ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ: ಕ್ಷಮೆಯಾಚಿಸಿದ ಶ್ರೀಲಂಕಾದ ವ್ಯಕ್ತಿ

ತಮಿಳು ನಟ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಬಂಧಿಸಿದಂತೆ ಆರೋಪಿ ರಿತಿಕ್ ರಾಜ್ ಕ್ಷಮೆಯಾಚಿಸಿದ್ದಾನೆ. ವಿಜಯ್ ಸೇತುಪತಿ ಮುತ್ತಯ್ಯ ಮುರಳೀಧರನ್ ಬಯೋಪಿಕ್ '800' ನಲ್ಲಿ ನಟಿಸುತ್ತಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ರಿತಿಕ್ ರಾಜ್ ಹೆಸರಿನ ಟ್ವಿಟ್ಟರ್ ಖಾತೆಯಿಂದ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ ಹಾಕಲಾಗಿತ್ತು.

ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ವಿಜಯ್ ಸೇತುಪತಿ ಅಭಿಮಾನಿಗಳು ಮುಗಿಬಿದ್ದಿದ್ದರು. ಆತನ ಟ್ವಿಟ್ಟರ್ ಹ್ಯಾಂಡಲ್ ಗೆ ರಿಪೋರ್ಟ್ ಮಾಡಿ ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದರು. ಪುಟ್ಟ ಮಗುವಿನ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ ಕಾಮುಕನನ್ನು ಬಂಧಸುವಂತೆ ಅಭಿಯಾನ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆತನಿಗೆ ಸಂಬಂಧ ಪಟ್ಟ ಐಪಿ ವಿಳಾಸವನ್ನು ಪತ್ತೆ ಹಚ್ಚಿದ್ದರು.

ವರದಿಯ ಪ್ರಕಾರ ಈ ವ್ಯಕ್ತಿ ಶ್ರೀಲಂಕಾಗೆ ಸೇರಿದವನಾಗಿದ್ದು ಚೆನ್ನೈ ಪೊಲೀಸರು ಆತನನ್ನು ಬಂಧಿಸಲು ಪ್ರಯತ್ನಿಸಿದ್ದಾರೆ. ಈ ನಡುವೆ ರಿತಿಕ್ ವಿಡಿಯೋ ಮೂಲಕ ಕ್ಷಮೆಯಾಚಿಸಿದ್ದಾನೆ ಎಂದು ಹೇಳಲಾಗುತ್ತಿದೆ.

ವಿಡಿಯೋದಲ್ಲಿ, "ಎಲ್ಲರೂ ನನ್ನನ್ನು ಕ್ಷಮಿಸಿ ಎಂದು ವಿನಂತಿಸುತ್ತೇನೆ. ನಾನು ಮಾಡಿದ ಅಪರಾಧ ಕ್ಷಮೆ ಇಲ್ಲ ಎಂದು ನನಗೆ ತಿಳಿದಿದೆ. ಈ ಕೊರೊನಾದಿಂದ ಏಕಾಏಕಿ ನಾನು ಕೆಲಸ ಕಳೆದುಕೊಂಡಿದ್ದೇನೆ. ಆ ಸಮಯದಲ್ಲಿ. ಶ್ರೀಲಂಕಾದಲ್ಲಿ ನಡೆದ ಯುದ್ಧದ ಬಗ್ಗೆ ವಿಜಯ್ ಸೇತುಪತಿ ನಟಿಸಲಿದ್ದಾರೆ ಎಂದು ನಾನು ಕೇಳಿದೆ." ಎಂದಿದ್ದಾನೆ.

Twitter User Apologizes To Vijay Sethupathi For Issuing Rape Threat Against Actors Daughter

"ಸಹೋದರ ವಿಜಯ್ ಸೇತುಪತಿ ಅವಿರಿಗೆ, ಜಗತ್ತಿನಲ್ಲಿ ವಾಸಿಸುವ ತಮಿಳು ಜನರಿಗೆ, ನನಗೆ ಸಹೋದರಿ ಆಗಿರುವ ವಿಜಯ್ ಸೇತುಪತಿ ಮಗಳಿಗೆ ಅವರ ಹೆಂಡತಿಗೆ ನಾನು ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ. ನನ್ನನ್ನು ನಿಮ್ಮ ಚಿಕ್ಕ ಸಹೋದರ ಎಂದು ಪರಿಗಣಿಸಿ ದಯವಿಟ್ಟು ನನ್ನನ್ನು ಕ್ಷಮಿಸಿ" ಎಂದಿದ್ದಾನೆ.

"ಇನ್ನು ಮುಂದೆ ಇಂಥ ತಪ್ಪನ್ನು ಮಾಡುವುದಿಲ್ಲ. ಜನರು ನನ್ನ ಮುಖವನ್ನು ಗುರುತಿಸಿದರೆ ನನ್ನ ಕುಟುಂಬದ ಭವಿಷ್ಯ ಹಾಳಾಗುತ್ತದೆ." ಎಂದು ಹೇಳಿರುವ ವಿಡಿಯೋವನ್ನು ಕಳುಹಿಸಿರುವುದಾಗಿ ವರದಿಯಾಗಿದೆ. ಚೆನ್ನೈ ಪೊಲೀಸರು ಮುಂದಿನ ಕ್ರಮ ನಿರ್ಧರಿಸುವ ಮೊದಲು ಈ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ವಿಜಯ್ ಸೇತುಪತಿ ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂದು ಕಾದುನೋಡಬೇಕು.

More from Filmibeat

English summary
Twitter user Apologizes to Vijay Sethupathi for issuing rape threat to Vijay Sethupathi's daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X