For Quick Alerts
  ALLOW NOTIFICATIONS  
  For Daily Alerts

  ಸಂಕ್ರಾಂತಿ ವಾರ್‌ಗೆ ಮತ್ತೊಂದು ಮೆಗಾ ಸಿನಿಮಾ ಎಂಟ್ರಿ

  |

  ಕಳೆದ ಎರಡು ವರ್ಷದಿಂದ ರಿಲೀಸ್‌ಗಾಗಿ ಕಾಯ್ತಿದ್ದ ಸ್ಟಾರ್ ನಟರ ಚಿತ್ರಗಳು ಒಂದೊಂದೇ ಬಿಡುಗಡೆ ದಿನಾಂಕ ಘೋಷಿಸಿ, ಥಿಯೇಟರ್ ಕಾಯ್ದಿರಿಸಿದೆ. ಕೆಲವು ಚಿತ್ರಗಳು ದಸರಾ ಹಬ್ಬಕ್ಕೆ, ಇನ್ನು ಕೆಲವು ಚಿತ್ರಗಳು ದೀಪಾವಳಿ-ಕ್ರಿಸ್‌ಮಸ್‌ಗೆ ಬುಕ್ ಆಗಿದ್ರೆ ಉಳಿದ ಸಿನಿಮಾಗಳು ಸಂಕ್ರಾಂತಿಗೆ ಮುಹೂರ್ತ ನಿಗದಿ ಮಾಡಿಕೊಂಡಿದೆ.

  ಹಾಗ್ನೋಡಿದ್ರೆ 2022ರ ಸಂಕ್ರಾಂತಿ ಹಬ್ಬ ಸ್ವಲ್ಪ ಜೋರಾಗಿಯೇ ಇರಲಿದೆ. ತಮಿಳು ಮತ್ತು ತೆಲುಗು ಚಿತ್ರರಂಗಕ್ಕೆ ಸಂಕ್ರಾಂತಿ ಹಬ್ಬ ಬಹಳ ವಿಶೇಷವಾಗಿದ್ದು, ನಿರೀಕ್ಷೆಯ ಸಿನಿಮಾಗಳು ಮುಂದಿನ ವರ್ಷದ ಆರಂಭದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

  ಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರ ನಡುವೆ ನಡೆಯಲಿದೆ ಯುದ್ಧಸಂಕ್ರಾಂತಿ ಹಬ್ಬಕ್ಕೆ ಸ್ಟಾರ್ ನಟರ ನಡುವೆ ನಡೆಯಲಿದೆ ಯುದ್ಧ

  ಇದೀಗ, ಈ ಪಟ್ಟಿಗೆ ಮತ್ತೊಂದು ತಮಿಳು ಚಿತ್ರ ಸೇರಿದೆ. ಕಾಲಿವುಡ್ ಸ್ಟಾರ್ ನಟ ಅಜಿತ್ ಕುಮಾರ್ ಅಭಿನಯದ 'ವಾಲಿಮೈ' ಸಿನಿಮಾ ಈ ವರ್ಷವೇ ತೆರೆಗೆ ಬರಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅಜಿತ್ ಸಿನಿಮಾ 2021ರಲ್ಲಿ ದರ್ಶನ ಕೊಡೋದು ಅನುಮಾನ. ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಮುಂದೆ ಓದಿ...

  ಸಂಕ್ರಾಂತಿ ಹಬ್ಬಕ್ಕೆ ವಾಲಿಮೈ

  ಸಂಕ್ರಾಂತಿ ಹಬ್ಬಕ್ಕೆ ವಾಲಿಮೈ

  ಇತ್ತೀಚಿಗಷ್ಟೆ 'ವಾಲಿಮೈ' ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲಾಗಿತ್ತು. ಯುವನ್ ಶಂಕರ್ ರಾಜಾ ಹಾಗೂ ಅನುರಾಗ್ ಕುಲಕರ್ಣಿ ಧ್ವನಿಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಭರ್ಜರಿ ರೆಸ್‌ಪಾನ್ಸ್ ಸಿಕ್ಕಿತ್ತು. ಇದರ ಬೆನ್ನಲ್ಲೆ ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಮಾಡಬಹುದು ಎಂಬ ಲೆಕ್ಕಾಚಾರದಲ್ಲಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, 'ವಾಲಿಮೈ' ಚಿತ್ರವನ್ನು ಈ ವರ್ಷ ನೋಡಲು ಸಾಧ್ಯವಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ವರದಿಗಳ ಪ್ರಕಾರ, ಸಂಕ್ರಾಂತಿ ಹಬ್ಬಕ್ಕೆ ಅಜಿತ್ ಸಿನಿಮಾ ಎಂಟ್ರಿಯಾಗಬಹುದು.

