Urvashi Theatre: 1000+ ಸೀಟ್‌ಗಳಿರುವ ಊರ್ವಶಿಯಲ್ಲಿ ನೂತನ‌ ದಾಖಲೆ ಬರೆದ ಜೈಲರ್!

ಆಗಸ್ಟ್ 10ರಿಂದ ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರಲ್ಲಿಯೂ ಹೆಚ್ಚಾಗಿ ಚರ್ಚೆಗೀಡಾಗಿರುವ ಚಿತ್ರವೆಂದರೆ ಅದು ತಮಿಳಿನ ಜೈಲರ್. ತಮಿಳು ಮಾತ್ರವಲ್ಲದೇ ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೂ ಡಬ್ ಆಗಿ ಬಿಡುಗಡೆಯಾಗಿರುವ ಜೈಲರ್ ಪ್ಯಾನ್ ಇಂಡಿಯಾ ಚಿತ್ರವಾಗಿದೆ. 2021ರಲ್ಲಿ ಅಣ್ಣಾತ್ತೆ ಸಿನಿಮಾ ಮಾಡಿ ಕೈ ಸುಟ್ಟುಕೊಂಡಿದ್ದ ರಜನಿಕಾಂತ್ ಹಾಗೂ ಕಳೆದ ವರ್ಷ ಬೀಸ್ಟ್ ಚಿತ್ರ ಮಾಡಿ ಹೀನಾಯವಾಗಿ ಟ್ರೋಲ್ ಆಗಿದ್ದ ನೆಲ್ಸನ್ ಕುಮಾರ್ ಇಬ್ಬರೂ ಸಹ ಜೈಲರ್ ಮೂಲಕ ದೊಡ್ಡ ಮಟ್ಟದಲ್ಲಿ ಕಮ್‌ಬ್ಯಾಕ್ ಮಾಡಿದ್ದಾರೆ.

ಜೈಲರ್ ಮೊದಲ ಪ್ರದರ್ಶನ ಮುಕ್ತಾಯಗೊಳ್ಳುತ್ತಿದ್ದಂತೆಯೇ ಹಿಟ್ ಟಾಕ್ ಪಡೆದುಕೊಂಡು ಚಿತ್ರ ಗೆದ್ದಿದೆ ಎಂಬ ಸ್ಪಷ್ಟ ಫಲಿತಾಂಶವನ್ನು ಪಡೆದುಕೊಂಡಿತು. ಮೊದಲ ಪ್ರದರ್ಶನದ ಬಳಿಕ‌ ಶುರುವಾದ ಈ ಜೈಲರ್ ಭಜನೆ ಸದ್ಯ ಆರು ದಿನಗಳು‌ ಮುಕ್ತಾಯಗೊಂಡರೂ ಸಹ ನಿಲ್ಲುವ ಹಾಗೆ ಕಾಣುತ್ತಿಲ್ಲ

jailer-becomes-the-highest-grossing

ಜೈಲರ್ ಚಿತ್ರ ಬಿಡುಗಡೆಯಾದ 6 ದಿನಗಳಲ್ಲಿ ಬರೋಬ್ಬರಿ 402 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಅನ್ನು ಮಾಡಿ 400 ಕೋಟಿ ಕ್ಲಬ್ ಸೇರಿದ ಸಿನಿಮಾ‌ ಎನಿಸಿಕೊಂಡಿದೆ. ಹೀಗೆ ಬಿಡುಗಡೆಯಾದ ಕೇವಲ ಆರೇ ದಿನಗಳಲ್ಲಿ ಇಷ್ಟು ದೊಡ್ಡ ಹಣ ಗಳಿಕೆ ಮಾಡಿರುವ ಜೈಲರ್ ತಮಿಳಿನಾಡಿನಲ್ಲಿ ಮಾತ್ರವಲ್ಲದೇ ಕರ್ನಾಟಕ, ತೆಲುಗು ರಾಜ್ಯಗಳು ಹಾಗೂ ಕೇರಳದಲ್ಲಿಯೂ ಸಹ ಅಬ್ಬರದ ಪ್ರದರ್ಶನವನ್ನು ಕಾಣುತ್ತಿದೆ.

ದೇಶದಲ್ಲಿ ಜೈಲರ್ ಮಾಡಿರುವ ಒಟ್ಟು ಗಳಿಕೆಯಲ್ಲಿ ಸಿಂಹಪಾಲು ತಮಿಳುನಾಡಿನ ಬಾಕ್ಸ್ ಆಫೀಸ್‌ನದ್ದಾದರೆ, ಎರಡನೇ ಸ್ಥಾನ ಕರ್ನಾಟಕದ ಪಾಲು. ಹೌದು, ಕರ್ನಾಟಕ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದ್ದ ಜೈಲರ್ ಮೊದಲ 6 ದಿನಗಳಲ್ಲಿ 43.7 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಹೀಗೆ ರಾಜ್ಯದಲ್ಲಿ ಅಬ್ಬರಿಸುತ್ತಿರುವ ಜೈಲರ್ ಬೆಂಗಳೂರು ನಗರದಲ್ಲಿ ಸದ್ಯ ಪ್ರದರ್ಶನಗೊಳ್ಳುತ್ತಿರುವ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ಬೃಹತ್ ಹಿಡಿತ ಸಾಧಿಸಿದೆ. ಅದರಲ್ಲೂ 1000ಕ್ಕೂ ಹೆಚ್ಚು ಆಸನಗಳಿರುವ ಊರ್ವಶಿ ಚಿತ್ರಮಂದಿರದಲ್ಲಿ ಜೈಲರ್ ಆರೇ ದಿನಕ್ಕೆ ಈ ವರ್ಷ ಬಿಡುಗಡೆಗೊಂಡಿದ್ದ ಎಲ್ಲಾ ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿ ದಾಖಲೆ ಬರೆದಿದೆ.

ಹೌದು, ಊರ್ವಶಿ ಚಿತ್ರಮಂದಿರದಲ್ಲಿ ಮೊದಲ‌ 6 ದಿನಕ್ಕೆ 52 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿರುವ ಜೈಲರ್ ಈ ವರ್ಷ ಈ ಚಿತ್ರಮಂದಿರದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ್ದ ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾವನ್ನು ಹಿಂದಿಕ್ಕಿದೆ. ಊರ್ವಶಿ ಚಿತ್ರಮಂದಿರದಲ್ಲಿ ಈ ವರ್ಷ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿ ಈ‌ ಕೆಳಕಂಡಂತಿದೆ‌.

1. ಜೈಲರ್ - 52 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್
2. ಪಠಾಣ್ - 48 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್
3. ಪೊನ್ನಿಯಿನ್ ಸೆಲ್ವನ್ 2 - 39 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್
4. ವಾರಿಸು - 31 ಲಕ್ಷ ರೂಪಾಯಿ ಗ್ರಾಸ್ ಕಲೆಕ್ಷನ್

More from Filmibeat

English summary
Urvashi Theatre: Jailer becomes the highest grossing film in 2023 by beating Pathaan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X