3 ಮದುವೆ, 3 ವಿಚ್ಛೇದನ, 3 ಮಕ್ಕಳ ಜವಾಬ್ದಾರಿ ; ಮಾಜಿ ಪತಿಗಳಿಂದ ನಯಾ ಪೈಸೆ ಜೀವನಾಂಶ ಪಡೆದಿಲ್ಲ ಎಂದ ಖ್ಯಾತ ನಟಿ

ಪ್ರೀತಿ ಅಂದರೆ ಹಾಗೇ ಜೀವನವನ್ನೇ ಬದಲಾಯಿಸುವ ಶಕ್ತಿ ಹೊಂದಿರುವ ಮಾಯಾಜಾಲ. ಮಧುರ ಪ್ರೀತಿಗೆ ತಂದೆ ತಾಯಿಯೂ ಬೇಡ, ಹಣ ಒಡವೆ ಕೂಡ ಬೇಡ. ಸಂಗಾತಿಯ ಮಾತಿನ ಕಚಗುಳಿಯ ನಡುವೆ ಸ್ಪರ್ಶದ ಸಿಂಚನ ಸಾಕು ಅನ್ಸುತ್ತೆ. ಬಿಟ್ಟಿರಲಾರದ ತವಕ, ಏನೂ ಬೇಡವೆನ್ನುವ ಭಾವ, ಹಸಿವು ಇಲ್ಲದ ಅದೆಷ್ಟೋ ಗಂಟೆಗಳು ಅವಳ ನೆನಪಲ್ಲೇ ಕಳೆದು ಹೋಗುತ್ತೆ.

ಆದರೆ ಈಗೀಗ ಪ್ರೀತಿಯ ಅರ್ಥ ಬದಲಾಗಿದೆ. ಅರ್ಥೈಸಿಕೊಳ್ಳುವ ರೀತಿ ಕೂಡ ಬದಲಾಗಿದೆ. ಎಂಥದ್ದೋ ತಿರುವುಗಳಲ್ಲಿ ಪ್ರೀತಿ ಅಂತ್ಯವಾದ ನಂತರ ಇಂಥದ್ದೊಂದು ಸಂಬಂಧವಿತ್ತು ಎನ್ನುವ ನೆನಪನ್ನು ಕೂಡ ಉಳಿಸದೆ ಹೋಗುವಷ್ಟು ಸಂಬಂಧಗಳು ವ್ಯವಹಾರಿಕವಾಗಿವೆ. ಸಂಬಂಧ ಮುರಿದು ಬಿದ್ದ ತಕ್ಷಣ ಅಲ್ಲಿ ಹಣದ ಲೆಕ್ಕಾಚಾರ ಶುರುವಾಗುತ್ತೆ. ಜೀವನಾಂಶದ ಪ್ರಶ್ನೆ ಎದ್ದೇಳುತ್ತೆ.

three-divorces-zero-alimony-vanitha-vijayakumar-s-price-of-independence

ಇನ್ನು ಸೆಲೆಬ್ರೆಟಿಗಳ ದಾಂಪತ್ಯ ಜೀವನ ಮುಕ್ತಾಯವಾದರೆ ಅಲ್ಲಿ ಲಕ್ಷಗಳಲ್ಲಿ ಎಲ್ಲ ಮಾತುಕತೆ ಮುಕ್ತಾಯವಾಗುವುದಿಲ್ಲ. ಬದಲಿಗೆ ಕೋಟಿಗಳಲ್ಲಿ ಸೆಟಲ್‌ಮೆಂಟ್ ಆಗುತ್ತೆ. ಇದಕ್ಕೆ ಚಿತ್ರರಂಗದಲ್ಲಿ ಹಲವಾರು ಉದಾಹರಣೆಗಳು ಕೂಡ ಇವೆ. ಹೀಗಿರುವಾಗ ಇಲ್ಲೊಬ್ಬರು ಮೂರು ಬಾರಿ ಮದುವೆಯಾಗಿದ್ದಾರೆ. ಮೂರು ಬಾರಿ ವಿಚ್ಚೇದನ ಪಡೆದಿದ್ದಾರೆ.

ಈ ಮೂರು ಮದುವೆಯ ಪೈಕಿ ಎರಡು ಮದುವೆಯಿಂದ ಇವರಿಗೆ ಮೂರು ಮಕ್ಕಳಿದ್ದಾರೆ. ಆದರೆ. ಯಾರ ಹತ್ತಿರವೂ ನಯಾ ಪೈಸೆಯನ್ನು ಜೀವನಾಂಶದ ರೂಪದಲ್ಲಿ ನಾನು ಪಡೆದಿಲ್ಲ ಎಂದು ಈ ನಟಿ ಹೇಳಿದ್ದಾರೆ. ಸ್ವಾಭಿಮಾನ ಮತ್ತು ಸ್ವಾವಲಂಬನೆಯ ಧ್ವಜ ಹಾರಿಸಿದ್ದಾರೆ. ಈ ಮೂಲಕ ಹಲವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ಬೇರೆ ಯಾರು ಅಲ್ಲ ಬದಲಿಗೆ ವನಿತಾ ವಿಜಯ್ ಕುಮಾರ್.

