ವಿಜಯ್ ಮೊದಲ ರಾಜಕೀಯ ಸಮಾವೇಶಕ್ಕೆ ಹರಿದು ಬಂತು ಜನಸಾಗರ, ಇಬ್ಬರು ಸಾವು, ಕುಸಿದು ಬಿದ್ದ 120 ಮಂದಿ..!
ಇಳಯ ದಳಪತಿ ಎಂದೇ ಖ್ಯಾತರಾದವರು ವಿಜಯ್ ಸೇತುಪತಿ. ತಮ್ಮನ್ನು ತಾವು ಕೇವಲ ಚಿತ್ರರಂಗಕ್ಕೆ ಸೀಮಿತಗೊಳಿಸದೇ ವಿಜಯ್ ಮೊದಲಿಂದ ಸಮಾಜದ ಆಗುಹೋಗುಗಳ ಕುರಿತು ಮಾತನಾಡುತ್ತಾಲೇ ಬಂದಿದ್ದಾರೆ. ಕಾವೇರಿ ನೀರಿನ ಸಮಸ್ಯೆ, ಜಲ್ಲಿಕಟ್ಟು ಪ್ರತಿಭಟನೆ, ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶ, ನೀಟ್ ಪರೀಕ್ಷೆ ಸೇರಿ ಹಲವು ವಿಚಾರಗಳ ಕುರಿತು ವಿಜಯ್ ಧ್ವನಿ ಎತ್ತುತ್ತಾನೇ ಬಂದಿದ್ದಾರೆ. ಅಂದಿನಿಂದ ಇದೆಲ್ಲವನ್ನೂ ನೋಡಿದವರು ವಿಜಯ್ ರಾಜಕೀಯದೆಡೆ ಹೊರಳುತ್ತಾರೆ ಎಂದೇ ಅಂದುಕೊಂಡಿದ್ದರು. ಅದು ಕೂಡ ನಿಜಾ ಆಗಿದೆ.
ತಮ್ಮ ಪಕ್ಷಕ್ಕೆ 'ತಮಿಳಗ ವೆಟ್ರಿ ಕಳಗಂ' ಎಂದು ಹೆಸರಿಟ್ಟಿದ್ದಾರೆ. ಚುನಾವಣೆಯ ತಯಾರಿಯನ್ನು ನಡೆಸುತ್ತಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ವಿಜಯ್ ಇಂದು ಸಮಾವೇಶವನ್ನು ಮಾಡಿದ್ದಾರೆ. ಬಿಜೆಪಿ ಮತ್ತು ಡಿಎಂಕೆ ವಿರುದ್ಧ ಸಮರ ಸಾರಿದ್ದಾರೆ. ಆದರೆ ದುರಾದೃಷ್ಟ ವಿಜಯ್ ಈ ಸಮಾವೇಶವನ್ನು ಯಾವತ್ತು ಮರೆಯಲಾರದಂತಹ ದುರ್ಘಟನೆ ನಡೆದಿದೆ. ಪ್ರಾಣ ಹಾನಿಯಾಗಿದೆ.

ಹೌದು, ಇಂದು ವಿಕ್ರವಾಂಡಿಯಲ್ಲಿ ನಡೆದ ಸಮಾವೇಶಕ್ಕೆ ಜನ ಸಾಗರ ಹರಿದು ಬಂದಿತ್ತು. ಕೇವಲ ತಮಿಳುನಾಡು ಮಾತ್ರವಲ್ಲ ಅಕ್ಕ ಪಕ್ಕದ ರಾಜ್ಯದಿಂದ ಕೂಡ ವಿಜಯ್ ಅಭಿಮಾನಿಗಳು ಆಗಮಿಸಿದ್ದರು. ಲೆಕ್ಕಾಚಾರದ ಪ್ರಕಾರ 5 ಲಕ್ಷಕ್ಕೂ ಹೆಚ್ಚಿನ ಬೆಂಬಲಿಗರು ಮತ್ತು ಅಭಿಮಾನಿಗಳು ಬಂದು ಜಮಾಯಿಸಿದ್ದರು. ತಿರುಚಿರಾಪಳ್ಳಿಯಿಂದ ಚೆನ್ನೈಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ವಿಜಯ್ ಬೆಂಬಲಿಗರ ಕಾರು ಮತ್ತು ದ್ವಿಚಕ್ರ ಕಾರುಗಳಿಂದ ತುಂಬಿತ್ತು. ಹೆದ್ದಾರಿಯ ಇಕ್ಕೆಲಗಳಲ್ಲಿ ಕಟೌಟ್ ಮತ್ತು ಬ್ಯಾನರ್‌ಗಳನ್ನು ಹಾಕಲಾಗಿತ್ತು. ಈ ಕಾರಣಗಳಿಂದ ಹರಿದು ಬಂದ ಜನಸಾಗರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಈ ಕಾರಣದಿಂದ ಉಸಿರಾಟದ ತೊಂದರೆಯಿಂದಾಗಿ ಮತ್ತು ಡಿಹೈಡ್ರೆಷನ್‌ನಿಂದ 120 ಜನ ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಅದೃಷ್ಟವಶಾತ್ 300 ವೈದ್ಯರು ಮೊಕ್ಕಾಂ ಹೂಡಿದ್ದರು. 25 ಆಂಬುಲೆನ್ಸ್‌ಗಳು ಸ್ಥಳದಲ್ಲಿದ್ದವು. ಹೀಗಾಗಿ ಅವರಿಗೆ ಕೂಡಲೇ ಚಿಕಿತ್ಸೆಯನ್ನು ನೀಡಲಾಯಿತು ಎಂದು ವರದಿಯಾಗಿದೆ.