  ಪೋಸ್ಟ್ ಪ್ರೊಡಕ್ಷನ್‌ಗೆ ಸಮಯ ಬೇಕು

  ಪೋಸ್ಟ್ ಪ್ರೊಡಕ್ಷನ್‌ಗೆ ಸಮಯ ಬೇಕು

  'ವಾಲಿಮೈ' ಚಿತ್ರದ ಪೋಸ್ಟ್ ಪ್ರೊಡಕ್ಷನ್‌ಗೆ ಇನ್ನು ಹೆಚ್ಚಿನ ಸಮಯ ಬೇಕಾಗಿರುವ ಹಿನ್ನೆಲೆ ಸಂಕ್ರಾಂತಿ ಹಬ್ಬವನ್ನು ಗುರಿಯಾಗಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಪೋಸ್ಟ್ ಪ್ರೊಡಕ್ಷನ್ ಮುಗಿದ ನಂತರವೇ ಚಿತ್ರದ ರಿಲೀಸ್ ಬಗ್ಗೆ ಅಧಿಕೃತವಾಗಿ ಪ್ರಕಟಿಸಲು ಚಿತ್ರತಂಡ ತೀರ್ಮಾನಿಸಿದೆ. ಇನ್ನು ಕೊನೆಯ ಹಂತದ ಚಿತ್ರೀಕರಣ ಬಾಕಿಯಿದ್ದು, ಶೀಘ್ರದಲ್ಲಿ ಪಶ್ಚಿಮ ಯೂರೋಪ್‌ಗೆ ತೆರಳಲು ಚಿತ್ರತಂಡ ಪ್ಲಾನ್ ಮಾಡಿದೆ. ಸುಮಾರು 7 ದಿನಗಳ ಕೊನೆಯ ಶೆಡ್ಯೂಲ್ ಬಾಕಿಯಿದ್ದು, ಅಜಿತ್ ಜೊತೆ ನಟಿ ಕಾರ್ತಿಕೇಯ ಸಹ ಭಾಗಿಯಾಗಲಿದ್ದಾರೆ.

  ರಾಕಿ ಭಾಯ್‌ಗೆ ಚಾಲೆಂಜ್ ಆಗಲಿದ್ಯಾ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ?ರಾಕಿ ಭಾಯ್‌ಗೆ ಚಾಲೆಂಜ್ ಆಗಲಿದ್ಯಾ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ?

  ಬೋನಿ ಕಪೂರ್ ನಿರ್ಮಾಣ

  ಬೋನಿ ಕಪೂರ್ ನಿರ್ಮಾಣ

  ಅಂದ್ಹಾಗೆ, ಈ ಚಿತ್ರವನ್ನು ಎಚ್ ವಿನೋದ್ ನಿರ್ದೇಶನ ಮಾಡುತ್ತಿದ್ದು, ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಬಂಡವಾಳ ಹಾಕಿದ್ದಾರೆ. ಇದಕ್ಕೂ ಮುಂಚೆ 'ನೇರ್ಕೊಂಡ ಪಾರ್ವೈ' ಚಿತ್ರ ನಿರ್ದೇಶಿಸಿದ್ದ ಎಚ್ ವಿನೋದ್ ಎರಡನೇ ಸಲ ಅಜಿತ್ ಜೊತೆ ಕೆಲಸ ಮಾಡ್ತಿದ್ದಾರೆ. ಹುಮಾ ಖುರೇಶಿ, ಕಾರ್ತಿಕೇಯ ಈ ಚಿತ್ರದಲ್ಲಿ ನಟಿಸಿದ್ದಾರೆ.

  ಸಂಕ್ರಾಂತಿಗೆ ರೆಡಿಯಿರುವ ಚಿತ್ರಗಳು

  ಸಂಕ್ರಾಂತಿಗೆ ರೆಡಿಯಿರುವ ಚಿತ್ರಗಳು

  ತೆಲುಗು ನಟ ಮಹೇಶ್ ಬಾಬು ಅಭಿನಯದ 'ಸರ್ಕಾರು ವಾರಿ ಪಾಟ', ಪ್ರಭಾಸ್ ಅಭಿನಯದ 'ರಾಧೆಶ್ಯಾಮ್', ಪವನ್ ಕಲ್ಯಾಣ್-ರಾಣಾ ದಗ್ಗುಬಾಟಿ ನಟನೆಯ ಇನ್ನು ಹೆಸರಿಡದ ಚಿತ್ರ, ವೆಂಕಟೇಶ್ ನಟನೆಯ 'ಎಫ್ 3 'ಸಿನಿಮಾಗಳು ಸಂಕ್ರಾಂತಿ ಹಬ್ಬಕ್ಕೆ ಬರುವುದಾಗಿ ಪ್ರಕಟಿಸಿಕೊಂಡಿದೆ. ಈಗ ತಮಿಳಿನಿಂದ 'ವಾಲಿಮೈ' ಸಿನಿಮಾ ರೇಸ್‌ನಲ್ಲಿದೆ.

  ಕ್ರಿಸ್‌ಮಸ್‌ಗೆ ಪ್ಯಾನ್ ಇಂಡಿಯಾ ಚಿತ್ರಗಳು

  ಕ್ರಿಸ್‌ಮಸ್‌ಗೆ ಪ್ಯಾನ್ ಇಂಡಿಯಾ ಚಿತ್ರಗಳು

  ಸಂಕ್ರಾಂತಿ ಹಬ್ಬಕ್ಕೂ ಮೊದಲು 2021ರ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್‌ ಹಬ್ಬಕ್ಕೆ ಪ್ಯಾನ್ ಇಂಡಿಯಾ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿದೆ. ಅಲ್ಲು ಅರ್ಜುನ್ ನಟನೆಯ 'ಪುಷ್ಪ ಭಾಗ 1', ಅಮೀರ್ ಖಾನ್ ನಟನೆಯ 'ಲಾಲ್ ಸಿಂಗ್ ಚಡ್ಡಾ' ರಿಲೀಸ್ ದಿನಾಂಕ ಘೋಷಿಸಿದೆ. ಸದ್ಯಕ್ಕೆ 'ಕೆಜಿಎಫ್ ಚಾಪ್ಟರ್-2' ಸಿನಿಮಾ ಸಹ ಡಿಸೆಂಬರ್‌ನಲ್ಲಿ ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ.

  English summary
  Tamil Actor Ajith Kumar starrer Valimai movie get postponed and set to release on sankranti 2022.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X