4ನೇ ಮದುವೆಯಾದ್ರಾ ನಟಿ ವನಿತಾ ವಿಜಯಕುಮಾರ್? ಈ ಬಗ್ಗೆ ಹೇಳಿದ್ದೇನು?
ತಮಿಳು ನಟಿ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯಕುಮಾರ್ 4ನೇ ಮದುವೆ ವಿಚಾರ ಸದ್ದು ಮಾಡುತ್ತಿದೆ. ಕಳೆದ ವರ್ಷ ಲಾಕ್ ಡೌನ್ ಸಮಯದಲ್ಲಿ VFX ತಂತ್ರಜ್ಞ ಪೀಟರ್ ಪೌಲ್ ಜೊತೆ 3ನೇ ಮದುವೆಯಾಗಿದ್ದ ವನಿತಾ ಕೆಲವೇ ತಿಂಗಳಲ್ಲೇ ಪತಿಯಿಂದ ದೂರ ಆಗಿದ್ದರು. ಬಳಿಕ ಮತ್ತೆ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.
ಇದೀಗ 4ನೇ ಮದುವೆ ಬಗ್ಗೆ ಸ್ವತಃ ವನಿತಾ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿರುವ ವನಿತಾ ಸಿಂಗಲ್ ಆಗಿ ಇರುವುದಾಗಿ ಹೇಳಿದ್ದಾರೆ. 'ನಾನು ಸಿಂಗಲ್ ಆಗಿಯೇ ಇದ್ದೀನಿ. ಯಾವುದೇ ವದಂತಿಗಳನ್ನು ಹಬ್ಬಿಸಬೇಡಿ ಮತ್ತು ನಂಬಬೇಡಿ' ಎಂದು ಹೇಳಿದ್ದಾರೆ.
ಇಬ್ಬರು ಹೆಣ್ಣು ಮಕ್ಕಳ ತಾಯಿ ವನಿತಾ ಕಳೆದ ವರ್ಷ ಲಾಕ್ ಡೌನ್ ನಲ್ಲಿ ಪೀಟರ್ ಪೌಲ್ ಜೊತೆ ಸರಳವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ಕೆಲವೇ ತಿಂಗಳಲ್ಲಿ ಪತಿ ಪೀಟರ್ ನನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಬಳಿಕ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದ ವನಿತಾ ಪತಿ ಪೀಟರ್ ಮೋಸ ಮಾಡಿರುವುದಾಗಿ ಹೇಳಿ ಕಣ್ಣೀರಾಕಿದ್ದರು.

ಪೀಟರ್ ಗೆ ಕುಡಿತದ ಚಟ ಇತ್ತು ಎನ್ನುವುದು ತಿಳಿದಿರಲಿಲ್ಲ, ಗಂಡನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀನಿ, ತುಂಬಾ ಪ್ರೀತಿಸುತ್ತಿದ್ದೆ, ನನ್ನ ಮಕ್ಕಳಿಗೆ ತಂದೆಯನ್ನು ಬಯಸಿದ್ದೆ ಹಾಗಾಗಿ ಪೀಟರ್ ನ್ನು ಮದುವೆಯಾಗಿದ್ದೆ ಆದರೆ ಮೋಸ ಮಾಡಿದ ಎಂದು ಗಳಗಳನೇ ಅತ್ತಿದ್ದರು. 3ನೇ ಪತಿಯಿಂದ ದೂರ ಆದ ಬಳಿಕ 4ನೇ ಮದುವೆ ಆಗಿದ್ದಾರೆ ಎನ್ನುವ ಕೇಳಿಬರುತ್ತಿತ್ತು. ಆದರೀಗ ಮತ್ತೊಂದು ಮದುವೆ ವಿಚಾರವಾಗಿ ಪ್ರತಿಕ್ರಿಯೆ ನೀಡುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ.


Click it and Unblock the Notifications