ಇನ್ನೂ.. ಇದೇ ಸಮಯದಲ್ಲಿ ಸಮಾವೇಶದಲ್ಲಿ ಭಾಗಿಯಾಗಲು ತೆರಳುವ ಸಮಯದಲ್ಲಿ ಇಬ್ಬರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಚೆನ್ನೈನ ಸೆಂಟ್ರಲ್ ಮೂರ್ ಮಾರ್ಕೆಟ್‌ನಿಂದ ತೇನಂಪೇಟ್ ಟಿಎಂಎಸ್ ಮೆಟ್ರೋ ನಿಲ್ದಾಣದ ಕಡೆ ದ್ವಿಚಕ್ರ ವಾಹನದಲ್ಲಿ ಇಬ್ಬರು ಬರುತ್ತಿದ್ದ ಸಮಯದಲ್ಲಿ ಮರಳಿನ ಟ್ರಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಓರ್ವ ಯುವಕ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಾಗಿಸಿದೆ ಎಂದು ತೇನಂ ಪೇಟೆ ಪೊಲೀಸರು ಖಚಿತ ಪಡಿಸಿದ್ದಾರೆ.
ಇನ್ನೂ ಮತ್ತೊಂದು ಪ್ರತೈಕ ಘಟನೆಯಲ್ಲಿ ವಿಕ್ರವಾಂಡಿ ಬಳಿ ಚಲಿಸುವ ರೈಲಿನಿಂದ ವ್ಯಕ್ತಿಯೊಬ್ಬ ಪ್ರಾಣ ಚೆಲ್ಲಿದ್ದಾನೆ. ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಿಲ್ಲುಪುರಂ ರೇಲ್ವೆ ಪೊಲೀಸರು ಹೇಳಿದ್ದಾರೆ. ಇವರೆಲ್ಲ ವಿಜಯ್ ಸಮಾವೇಶಕ್ಕೆ ಹೋಗುತ್ತಿದ್ದರು ಎಂದು ವರದಿಯಾಗಿದೆ.
ಇನ್ನುಳಿದಂತೆ ತಮ್ಮ ಮೊದಲ ರಾಜಕೀಯ ಸಮಾವೇಶದಲ್ಲಿ ಪರೋಕ್ಷವಾಗಿ ಬಿಜೆಪಿ ಮತ್ತು ಡಿಎಂಕೆ ಪಕ್ಷವನ್ನು ಗುರಿಯಾಗಿಸಿಕೊಂಡು ಮಾತನಾಡಿದ ವಿಜಯ್, ರಾಜಕೀಯವನ್ನು ಹಾವಿಗೆ ಹೋಲಿಕೆ ಮಾಡಿದರು. ನಗು ಮತ್ತು ಗಂಭೀರತೆಯಿಂದ ಎದುರಿಸಲು ನಾನು ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು. ಮುಂದುವರೆದು ಕೆಲವರು ಮೀನು ಕೊಡುವುದಕ್ಕಿಂತ ಮೀನು ಹಿಡಿಯುವುದು ಹೇಗೆ ಎನ್ನುವುದೆನ್ನುವುದನ್ನು ಕಲಿಸಬೇಕು ಎಂದು ಹೇಳುತ್ತಾರೆ. ಅದರಲ್ಲಿ ನಮಗೆ ನಂಬಿಕೆ ಇಲ್ಲ ಎಂದರು. ಮೀನು ಹಿಡಿಯುವುದು ಹೇಗೆ ಎನ್ನುವುದು ಗೊತ್ತಿದ್ದವರು ಮೀನು ಹಿಡಿಯಲಿ ಯಾರಿಗೆ ಆಗಲ್ಲವಾ ಅವರಿಗೆ ಮೀನು ಹಿಡಿದು ಕೊಡೋಣ ಎಂದು ಹೇಳಿದರು. ಇಲ್ಲಿ ಸೇರಿರುವವರು ಯಾರು ಹಣಕ್ಕಾಗಿ ಸೇರಿಲ್ಲ ಒಳ್ಳೆಯ ಉದ್ದೇಶಕ್ಕೆ ಕೈ ಜೋಡಿಸಲು ಇವರೆಲ್ಲ ಬಂದಿದ್ದಾರೆ ಎಂದು ಹೇಳಿದರು.


Click it and Unblock the Notifications











