ತೆರೆಗೆ ಸೂಪರ್ ಸ್ಟಾರ್ ಉಪೇಂದ್ರ 'ಗಾಡ್ ಫಾದರ್'

ಸೂಪರ್ ಸ್ಟಾರ್ ಉಪೇಂದ್ರ ನಟನೆಯ 'ಗಾಡ್‌‌ಫಾದರ್' ಚಿತ್ರ ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು (ಜುಲೈ 27, 2012) ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ ಒಟ್ಟೂ 120 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವ ಈ ಚಿತ್ರಕ್ಕೆ ಭಾರೀ ಯಶಸ್ಸಿನ ನಿರೀಕ್ಷೆಯಿದೆ. ಕಾರಣ, ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ಎಆರ್ ರೆಹಮಾನ್ ಸಂಗೀತ ನೀಡಿರುವ ಚಿತ್ರ ಈ ಗಾಡ್ ಫಾದರ್.

2006 ರಲ್ಲಿ ಬಿಡುಗಡೆಯಾಗಿದ್ದ ಅಜಿತ್ ನಟನೆಯ ತಮಿಳಿನ 'ವರಲಾರು' ಚಿತ್ರದ ರೀಮೇಕ್ ಆಗಿರುವ ಈ ಗಾಡ್ ಫಾದರ್ ಚಿತ್ರದಲ್ಲಿ ಉಪೇಂದ್ರ ಮೂರು ಪಾತ್ರಗಳಲ್ಲಿ ನಟಿಸಿದ್ದಾರೆ. ಅಪ್ಪ, ಇಬ್ಬರು ಮಕ್ಕಳು ಹೀಗೆ ತ್ರಿಪಾತ್ರ ಉಪ್ಪಿಯದು. ಈಗಾಗಲೇ ರಿಯಲ್ ಸ್ಟಾರ್ ಉಪೇಂದ್ರ 'ಆರಕ್ಷಕ' ಚಿತ್ರದಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದರು. ಈಗ ತ್ರಿಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ.

ಪರಮ ಕ್ರೂರಿಗಳ ಈ ಮೂರು ಪಾತ್ರಗಳಿಗೆ ಉಪೇಂದ್ರ ಎಷ್ಟರಮಟ್ಟಿಗೆ ನ್ಯಾಯ ಸಲ್ಲಿಸಿದ್ದಾರೆ ಎಂಬುದು ಪ್ರೇಕ್ಷಕರಲ್ಲಿರುವ ತೀವ್ರ ಕುತೂಹಲ. ಕಾರಣ, ತಮಿಳಿನಲ್ಲಿ ಬಂದಿದ್ದ ಮೂಲ ಚಿತ್ರ ವರಲಾರುನಲ್ಲಿ ನಟಿಸಿದ್ದ ಅಜಿತ್, ಆ ಚಿತ್ರದ ನಟನೆಗೆ ಭಾರಿ ಪ್ರಶಂಸೆ ಪಡೆದಿದ್ದರು. ಉಪ್ಪಿ ಇಂತಹ ಪಾತ್ರಗಳಲ್ಲಿ ನಟಿಸಿರುವುದು ಇದೇ ಮೊದಲು.

ಪಕ್ಕಾ ಥ್ರಿಲ್ಲರ್ ಚಿತ್ರವಾಗಿರುವ ಗಾಡ್ ಫಾದರ್ ನಲ್ಲಿ ನಾಯಕಿಯಾಗಿ ಜಯಮಾಲಾ ಪುತ್ರಿ ಸೌಂದರ್ಯಾ ನಟಿಸಿದ್ದಾರೆ. ಸದಾ, ಭೂಮಿಕಾ ಚಾವ್ಲಾ ಹಾಗೂ ಕ್ಯಾಥರಿನ್ ಥ್ರೆಸಾ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಗಂಡಗಲಿ ಕೆ ಮಂಜು ನಿರ್ಮಾಣದ ಗಾಡ್ ಫಾದರ್ ಚಿತ್ರಕ್ಕೆ ತಮಿಳಿನ ಖ್ಯಾತ ಛಾಯಾಗ್ರಾಹಕ ಪಿ ಸಿ ಶ್ರೀರಾಮ್ ನಿರ್ದೇಶಕರು.

