ತಮಿಳಿನ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ನಿಧನ: ಕುಟುಂಬಕ್ಕೆ ವಿಜಯ್ ಸೇತುಪತಿ ಆರ್ಥಿಕ ನೆರವು

ತಮಿಳು ಕಿರುತೆರೆಯ ಖ್ಯಾತ ಹಾಸ್ಯ ನಟ ವಡಿವೇಲು ಬಾಲಾಜಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 45 ವರ್ಷದ ನಟ ಬಾಲಾಜಿ ನಿನ್ನೆ (ಸೆಪ್ಟಂಬರ್ 10) ಚೆನ್ನೈನ ಸರ್ಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬಾಲಾಜಿ ನಿಧನಕ್ಕೆ ಅಭಿಮಾನಿಗಳು, ತಮಿಳು ನಟರು ಸಂತಾಪ ಸೂಚಿಸಿದ್ದಾರೆ.

ನಟ ವಿಜಯ್ ಸೇತುಪತಿ, ರೋಬೊ ಶಂಕರ್ ಸೇರಿದಂತೆ ಅನೇಕರು ವಡಿವೇಲು ಅಂತಿಮ ದರ್ಶನ ಪಡೆದು, ಕುಟುಂಬಕ್ಕೆ ಧೈರ್ಯ ತುಂಬಿದ್ದಾರೆ. ನಟ ಧನುಷ್ ವಡಿವೇಲು ಬಾಲಾಜಿ ಹಠಾತ್ ನಿಧನ ತೀವ್ರ ದುಃಖ ತಂದಿದೆ. ಆವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಟ್ವೀಟ್ ಮಾಡಿದ್ದಾರೆ. ವಡಿವೇಲು ಬಾಲಾಜಿ, ಪತ್ನಿ ಒಬ್ಬ ಮಗ ಮತ್ತು ಮಗಳನ್ನು ಅಗಲಿದ್ದಾರೆ. ಮುಂದೆ ಓದಿ...

 ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಹೃದಯಾಘಾತದಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು

ಕಿರುತೆರೆಯ ಮನರಂಜನಾ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದ ವಡಿವೇಲು ಬಾಲಾಜಿ ಅವರಿಗೆ ಕಳೆದ ಎರಡು ವಾರಗಳ ಹಿಂದೆ ಹೃದಯಾಘಾತವಾಗಿತ್ತು. ಬಳಿಕ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟು ಪಾರ್ಶ್ವವಾಯುವಿಗೆ ಕಾರಣವಾಯಿತು. ಅಲ್ಲಿಂದ ಅವರನ್ನು ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

 ಹಣವಿಲ್ಲದೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ

ಹಣವಿಲ್ಲದೆ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ

ವೆಂಟಿಲೇಟರ್ ನಲ್ಲಿ ಬಾಲಾಜಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಖಾಸಗಿ ಆಸ್ಪತ್ರೆಯ ಚಿಕಿತ್ಸೆ ವೆಚ್ಚ ಭರಿಸಲು ಸಾಧ್ಯವಾಗದೆ, ಕುಟುಂಬದವರು ಬಾಲಾಜಿಯನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

 ಕುಟುಂಬಕ್ಕೆ ನೆರವಾದ ವಿಜಯ್ ಸೇತುಪತಿ

ಕುಟುಂಬಕ್ಕೆ ನೆರವಾದ ವಿಜಯ್ ಸೇತುಪತಿ

ಲಾಕ್ ಡೌನ್ ಸಮಯದಲ್ಲಿ ವಡಿವೇಲು ಬಾಲಾಜಿ ಕುಟುಂಬ ತೀವ್ರ ಆರ್ಥಿಕ ಸಂಕಷ್ಟ ಎದುರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ನಟ ವಿಜಯ್ ಸೇತುಪತಿ ವಡಿವೇಲು ಬಾಲಾಜಿ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ. ಅಲ್ಲದೆ ಯಾವುದೇ ಸಹಾಯ ಬೇಕಾದರು ಸಂಪರ್ಕಿಸುವಂತೆ ಹೇಳಿದ್ದಾರಂತೆ.

Recommended Video

Rakesh Adiga spiritual Rap , ಕನ್ನಡಧ Rapperಗಳಿಗೆ ಕಿವಿಮಾತು | Filmibeat Kannada
 ಹಿರಿಯ ನಟ ವಡಿವೇಲು ಅಭಿಮಾನಿ

ಹಿರಿಯ ನಟ ವಡಿವೇಲು ಅಭಿಮಾನಿ

ವಡಿವೇಲು ಬಾಲಾಜಿ ಕಿರುತೆರೆ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಹಿರಿಯ ಹಾಸ್ಯನಟ ವಡಿವೇಲು ಅವರ ಅಭಿಮಾನಿಯಾಗಿರುವ ಬಾಲಾಜಿ, ಅವರನ್ನೇ ಅನುಕರಣೆ ಮಾಡುತ್ತ ಖ್ಯಾತಿ ಪಡೆದಿದ್ದರು. ಅಲ್ಲದೆ ಬಾಲಾಜಿ ಹೆಸರು ಜೊತೆ ವಡಿವೇಲು ಬಾಲಾಜಿ ಎಂದು ಸೇರಿಸಿಕೊಂಡಿದ್ದಾರೆ. ಬಾಲಾಜಿ ಕೊನೆಯದಾಗಿ 2018ರಲ್ಲಿ ನಯನತಾರಾ ಅಭಿನಯದ 'ಕೋಲಮಾವು ಕೋಕಿಲಾ' ಸಿನಿಮಾದಲ್ಲಿ ನಟಿಸಿದ್ದಾರೆ.

More from Filmibeat

English summary
Tamil Actor Vijay Sethupathi Pays Last Respects to Actor Vadivel Balaji. He Lends Financial Help To Balaji Family.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X