'KGF' ಕಡೆ ಬೊಟ್ಟು ಮಾಡಿ ಸೆನ್ಸಾರ್ ಮಂಡಳಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ 'ಕೂಲಿ' ಮೇಕರ್ಸ್

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ 2ನೇ ವಾರದತ್ತ ಮುನ್ನುಗ್ಗುತ್ತಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುತ್ತಿದೆ. ಆದರೂ ನಿಧಾನವಾಗಿ ಕ್ರೇಜ್ ಕಮ್ಮಿ ಆಗುತ್ತಿದೆ. ಮತ್ತೆ ಮತ್ತೆ ನೋಡಬೇಕು, ಫ್ಯಾಮಿಲಿ ಸಮೇತ ಸಿನಿಮಾ ನೋಡೋಣ ಎಂದುಕೊಂಡಿದ್ದವರು ಹಿಂದೇಟು ಹಾಕುತ್ತಿದ್ದಾರೆ.

ಲೋಕೇಶ್ ಕನಕರಾಜ್ ಒಂದೊಳ್ಳೆ ಅವಕಾಶವನ್ನು ವ್ಯರ್ಥ ಮಾಡಿದ್ದಾರೆ. ಸರಿಯಾದ ಕಥೆ, ಚಿತ್ರಕಥೆ ಇಲ್ಲದೇ 'ಕೂಲಿ' ಸಿನಿಮಾ ಕೆಲವರಿಗೆ ನಿರಾಸೆ ಮೂಡಿಸಿದೆ. ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆ ತರುವಲ್ಲಿ ವಿಫಲವಾದಂತೆ ಕಾಣುತ್ತಿದೆ. ಫಸ್ಟ್ ವೀಕೆಂಡ್‌ನಲ್ಲೇ ಸಿನಿಮಾ 404 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ಚಿತ್ರತಂಡ ಹೇಳಿತ್ತು.

U A Certificate Row for Coolie Rajinikanth Film Compared to KGF by Makers

ಬಿಡುಗಡೆಗೂ ಮುನ್ನ 'ಕೂಲಿ' ಕ್ರೇಜ್ ನೋಡಿ 1000 ಕೋಟಿ ಗ್ರಾಸ್ ಕಲೆಕ್ಷನ್ ಮಾಡುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದರು. ಆದರೆ ಆ ಲೆಕ್ಕಾಚಾರ ಸುಳ್ಳಾಗುವ ಲಕ್ಷಣಗಳು ಕಾಣುತ್ತಿದೆ. ಮೊದಲ ವಾರವೇ 'ಕೂಲಿ' ಸುಸ್ತಾಗಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ದೊಡ್ಡದಾಗಿ ಗೆಲ್ಲುವುದು ಅನುಮಾನ ಎಂದು ಕಾಮೆಂಟ್ ಮಾಡುವವರು ಇದ್ದಾರೆ.

'ಕೂಲಿ' ಸಿನಿಮಾ ಹಿನ್ನಡೆಗೆ ಸೆನ್ಸಾರ್ ಮಂಡಳಿ ಕೊಟ್ಟಿದ್ದ 'ಎ' ಸರ್ಟಿಫಿಕೇಟ್ ಕೂಡ ಕಾರಣ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಈಗ ಸನ್ ಪಿಕ್ಚರ್ಸ್ ಸಂಸ್ಥೆ ಹೈಕೋರ್ಟ್ ಮೆಟ್ಟಿಲೇರಿದೆ. 'ಎ' ಸರ್ಟಿಫಿಕೇಟ್ ಸಿಗುವ ಚಿತ್ರಗಳನ್ನು 18 ವರ್ಷ ಮೇಲ್ಪಟ್ಟವರು ಮಾತ್ರ ನೋಡಬೇಕು ಎನ್ನುವ ನಿಯಮ ಇದೆ. ಹಾಗಾಗಿ 'ಎ' ಸರ್ಟಿಫಿಕೇಟ್ ಸಿಕ್ಕ ಸಿನಿಮಾಗಳನ್ನು ನೋಡಲು ಮಕ್ಕಳನ್ನು ಕರೆದುಕೊಂಡು ಬರುವವರ ಸಂಖ್ಯೆ ಕಮ್ಮಿ ಆಗುತ್ತದೆ.

ರಜನಿಕಾಂತ್ ಸಿನಿಮಾಗಳಿಗೆ ಅಬಾಲವೃದ್ಧರಾಗಿ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಮಕ್ಕಳು ಸಿನಿಮಾ ನೋಡಲು ಬರದೇ ಇದ್ದರೆ ಸಹಜವಾಗಿಯೇ ಚಿತ್ರಕ್ಕೆ ಹಿನ್ನಡೆ ಆಗುತ್ತಿದೆ. ಚಿತ್ರದಲ್ಲಿ ಅಷ್ಟೇನು ಕ್ರೌರ್ಯ ಇಲ್ಲ. ಯಾಕೆ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ಕೊಟ್ಟಿದೆ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ರಜನಿಕಾಂತ್ ಚಿತ್ರಗಳಿಗೆ ಯು/ಎ ಸರ್ಟಿಫಿಕೇಟ್ ಸಿಗುತ್ತಿತ್ತು. 'ಕೂಲಿ' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಅಂದಾಗ ಕೆಲವರು ಹುಬ್ಬೇರಿಸಿದ್ದರು.

