೆನಡಾದಲ್ಲಿ ಸಿನಿಮಾ ಸಂಬಂಧಿಸಿದ ಕೋರ್ಸ್ ಮಾಡುತ್ತಿದ್ದರು. ಆದರೆ ಕೊರೊನಾ ಕಾರಣದಿಂದ ಕಳೆದ ವರ್ಷ ಚೆನ್ನೈಗೆ ವಾಪಸ್ ಆಗಿದ್ದಾರೆ.

  ವಿಜಯ್ ಪುತ್ರನ ಚಿತ್ರರಂಗದ ಎಂಟ್ರಿ ಬಗ್ಗೆ ಆಗಾಗ ಸುದ್ದಿ ವೈರಲ್ ಆಗುತ್ತಲೇ ಇರುತ್ತೆ. ಇತ್ತೀಚಿಗಷ್ಟೆ ತೆಲುಗಿನ ಸೂಪರ್ ಹಿಟ್ ಉಪ್ಪೇನಾ ಸಿನಿಮಾದ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ವಿಜಯ್ ತಂಡ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲ.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada

  ಇನ್ನು ವಿಜಯ್ ಸಿನಿಮಾ ವಿಚಾರಕ್ಕೆ ಬರುವುದಾದರೆ 'ದಳಪತಿ 65' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಪೂಜಾ ಮೊದಲ ಬಾರಿಗೆ ನಟ ವಿಜಯ್ ಜೊತೆ ನಟಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಜಾರ್ಜಿಯಾದಲ್ಲಿ ಮಾಡಿ ಮುಗಿಸಿದೆ ಸಿನಿಮಾತಂಡ.

  English summary
  Twitter account of Thalapathy Vijay's kids, PRO has clarified that those are fake account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X