ದಾಂಪತ್ಯದಲ್ಲಿ ಬಿರುಕು, ರಾಜಕೀಯ ಸವಾಲು ; ವಿಜಯ್ ವಿಲವಿಲ - ಯಾರೇ ಕೂಗಾಡಲಿ, ಊರೇ ಹೋರಾಡಲಿ, ತ್ರಿಶಾ ಬಿಂದಾಸ್ ಪಾರ್ಟಿ

ಸಂಸಾರದಲ್ಲಿ ಸಮರಸವಿದ್ದರೆ ಮಾತ್ರ ಹೊಂದಾಣಿಕೆ ಗಟ್ಟಿಯಾಗಲು ಸಾಧ್ಯ. ದಂಪತಿಗಳ ನಡುವೆ ಭಿನ್ನಾಭಿಪ್ರಾಯಗಳು ಸಹಜ. ಆದರೆ ಅದನ್ನು ಮೂರನೇ ವ್ಯಕ್ತಿಯ ನಡುವೆ ತೋರಿಸಿಕೊಂಡಾಗ ಅಥವಾ ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸಿದಾಗ ಚಿಕ್ಕ ಸಮಸ್ಯೆ ಕೂಡ ದೊಡ್ಡದಾಗುತ್ತೆ. ವಿಚಾರ ವಿಚ್ಛೇದನದ ಹಂತದವರೆಗೆ ತಲುಪುತ್ತೆ. ಇದಕ್ಕೆ ವಿಜಯ್ ಮತ್ತು ಸಂಗೀತಾ ದಾಂಪತ್ಯ ಜೀವನ ಸದ್ಯದ ತಾಜಾ ಉದಾಹರಣೆ.

ಹೌದು, ಕಳೆದ ಕೆಲ ವರ್ಷಗಳಿಂದ ತಮ್ಮ ನೆಚ್ಚಿನ ''ಜನನಾಯಕ''ನ ದಾಂಪತ್ಯ ಮುರಿದು ಬೀಳುವ ಆತಂಕ ವಿಜಯ್ ಅಭಿಮಾನಿಗಳನ್ನು ಕಾಡುತ್ತಿತ್ತು. ಈ ಆತಂಕವನ್ನು ವಿಜಯ ಶಮನ ಮಾಡಬೇಕಿತ್ತು. ಆದರೆ ವಿಜಯ್ ಮಾತ್ರ ತಲೆ ಕೆಡಿಸಿಕೊಳ್ಳಲಿಲ್ಲ. ಬದಲಿಗೆ ತ್ರಿಶಾ ಜೊತೆ ಎಲ್ಲೆಂದರಲ್ಲಿ ಓಡಾಡಲು ಶುರು ಮಾಡಿದರು. ಈ ಮೂಲಕ ಟ್ರೋಲಿಗರಿಗೆ ಆಹಾರ ಆದರು. ಸುದ್ದಿ ಮನೆಗಳಿಗೆ ಸುದ್ದಿಯೂ ಆದರು.

Unfazed amp amp Unfiltered Trisha Toasts to Life While Vijay Navigates a Personal and Political Maelstrom

ವಿಜಯ್ ಅವರ ಈ ಅಸಡ್ಡೆಯ ಮನೋಭಾವದಿಂದ ಇವರ 27 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ಮುರಿದು ಬಿದ್ದಿದೆ. ರಾಜಕೀಯದ ರಣರಂಗಕ್ಕೆ ಬಂದ ವಿಜಯ್ ಪಾಲಿಗೆ ಈಗ ತಮ್ಮ ವೈಯಕ್ತಿಕ ಬದುಕಿನ ಈ ವಿವಾದ ತಲೆ ನೋವಾಗಿದೆ. ವಿರೋಧ ಪಕ್ಷದವರೆಗೆ ಬ್ರಹ್ಮಾಸ್ತ್ರ ಸಿಕ್ಕಂತಾಗಿದೆ.

ಇನ್ನೂ 2025ರ ಕರೂರ್ ಕಾಲ್ತುಳಿತದ ದುರಂತದ ಬಗ್ಗೆ ಸುಪ್ರೀಂ ಕೋರ್ಟ್ ನಿಷ್ಪಕ್ಷಪಾತ ತನಿಖೆಗೆ ಆದೇಶಿಸಿದ ನಂತರ, ಸಿಬಿಐ ಪ್ರಕರಣದ ತನಿಖೆ ನಡೆಸುತ್ತಿದ್ದು, ನಟ, ರಾಜಕಾರಣಿ ವಿಜಯ್ ಅವರನ್ನು ಮತ್ತೊಂದು ಸುತ್ತಿನ ವಿಚಾರಣೆಗೆ ಒಳಪಡಿಸಲು ಸಮನ್ಸ್ ಜಾರಿ ಮಾಡಿದೆ.

