For Quick Alerts
  ALLOW NOTIFICATIONS  
  For Daily Alerts

  ವನಿತಾ ವಿಜಯ್‌ಕುಮಾರ್ ಆರೋಪಕ್ಕೆ ರಮ್ಯಾ ಕೃಷ್ಣನ್ ತಿರುಗೇಟು

  |

  ವಿಜಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ 'ಬಿಗ್ ಬಾಸ್ ಜೋಡಿಗಳ್' ಡ್ಯಾನ್ಸ್ ರಿಯಾಲಿಟಿ ಶೋನಿಂದ ವನಿತಾ ವಿಜಯ್ ಕುಮಾರ್ ಹೊರನಡೆದಿದ್ದಾರೆ. ವನಿತಾ ಅವರ ಈ ನಿರ್ಧಾರಕ್ಕೆ ಹಿರಿಯ ನಟಿ ರಮ್ಯಾಕೃಷ್ಣನ್ ಒತ್ತಡ ಹಾಗೂ ಬೆದರಿಕೆ ಕಾರಣ ಎಂದು ಪರೋಕ್ಷವಾಗಿ ಆರೋಪಿಸಲಾಗಿದೆ.

  ಈ ಕುರಿತು ಟ್ವಿಟ್ಟರ್‌ನಲ್ಲಿ ಪ್ರಕಟಿಸಿಕೊಂಡಿರುವ ವನಿತಾ ವಿಜಯ್ ಕುಮಾರ್, ''ಹಿರಿಯ ನಟಿಯೊಬ್ಬರ ಒತ್ತಡ, ಕಿರುಕುಳ, ಬೆದರಿಕೆಯಿಂದ ನಾನು ಈ ಶೋ ಬಿಟ್ಟು ಹೊರಹೋಗುತ್ತಿದ್ದೇನೆ'' ಎಂದು ದೂರಿದ್ದು, ಆ ಹಿರಿಯ ನಟಿಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಶೋನಲ್ಲಿ ತೀರ್ಪುಗಾರ್ತಿಯಾಗಿರುವ ರಮ್ಯಾ ಕೃಷ್ಣನ್ ಉಲ್ಲೇಖಿಸಿ ಈ ಪೋಸ್ಟ್ ಹಾಕಲಾಗಿದೆ ಎಂದು ಅರ್ಥೈಸಲಾಗಿದೆ.

  ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆ ತುಳಿಯಬಾರದು

  ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆ ತುಳಿಯಬಾರದು

  ''ಬಿಗ್ ಬಾಸ್ ಜೋಡಿಗಳ್ ಕಾರ್ಯಕ್ರಮದಲ್ಲಿ ನನಗೆ ಬೆದರಿಕೆ ಹಾಕಲಾಗಿದೆ. ನಾನು ದುರುಪಯೋಗವಾಗುವ ವಸ್ತುವಲ್ಲ, ಆದ್ದರಿಂದ ನಾನು ಈ ಕಾರ್ಯಕ್ರಮದಿಂದ ಹೊರಹೋಗುತ್ತಿದ್ದೇನೆ. ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಗೆ ಕಿರುಕುಳ ನೀಡುವುದು, ಕಾಲೆಳೆಯುವುದು ಮಾಡಬಾರದು'' ಎಂದು ವನಿತಾ ವಿಜಯ್ ಕುಮಾರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

  ಮೂರನೇ ಮದುವೆಯಾದ ವನಿತಾಗೆ ಮರುದಿನವೇ ಎದುರಾಯ್ತು ಸಂಕಷ್ಟ!ಮೂರನೇ ಮದುವೆಯಾದ ವನಿತಾಗೆ ಮರುದಿನವೇ ಎದುರಾಯ್ತು ಸಂಕಷ್ಟ!

  10ಕ್ಕೆ 1 ಅಂಕ ನೀಡಿದ ರಮ್ಯಾಕೃಷ್ಣನ್?

  10ಕ್ಕೆ 1 ಅಂಕ ನೀಡಿದ ರಮ್ಯಾಕೃಷ್ಣನ್?