'ಎ' ಸರ್ಟಿಫಿಕೇಟ್ ಕೊಡುವಂತೆ ನಿರ್ಮಾಪಕರು ಮೇಲ್ಮನವಿ ಸಲ್ಲಿಸುತ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅಷ್ಟೆರಲ್ಲೇ ಸಿನಿಮಾ ಬಿಡುಗಡೆ ಆಗಿತ್ತು. ಇದೀಗ ಸೆನ್ಸಾರ್ ಮಂಡಳಿ ಕೊಟ್ಟಿದ್ದ 'ಎ' ಪ್ರಮಾಣಪತ್ರವನ್ನು ಪ್ರಶ್ನಿಸಿ ಮದ್ರಾಸ್ ಹೈಕೋರ್ಟ್‌ನಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆ ಅರ್ಜಿ ಸಲ್ಲಿಸಿದೆ. 'ಕೆಜಿಎಫ್', 'ಬೀಸ್' ರೀತಿಯ ಸಿನಿಮಾಗಳಿಗೆ ಹೋಲಿಸಿದೆ 'ಕೂಲಿ' ಚಿತ್ರದಲ್ಲಿ ಹಿಂಸಾತ್ಮಕ ದೃಶ್ಯಗಳು ಕಮ್ಮಿ ಇದೆ. ಆದರೂ ಯಾಕೆ 'ಎ' ಸರ್ಟಿಫಿಕೇಟ್ ಎಂದು ನೆಟ್‌ವರ್ಕ್ ವಾದಿಸಿರುವುದಾಗಿ ಎಂದು ವರದಿಯಾಗಿದೆ.

ಸೆನ್ಸಾರ್ ಮಂಡಳಿ ನೀಡುವ ಸಿನಿಮಾ ಪ್ರಮಾಣ ಪತ್ರದ ಬಗ್ಗೆ ಸಾಕಷ್ಟು ಆಕ್ಷೇಪಗಳು ಈ ಹಿಂದೆ ಕೂಡ ಕೇಳಿಬಂದಿತ್ತು. ಕೆಲವರು ಕೆಲ ದೃಶ್ಯಗಳಿಗೆ ಕತ್ತರಿ ಹಾಕಿ 'ಯು' ಅಥವಾ 'ಯು/ಎ' ಸರ್ಟಿಫಿಕೇಟ್ ಪಡೆಯುವುದು ಇದೆ. ಮತ್ತೆ ಕೆಲವರು ನಾವು ಮಾಸ್ ಆಡಿಯನ್ಸ್‌ಗಾಗಿ ಮಾಡಿರೋ ಸಿನಿಮಾ, ನಮಗೆ 'ಎ' ಸರ್ಟಿಫಿಕೇಟ್ ಇರಲಿ ಬಿಡಿ ಎನ್ನುವುದು ಇದೆ. ಒಂದ್ಕಾಲದಲ್ಲಿ 'ಎ' ಸರ್ಟಿಫಿಕೇಟ್ ಅಂದರೆ ಫಿಲ್ಮ್ ಮೇಕರ್ಸ್ ಹೆದರುತ್ತಿದ್ದರು. ಆದರೆ ಈಗ ಆ ಪರಿಸ್ಥಿತಿ ಬದಲಾಗಿದೆ.

ರಜನಿಕಾಂತ್ ಚಿತ್ರಗಳಿಗೆ ಸಾಮಾನ್ಯವಾಗಿ ಯು/ಎ ಸರ್ಟಿಫಿಕೇಟ್ ಸಿಗುತ್ತದೆ. 36 ವರ್ಷಗಳ ಹಿಂದೆ ಕೊನೆಯದಾಗಿ 'ಶಿವ' ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಪಡೆಯುವಂತಾಗಿತ್ತು. ಅದಕ್ಕೂ ಮುನ್ನ 'ಪುದುಕವಿಧೈ' (1982), 'ರಂಗ' (1982), 'ನಾನ್ ಸಿಗಪ್ಪು ಮನಿತನ್', ನಾನ್ ಮಹಾನ್ ಅಲ್ಲ' ಹಾಗೂ 'ನೆಟ್ರಿಕ್ಕನ್' ಚಿತ್ರಗಳಿಗೆ 'ಎ' ಸರ್ಟಿಫಿಕೇಟ್ ಸಿಕ್ಕಿತ್ತು.

More from Filmibeat

English summary
HC move by Rajinikanth’s Coolie team against censor’s ‘A’ classification
Read more about: rajinikanth kgf yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X