ಮತ್ತೊಂದು ಕಡೆ ವರ್ಷದ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ''ಜನನಾಯಗನ್'' ಇನ್ನೂ ಡಬ್ಬಾದಲ್ಲಿಯೇ ಕೊಳೆಯುತ್ತಿದೆ. ಸೆನ್ಸಾರ್ ಕತ್ತರಿಯಲ್ಲಿ ಸಿಲುಕಿ ಹೊರ ಬರಲಾಗದೇ ಒದ್ದಾಡುತ್ತಿದೆ. ಇದೆಲ್ಲರಿಂದ ಸದ್ಯ ವಿಜಯ್ ಅಕ್ಷರಶಃ ಹೈರಾಣಾಗಿದ್ಧಾರೆ. ಆದರೆ ತ್ರಿಶಾ ಅವರದ್ದು ಮಾತ್ರ ಡೋಂಟ್ ಕೇರ್ ವ್ಯಕ್ತಿತ್ವ. ತನಗೂ ಈ ವಿವಾದಕ್ಕೂ ಮತ್ತು ವಿಜಯ್‌ಗೂ ಸಂಬಂಧವೇ ಇಲ್ಲ ಎನ್ನುವಂತೆ ತ್ರಿಶಾ ಸದ್ಯ ಇದ್ದಂತೆ ಇದೆ.

ಇದಕ್ಕೆ ಪುರಾವೆ ಎನ್ನುವಂತೆ ಈ ವಿವಾದದ ನಡುವೆ ತ್ರಿಶಾ ತಮ್ಮ ಸ್ನೇಹಿತರ ಜೊತೆ ಬಿಂದಾಸ್ ಪಾರ್ಟಿ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಈ ಪಾರ್ಟಿಯ ಫೋಟೊಗಳನ್ನು ಕೂಡ ಹಂಚಿಕೊಂಡಿದ್ಧಾರೆ. ಯಾರೇ ಕೂಗಾಡಲಿ.. ಊರೇ ಹೋರಾಡಲಿ.. ನನ್ನ ನೆಮ್ಮದಿಗೆ ಭಂಗ ಇಲ್ಲ ಎನ್ನುವ ಸಂದೇಶವನ್ನು ರವಾನೆ ಮಾಡುವ ಪ್ರಯತ್ನವನ್ನು ತ್ರಿಶಾ ಈ ಮೂಲಕ ಮಾಡಿದ್ದಾರಾ..? ಗೊತ್ತಿಲ್ಲ. ಆದರೆ ಸದ್ಯ ತ್ರಿಶಾ ಅವರ ಈ ಮೋಜು ಮಸ್ತಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ವಿಜಯ್ ಅಭಿಮಾನಿಗಳ ಆಕ್ರೋಶಕ್ಕೂ ಕೂಡ ಗುರಿಯಾಗುತ್ತಿವೆ.

Unfazed amp amp Unfiltered Trisha Toasts to Life While Vijay Navigates a Personal and Political Maelstrom

ಹೀಗೆ ತಮಿಳುನಾಡಿನಾದ್ಯಂತ ತ್ರಿಶಾ ಕುರಿತು ರಾಜಕೀಯ, ಸಿನಿಮಾ ಹಾಗೂ ಸಾರ್ವಜನಿಕ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿದ್ದರೂ, ಇದು ತಮಗೆ ವೈಯಕ್ತಿಕವಾಗಿ ಯಾವುದೇ ಪರಿಣಾಮ ಬೀರಿಲ್ಲ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ, ತಮ್ಮದೇ ಲೋಕದಲ್ಲಿ ಮುಳುಗಿರುವ ತ್ರಿಶಾ ಅವರನ್ನು ಇಂದು (ಮಾರ್ಚ್ 13 ) ಮಾಧ್ಯಮದವರು ವಿಮಾನ ನಿಲ್ದಾಣದಲ್ಲಿ ಅಡ್ಡಗಟ್ಟಿದ್ದಾರೆ. ಇಡೀ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ಕೇಳಿದ್ದಾರೆ. ಆದರೆ ತ್ರಿಶಾ ಮಾತ್ರ ಕ್ಯಾರೇ ಎಂದಿಲ್ಲ. ಬದಲಿಗೆ ಕ್ಯಾಮರಾದತ್ತ ನೋಡುವ ಗೋಜಿಗೂ ಹೋಗದ ತ್ರಿಶಾ ತಮ್ಮ ಪಾಡಿಗೆ ತಾವು ನಡೆದುಕೊಂಡು ಹೋಗಿದ್ಧಾರೆ. ಸದ್ಯ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಬಗೆ ಬಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯುತ್ತೆ ಎನ್ನುವುದನ್ನು ಕಾದು ನೊಡಬೇಕಿದೆ.

More from Filmibeat

English summary
Trisha Krishnan celebrates with her inner circle amid ongoing political controversy. Compare the star's carefree social media updates to the intense career and personal challenges currently facing Vijay. Get the full story on their contrasting worlds here
Read more about: trisha vijay kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X