For Quick Alerts
  ALLOW NOTIFICATIONS  
  For Daily Alerts

  'ಉಪ್ಪೇನಾ' TRP: ಕಿರುತೆರೆಯಲ್ಲಿ ದಾಖಲೆ ನಿರ್ಮಿಸಿದ ವೈಷ್ಣವ್ ಮತ್ತು ಕೃತಿ ಶೆಟ್ಟಿ

  |

  ತೆಲುಗು ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಸಿನಿಮಾ ಉಪ್ಪೇನಾ. ವೈಷ್ಣವ್ ತೇಜ್ ಮತ್ತು ನಟಿ ಕೃತಿ ಶೆಟ್ಟಿ ನಟನೆಯ ಉಪ್ಪೇನಾ ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದು. ಚೊಚ್ಚಲ ಸಿನಿಮಾದಲ್ಲೇ ಸಿನಿಪ್ರೇಕ್ಷಕರ ಹೃದಯ ಗೆದ್ದಿರುವ ನಟ ವೈಷ್ಣವ್ ಮತ್ತು ಕೃತಿ ಶೆಟ್ಟಿ ದಕ್ಷಿಣ ಭಾರತದ ಸೆನ್ಸೇಷನ್ ಜೋಡಿಯಾಗಿ ಹೊರಹೊಮ್ಮಿದ್ದಾರೆ.

  ಮೊದಲ ಸಿನಿಮಾವೇ 100 ಕೋಟಿ ಕ್ಲಬ್ ಸೇರಿರುವ ಸಂತಸದಲ್ಲಿದ್ದ ವೈಷ್ಣವ್ ಮತ್ತು ಕೃತಿಗೆ ಮತ್ತೊಂದು ಸಂತಸದ ಸುದ್ದಿ ಸಿಕ್ಕಿದೆ. ಸಿನಿಮಾ ಬಿಡುಗಡೆಯಾಗಿ 100 ಕೋಟಿ ರೂ. ಗಳಿಕೆ ಮಾಡಿದ ಬಳಿಕವೂ ಉಪ್ಪೇನಾ ದಾಖಲೆ ನಿರ್ಮಿಸಿದೆ. ಟಿ ಆರ್ ಪಿಯಲ್ಲಿ ವೈಷ್ಣವ್ ತೇಜ್ ಟಾಪ್ ನಲ್ಲಿದ್ದಾರೆ.

  ಮತ್ತೆ ಒಂದಾಗುತ್ತಿದೆ ಸೂಪರ್ ಹಿಟ್ 'ಉಪ್ಪೆನಾ' ಜೋಡಿ?ಮತ್ತೆ ಒಂದಾಗುತ್ತಿದೆ ಸೂಪರ್ ಹಿಟ್ 'ಉಪ್ಪೆನಾ' ಜೋಡಿ?

  ಇತ್ತೀಚಿಗೆ ಉಪ್ಪೇನಾ ಸಿನಿಮಾ ಮಾ ಟಿವಿಯಲ್ಲಿ ಪ್ರಸಾರವಾಗಿತ್ತು. ಸಿನಿಮಾ 18.5 ರೇಟಿಂಗ್ ಪಡೆದಿದೆ. ಚೊಚ್ಚಲ ನಾಯಕನ ಸಿನಿಮಾ ಇಷ್ಟು ರೇಟಿಂಗ್ ಪಡೆದಿರುವುದು ಇದೇ ಮೊದಲು. ಕಿರುತೆರೆ ಪ್ರೇಕ್ಷಕರ ಮನ ಗೆದ್ದಿರುವ ವೈಷ್ಣವ್ ಮತ್ತು ಕೃತಿ ಹೊಸ ರೆಕಾರ್ಡ್ ಕ್ರಿಯೇಟ್ ಮಾಡಿದ್ದಾರೆ.

  ಉಪ್ಪೇನಾ ಸಿನಿಮಾಗೆ ಟಾಲಿವುಡ್ ಸ್ಟಾರ್ ಕಲಾವಿದರಿಂದ ಭಾರಿ ಮೆಚ್ಚುಗೆಗೆ ಪಾತ್ರವಾಗಿತ್ತು. ನಟ ಮಹೇಶ್ ಬಾಬು, ಅಲ್ಲು ಅರ್ಜುನ್, ಚಿರಂಜೀವಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಸಿನಿಮಾ ನೋಡಿ ಸಾಮಾಜಿಕ ಜಾಲತಾಣದಲ್ಲಿ ವಿಮರ್ಶೆ ಮಾಡಿದ್ದರು.

  ಚಿರು ಇಲ್ಲದ‌ ಸ್ಥಿತಿಗೆ ಭಾವುಕರಾಗಿ ಕಣ್ಣೀರು ತರಿಸುವ ಫೋಟೋ ಶೇರ್ ಮಾಡಿದ ಮೇಘನಾ ರಾಜ್ | Filmibeat Kannada

  ದೇವಿ ಪ್ರಸಾದ್ ಅವರ ಸಂಗೀತ, ವೈಷ್ಣವ್ ಮತ್ತು ಕೃತಿ ನಟನೆ, ಬುಚ್ಚಿ ಬಾಬು ಚೊಚ್ಚಲ ನಿರ್ದೇಶ ಪ್ರೇಕ್ಷಕರ ಮೆಚ್ಚುಗೆಗೆ ಕಾರಣವಾಗಿದೆ. ಚಿತ್ರದಲ್ಲಿ ಮಕ್ಕಳ್ ಸೆಲ್ವನ್ ವಿಜಯ್ ಸೇತುಪತಿ ವಿಲನ್ ಆಗಿ ಮಿಂಚಿದ್ದಾರೆ. ಅಂದಹಾಗೆ ಸಿನಿಮಾ ಕಳೆದ ವರ್ಷವೇ ತೆರೆಗೆ ಬರಬೇಕಿತ್ತು. ಆದರೆ ಕೊರೊನಾ ಹಾವಳಿ ಕಾರಣ ಸಿನಿಮಾ ಈ ವರ್ಷ ಫೆಬ್ರವರಿ 12ರಲ್ಲಿ ತೆರೆಗೆ ಬಂದಿದೆ.

  English summary
  Uppena TRP Rating: Vaishnav Tej-Krithi Shetty’s starrer Romantic movie Creates A Massive Record of TRP. Know more.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X