For Quick Alerts
  ALLOW NOTIFICATIONS  
  For Daily Alerts

  ಮೂರನೇ ಗಂಡನನ್ನು ಮನೆಯಿಂದ ಹೊರಹಾಕಿದ್ರಾ ನಟಿ ವನಿತಾ?: ಪತಿಯ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದೇಕೆ?

  By ಫಿಲ್ಮ್ ಡೆಸ್ಕ್
  |

  ತಮಿಳು ನಟಿ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯ್ ಕುಮಾರ್ ಲಾಕ್ ಡೌನ್ ಸಮಯದಲ್ಲಿ ಮೂರನೇ ಮದುವೆಯಾಗಿದ್ದರು. ವಿ ಎಕ್ಸ್ ಎಫ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಸರಳವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ಮದುವೆಯಲ್ಲಿ ನಟಿ ವನಿತಾ ಅವರ ಇಬ್ಬರು ಹೆಣ್ಣು ಮಕ್ಕಳು ಸಹ ಪಾಲ್ಗೊಂಡಿದ್ದರು.

  ಜೂನ್ ನಲ್ಲಿ ಹಸೆಮಣೆ ಏರಿದ್ದ ಈ ಜೋಡಿ ನಾಲ್ಕು ತಿಂಗಳೊಳಗೆ ಬೇರೆ ಬೇರೆ ಆಗಿದ್ದಾರೆ. ನಟಿ ವನಿತಾ ಮೂರನೇ ಪತಿಯನ್ನು ಮನೆಯಿಂದ ಹೊರಹಾಕಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ವನಿತಾ ಪತಿ ಪೀಟರ್ ಮೋಸ ಮಾಡಿರುವುದಾಗಿ ವಿಡಿಯೋ ಮೂಲಕ ಬಹಿರಂಗಪಡಿಸಿ ಕಣ್ಣೀರಾಕಿದ್ದಾರೆ.

  ಮೂರನೇ ಮದುವೆಯಾದ ವನಿತಾಗೆ ಮರುದಿನವೇ ಎದುರಾಯ್ತು ಸಂಕಷ್ಟ!ಮೂರನೇ ಮದುವೆಯಾದ ವನಿತಾಗೆ ಮರುದಿನವೇ ಎದುರಾಯ್ತು ಸಂಕಷ್ಟ!

  ಯೂ ಟ್ಯೂಬ್ ಚಾನೆಲ್ ಒಂದರಲ್ಲಿ ಪತಿಯ ಬಗ್ಗೆ ಮಾತನಾಡಿರುವ ವನಿತಾ, ಪೀಟರ್ ಗೆ ಕುಡಿತದ ಚಟ ಇತ್ತು ಎನ್ನುವುದು ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಗಂಡನನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದೀನಿ, ತುಂಬಾ ಪ್ರೀತಿಸುತ್ತಿದ್ದೆ ಎಂದಿದ್ದಾರೆ. ನನ್ನ ಮಕ್ಕಳಿಗೆ ತಂದೆಯನ್ನು ಬಯಸಿದ್ದೆ ಹಾಗಾಗಿ ಪೀಟರನ್ನು ಮದುವೆಯಾಗಿರುವುದಾಗಿ ಹೇಳಿ ಗಳಗಳ ಅತ್ತಿದ್ದಾರೆ.

  ಪೀಟರ್ ವಿಪರೀತ ಕುಡುಯುತ್ತಿದ್ದರು, ಇದರಿಂದ ಅವರಿಗೆ ಹೃದಯಾಘಾತವಾಗಿತ್ತು, ಆಸ್ಪತ್ರೆಗೆ ಸೇರಿಸಿ ಉತ್ತಮ ಚಿಕಿತ್ಸೆ ಕೊಡಿಸಿದ್ದೇನೆ. ಚೆನ್ನಾಗಿ ನೋಡಿಕೊಂಡಿದ್ದೇನಿ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕವೂ ಕುಡಿಯುವುದನ್ನು ಬಿಟ್ಟಿಲ್ಲ. ಬಳಿಕ ಮತ್ತೆ ಅವರನ್ನು ಐಸಿಯುಗೆ ಸೇರಿಸಬೇಕಾಯಿತು ಎಂದಿದ್ದಾರೆ.

  Dhruva Sarja First Reaction For Chiru Baby | ಅಣ್ಣನ ಮಗು ನೋಡಿ ಧ್ರುವನಿಗೆ ಮೊದಲು ಅನ್ನಿಸಿದ್ದೇನು ಗೊತ್ತಾ

  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಟ್ರೋಲ್ ಗಳು ಮತ್ತು ಆರೋಪಗಳಿಂದ ಒತ್ತಡ ನಿಭಾಯಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ಗೋವಾ ಪ್ರವಾಸಕ್ಕೆ ಹೋದೆವು. ಪ್ರವಾಸದಿಂದ ಬರುವವರೆಗೂ ಎಲ್ಲಾ ಚೆನ್ನಾಗಿಯೇ ಇದ್ದೆವು. ಆದರೆ ಪ್ರವಾಸದಿಂದ ಬಂದ ಬಳಿಕ ಪೀಟರ್ ಸಹೋದರ ನಿಧನಹೊಂದಿದ ಸುದ್ದಿ ತಿಳಿಯಿತು. ಅವರು ಮನೆಗೆ ಹೋದರು. ಪ್ರಯಾಣದ ಖರ್ಚಿಗೆ ಹಣವನ್ನು ಕೊಟ್ಟಿದ್ದೇನೆ. ಹೋದವರು ಮತ್ತೆ ಬರಲಿಲ್ಲ, ಅಲ್ಲೇ ಇದ್ದಾರೆ." ಎಂದು ವಿಡಿಯೋ ಮೂಲಕ ಪತಿಯ ಬಗ್ಗೆ ಹೇಳುತ್ತಾ ಕಣ್ಣೀರಿಟ್ಟಿದ್ದಾರೆ.

  English summary
  Tamil Actress, Big Boss fame Vanitha Vijayakumar Reveals How her Husband Peter's Alcoholism Ruined Her Marriage.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X