  'ಬಿಗ್ ಬಾಸ್ ಜೋಡಿಗಳ್' ಕಾರ್ಯಕ್ರಮದಲ್ಲಿ ರಮ್ಯಾಕೃಷ್ಣನ್ ಸಹ ತೀರ್ಪುಗಾರ್ತಿ. ವನಿತಾ ಅವರ ಡ್ಯಾನ್ಸ್‌ ಪರ್ಫಾಮೆನ್ಸ್‌ಗೆ 10ಕ್ಕೆ 1 ಅಂಕ ನೀಡಿದರು. ಇದರಿಂದ ತೀವ್ರವಾಗಿ ಬೇಸರಗೊಂಡ ನಟಿ ವನಿತಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. 'ಸಿನಿಮಾ ವಿಕಟನ್' ಈ ಕುರಿತು ಪ್ರತಿಕ್ರಿಯೆ ಪಡೆಯಲು ರಮ್ಯಾಕೃಷ್ಣನ್‌ರನ್ನು ಸಂಪರ್ಕಿಸಿದಾಗ 'ನೋ ಕಾಮೆಂಟ್ಸ್' ಎಂದರಂತೆ.

  ವನಿತಾ ಅವರನ್ನೇ ಕೇಳಬೇಕು

  ವನಿತಾ ಅವರನ್ನೇ ಕೇಳಬೇಕು

  ಈ ಘಟನೆಗೆ ಬಗ್ಗೆ ಪ್ರತಿಕ್ರಿಯಿಸಿದ ರಮ್ಯಾ ಕೃಷ್ಣನ್ ''ಸೆಟ್‌ನಲ್ಲಿ ಏನಾಯ್ತು ಎಂದು ನೀವು ವನಿತಾ ವಿಜಯ್ ಕುಮಾರ್ ಅವರನ್ನೇ ಕೇಳಬೇಕು. ನನ್ನ ಪ್ರಕಾರ ಇದು ಒಂದು ಸಮಸ್ಯೆಯಲ್ಲ. ಹೀಗಿದ್ದ ಮೇಲೂ ನನ್ನ ಪ್ರತಿಕ್ರಿಯೆ ಬೇಕು ಅಂದ್ರೆ ಅದಕ್ಕೆ 'ನೋ ಕಾಮೆಂಟ್ಸ್' ಅಷ್ಟೇ'' ಎಂದು ತಿಳಿಸಿದರಂತೆ.

  'ಪಡೆಯಪ್ಪಾ' ಪ್ರದರ್ಶನ ವೇಳೆ ರಮ್ಯಾ ಕೃಷ್ಣನ್ ಮೇಲೆ ಚಪ್ಪಲಿ ಎಸೆದಿದ್ದರಂತೆ'ಪಡೆಯಪ್ಪಾ' ಪ್ರದರ್ಶನ ವೇಳೆ ರಮ್ಯಾ ಕೃಷ್ಣನ್ ಮೇಲೆ ಚಪ್ಪಲಿ ಎಸೆದಿದ್ದರಂತೆ

  ಸಿಂಪಲ್ ಪೂಜೆ ಮೂಲಕ ಗೃಹ ಪ್ರವೇಶ ಮಾಡಿದ Yash Radhika ! | Yash House Warming Ceremony | Filmibeat Kannada
  ಸಾಧಿಸುವವರ ಜೊತೆ ನಿಲ್ಲಬೇಕು

  ಸಾಧಿಸುವವರ ಜೊತೆ ನಿಲ್ಲಬೇಕು

  ''ಎಲ್ಲ ರೀತಿಯಲ್ಲೂ ನಿಮಗೆ ಹಿರಿಯರಾದವರು ಗುರಿ ಮುಟ್ಟಲು ಹೆಣಗಾಡುತ್ತಿರುವ ಯುವಕರನ್ನು ಕೀಳಾಗಿ ಕಾಣುವುದು, ಅವರನ್ನು ಅವಮಾನಿಸುವುದು ಮತ್ತು ಅವರನ್ನು ನಿರುತ್ಸಾಹಗೊಳಿಸುವುದನ್ನು ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ಅದರಲ್ಲೂ ಕುಟುಂಬದ ಬೆಂಬಲವಿಲ್ಲದೇ, ಗಂಡನ ಸಹಾಯವಿಲ್ಲದೇ ಮೂರು ಮಕ್ಕಳ ತಾಯಿ ಸಾಧಿಸಲು ಹೊರಟಾಗ ಒಬ್ಬ ಮಹಿಳೆಯಾಗಿ ಇನ್ನೊಬ್ಬ ಮಹಿಳೆಯ ಜೊತೆನಿಲ್ಲಬೇಕು'' ಎಂದು ವನಿತಾ ವಿಜಯ್ ಕುಮಾರ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

  English summary
  Bigg boss fame Vanitha vijayakumar quits bb jodigal, senior actress and show judge ramya krishnan react.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X