ತಮಿಳಿನ 'ವರಲಾರು' ಚಿತ್ರ ಆ ಕಾಲದಲ್ಲಿ ಭಾರೀ ಪ್ರಶಂಸೆ ಪಡೆದುಕೊಂಡಿತ್ತು. ಮೂರು ಪಾತ್ರಗಳಲ್ಲಿ ಅಜಿತ್ ನಟನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದರಲ್ಲೂ ಹೆಣ್ಣಿನಂತೆ, ಹೆಣ್ಣಿಗನಂತೆ ಕಾಣಿಸಿಕೊಂಡು ಭಾರೀ ಸಂಚಲನ ಸೃಷ್ಟಿಸಿದ್ದರು ಅಜಿತ್. ಅದೇ ಪಾತ್ರವನ್ನು ಇಲ್ಲಿ ಉಪ್ಪಿ ಮಾಡಿದ್ದಾರೆ. ಬಹಳಷ್ಟು ನಾಯಕರು ನಿರಾಕರಿಸಿದ ಪಾತ್ರವನ್ನು ಉಪೇಂದ್ರ ಒಪ್ಪಿ ಮಾಡಿದ್ದಾರೆ. ಮಂಜು ಸ್ನೇಹಕ್ಕಾಗಿ ಈ ಚಿತ್ರ ಒಪ್ಪಿದ್ದಾಗಿ ಹೇಳಿಕೊಂಡಿದ್ದಾರೆ ಉಪ್ಪಿ.

ಗಾಡ್‌ಫಾದರ್ ಚಿತ್ರಕ್ಕೆ ಪ್ರಮುಖ ಆಕರ್ಷಣೆ, ಆಸ್ಕರ್ ಪ್ರಶಸ್ತಿ ವಿಜೇತ ಎ ಆರ್ ರೆಹಮಾನ್ ಸಂಗೀತ. ಈ ಚಿತ್ರದ ಏಳು ಹಾಡುಗಳ ಪೈಕಿ ಮೂರು ಹಾಡುಗಳಿಗೆ ಹೊಸದಾಗಿ ರೆಹಮಾನ್ ಅವರೇ ಸಂಗೀತ ನೀಡಿದ್ದಾರೆ. ಚಿತ್ರದ ಹಾಡುಗಳು ಈಗಾಗಲೇ ಗಮನ ಸೆಳೆದಿವೆ. ಶಾಸ್ತ್ರೀಯ ಸಂಗೀತ ಆಧಾರಿತ ಹಾಡುಗಳು ಹಿಂದಿನ ಮಾಧುರ್ಯವನ್ನು ನೆನಪಿಸುವಂತಿವೆ. ಚಿತ್ರ ಇದೇ ಕಾರಣಕ್ಕೆ ಸಕ್ಸಸ್ ಗಳಿಸಿದರೂ ಆಶ್ಚರ್ಯವಿಲ್ಲ.

ಬಿಡುಗಡೆ ನಂತರದ ಮೊದಲ ಮೂರು ದಿನಗಳ ಕಾಲ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಈ ಚಿತ್ರದ ಹಾಡುಗಳ ಧ್ವನಿಸುರುಳಿಗಳನ್ನು ಎಲ್ಲಾ ಪ್ರೇಕ್ಷಕರಿಗೂ ನೀಡಲಾಗುತ್ತದೆ" ಎಂದಿದ್ದಾರೆ ವತರಕ ಸಮರ್ಥ್ ವೆಂಚರ್ಸ್ ಪ್ರಸಾದ್. ಅದೆಷ್ಟು ನಿಜ ಎಂಬುದು ಇಂದು ತಿಳಿಯಲಿದೆ. ಸಿಡಿ ಉಚಿತ ಆದರೆ ಟಿಕೆಟ್ ದರವನ್ನು ಹತ್ತು ರೂಪಾಯಿ ಹೆಚ್ಚಿಸಲಾಗಿದೆ ಎಂಬ ಸುದ್ದಿಯಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಚಿತ್ರದ ಹಣೆಬರಹ ತಿಳಿಯಬಹುದು. (ಒನ್ ಇಂಡಿಯಾ ಕನ್ನಡ)

ಗಾಡ್ ಫಾದರ್ ಚಿತ್ರ ವಿಮರ್ಶೆ ಸದ್ಯದಲ್ಲೇ ನಿರೀಕ್ಷಿಸಿ..

More from Filmibeat

English summary
Upendra movie God Father Released today on 27th July 2012 all over Karnataka. K Manju Produced and PC Sriram directed this movie. This is the remake of Tamil movie Ajith starer Varalaru. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X