ಸಹ ನಟರ ಮೇಲೆ ದೂರು ನೀಡಿದ ಹಾಸ್ಯನಟ ವಡಿವೇಲು

ಭಾರತೀಯ ಚಿತ್ರರಂಗದ ಖ್ಯಾತ ಹಾಸ್ಯನಟರಲ್ಲೊಬ್ಬರಾದ ವಡಿವೇಲು ಅವರು ತಮ್ಮ ಸಹನಟರಿಬ್ಬರು ವಿರುದ್ಧ ದೂರು ನೀಡಿದ್ದಾರೆ.

Recommended Video

ಲವ್ ಮಾಕ್‍ಟೇಲ್-2 ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ ಡಾರ್ಲಿಂಗ್ ಕೃಷ್ಣ | Darling Krishna |FILMIBEAT KANNADA

ತಮಿಳು ಚಿತ್ರರಂಗದ ಹಾಸ್ಯನಟ ಮನೋಬಲ ಮತ್ತು ಪೋಷಕ ನಟ ಸಿಂಗಮುತ್ತು ವಿರುದ್ಧ ವಡಿವೇಲು ಕಲಾವಿದರ ಸಂಘಕ್ಕೆ ದೂರು ನೀಡಿದ್ದಾರೆ.

ವಡಿವೇಲು, ಸಿಂಗಮುತ್ತು, ಮನೋಬಲ ಮೂವರೂ ಸಹ ತಮಿಳು ಸಿನಿಮಾ ಉದ್ಯಮದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹಿರಿಯ ಮತ್ತು ಖ್ಯಾತ ನಟರಾಗಿರುವ ವಡಿವೇಲು, 'ನನ್ನ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸುತ್ತಿದ್ದಾರೆ' ಎಂದು ಸಹನಟರ ಮೇಲೆ ಆರೋಪಿಸಿದ್ದಾರೆ.

ಯೂಟ್ಯೂಬ್‌ ಚಾನೆಲ್‌ನಲ್ಲಿ ಸಂದರ್ಶನ

ಯೂಟ್ಯೂಬ್‌ ಚಾನೆಲ್‌ನಲ್ಲಿ ಸಂದರ್ಶನ

ಆಗಿದ್ದಿಷ್ಟು, ನಟ ಮನೋಬಲ 'ವೇಸ್ಟ್ ಪೇಪರ್' ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಾರೆ. ನಟ-ನಟಿಯರನ್ನು ಕರೆದು ಸಂದರ್ಶನ ಮಾಡಿ ಅದನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುತ್ತಾರೆ. ಅದೇ ಚಾನೆಲ್‌ನ ಸಂದರ್ಶನಕ್ಕೆ ಇತ್ತೀಚೆಗೆ ನಟ ಸಿಂಗಮುತ್ತು ಅವರನ್ನು ಕರೆದಿದ್ದರು.

ವಡಿವೇಲು ಬಗ್ಗೆ ಸಿಂಗಮುತ್ತು ಮಾತು

ವಡಿವೇಲು ಬಗ್ಗೆ ಸಿಂಗಮುತ್ತು ಮಾತು

ಸಿಂಗಮುತ್ತು ಮಾತನಾಡುವಾಗ ನಟ ವಡವೇಲು ಬಗ್ಗೆ ಸಹ ಮಾತನಾಡಿದ್ದರು. ಅದನ್ನು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದರು. ಹಾಗೂ ವಡಿವೇಲು ಇರುವ ನಟರ ವಾಟ್ಸ್‌ಪ್‌ ಗ್ರೂಪ್‌ನಲ್ಲಿ ಸಹ ಹಾಕಿದ್ದರು. ಇದನ್ನು ನೋಡಿದ ವಡಿವೇಲು ಕ್ರೋಧಗೊಂಡಿದ್ದರು.

ನನ್ನ ಚಾರಿತ್ರ್ಯಹರಣ ಮಾಡುತ್ತಿದ್ದಾರೆಂದು ದೂರು

ನನ್ನ ಚಾರಿತ್ರ್ಯಹರಣ ಮಾಡುತ್ತಿದ್ದಾರೆಂದು ದೂರು

ನನ್ನ ಬಗ್ಗೆ ತಪ್ಪು ಮಾಹಿತಿಯನ್ನು ಮಾತನಾಡಿದ್ದಾರೆ. ನನ್ನ ಬಗ್ಗೆ ಇಲ್ಲ-ಸಲ್ಲದ್ದನ್ನು ಹೇಳಿದ್ದಾರೆ. ನಾನು ಸಿಂಗಮುತ್ತು ವಿರುದ್ಧ ಕಾನೂನು ಮೊಕದ್ದಮೆ ಹೂಡುತ್ತೇನೆ. ಸಿಂಗಮುತ್ತು ನನ್ನ ಬಗ್ಗೆ ಸುಳ್ಳು ಮಾತನಾಡಿರುವುದನ್ನು ಮನೋಬಲಂ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಹಂಚಿಕೊಂಡಿದ್ದಾರೆ ವಡಿವೇಲು ಅವರು ಮನೋಬಲಂ ಮತ್ತು ಸಿಂಗಮುತ್ತು ವಿರುದ್ಧ ನಟರ ಸಂಘಕ್ಕೆ ದೂರು ನೀಡಿದ್ದಾರೆ.

ಮೂವರು ಒಟ್ಟೊಟ್ಟಿಗೆ ನಟಿಸಿದ್ದಾರೆ

ಮೂವರು ಒಟ್ಟೊಟ್ಟಿಗೆ ನಟಿಸಿದ್ದಾರೆ

ವಡಿವೇಲು ಮತ್ತು ಸಿಂಗಮುತ್ತು ಬಹಳಷ್ಟು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಮನೋಬಲ ಜೊತೆಗಿನ ಸಂದರ್ಶನದಲ್ಲಿ ಸಿಂಗಮುತ್ತು ವಡಿವೇಲು ವ್ಯಕ್ತಿತ್ವದ ಬಗ್ಗೆ, ಅವರು ಸೂಕ್ತ ಸಮಯದಲ್ಲಿ ಸಹಾಯ ಮಾಡಲಿಲ್ಲ, ಕಷ್ಟಕ್ಕೆ ಸ್ಪಂದಿಸಲಿಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ.

More from Filmibeat

English summary
Tamil famous comedy actor Vadivelu gave complaint against co actors Manobala and Singamuthu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X