ಹೌದು, ವನಿತಾ ವಿಜಯ್ ಕುಮಾರ್ ... ತಮಿಳಿನ ಹಿರಿಯ ನಟ ವಿಜಯ್ ಕುಮಾರ್ ಹಾಗೂ ದಿವಂಗತ ತಮಿಳು ನಟಿ ಮಂಜುಳಾ ಅವರ ಮುದ್ದಿನ ಮಗಳು. ಇಳಯ ದಳಪತಿ ವಿಜಯ್ ಅಭಿನಯದ ''ಚಂದ್ರಲೇಖಾ'' ಚಿತ್ರಕ್ಕೆ ನಾಯಕಿಯಾಗುವ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ವನಿತಾ ಮೂರು ಚಿತ್ರಕ್ಕೆ ಮಾತ್ರ ಬಣ್ಣ ಹಚ್ಚಿ ಕಿರುತೆರೆಯತ್ತ ಮುಖ ಮಾಡಿದರು. ಆ ನಂತರ ಮತ್ತೆ ಬೆಳ್ಳಿ ತೆರೆಗೆ ಮರಳುವ ಪ್ರಯತ್ನವನ್ನೂ ಮಾಡಿದರು.

ಆದರೆ.. ಅಷ್ಟರಲ್ಲಿ ಆಗಲೇ ಕಾಲಿವುಡ್‌ನಲ್ಲಿ ಅರ್ಧ ಬಾಗಿಲು ಇವರಿಗೆ ಮುಚ್ಚಿ ಹೋಗಿತ್ತು. ಹೀಗಾಗಿ ಪೋಷಕ ಪಾತ್ರಗಳಿಗೆ ಸೀಮಿತವಾದವರು ವನಿತಾ ವಿಜಯ್ ಕುಮಾರ್. ಹೀಗೆ ಪೋಷಕ ನಟಿಯಾದ ವನಿತಾ ವಿಜಯ್ ಕುಮಾರ್ 2000ನೇ ಇಸ್ವಿಯಲ್ಲಿ ಕಿರುತೆರೆ ನಟ ಆಕಾಶ್ ಎಂಬುವರ ಜೊತೆ ಸಪ್ತ ಪದಿ ತುಳಿದರು. ವಿಜಯ್ ಶ್ರೀ ಹರಿ ಮತ್ತು ಜೋವಿಕಾ ಎಂಬ ಇಬ್ಬರು ಮಕ್ಕಳ ತಾಯಿಯೂ ಆದರು. ಆದರೆ, ಆ ನಂತರ ಈ ದಾಂಪತ್ಯ ಮುರಿದು ಬಿತ್ತು.

three-divorces-zero-alimony-vanitha-vijayakumar-s-price-of-independence

ಆಕಾಶ್ ಅವರಿಂದ ದೂರವಾದ ನಂತರ ಆನಂದದ ಹುಡುಕಾಟದಲ್ಲಿ 2007ರಲ್ಲಿ ಆನಂದ್ ಜೇ ರಾಜನ್‌ ಎಂಬ ಉದ್ಯಮಿಯನ್ನೂ ಮದುವೆಯಾದ ವನಿತಾ ಅವರಿಗೆ ಜಯನಿತಾ ಜನಿಸಿದರು. ಆದರೆ.. ಈ ಬಾರಿ ಕೂಡ ಇವರ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಗಂಡ-ಹೆಂಡ್ತಿ ಸಂಬಂಧ 2012ರಲ್ಲಿ ಮುರಿದು ಬಿತ್ತು.

ಆನಂದ್ ಅವರಿಂದ ದೂರವಾದ ನಂತರ ನಿರ್ದೇಶಕ ರಾಬರ್ಟ್ ಜೊತೆ ವನಿತಾ ವಿಜಯ್ ಕುಮಾರ್ ಹೆಸರು ಕೇಳಿ ಬಂತು. ಇಬ್ಬರು ಮದುವೆಯಾಗದೇ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎಂದು ಇಡೀ ಚೆನ್ನೈ ಮಾತನಾಡಿಕೊಂಡಿತು.

ಆದರೆ.. ಆ ನಂತರ 2020ರಲ್ಲಿ ಲಾಕ್‌ ಡೌನ್‌ನಿಂದ ವಿಶ್ವ ಸ್ತಬ್ಧವಾದಾಗ 3 ಮಕ್ಕಳೆದುರು ವನಿತಾ ವಿಜಯ್ ಕುಮಾರ್ ವಿಎಫ್‌ಎಕ್ಸ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ ಬಂಧನಕ್ಕೆ ಒಳಗಾದರು. ಆದರೆ ಆ ನಂತರ ಕೇವಲ 04 ತಿಂಗಳಿನಲ್ಲಿ ತಮ್ಮ ಸಂಸಾರಕ್ಕೆ ಇಬ್ಬರು ಎಳ್ಳು-ನೀರು ಬಿಟ್ಟರು. ವನಿತಾ ಅವರಿಂದ ದೂರವಾದ ಕೆಲ ದಿನಗಳ ನಂತರ ಪೀಟರ್ ಪೌಲ್ ಇಹಲೋಕ ತ್ಯಜಿಸಿದರು.

ಇಂಥಾ ವನಿತಾ ವಿಜಯ್ ಕುಮಾರ್ ನಾನು ಯಾರ ಬಳಿಯೂ ಜೀವನಾಂಶ ಪಡೆದಿಲ್ಲ ಎಂದು ಹೇಳಿದ್ದಾರೆ. ಈ ಕುರಿತು ''IndiaGlitz'' ತಮಿಳು ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವನಿತಾ, ನನ್ನ ಹೆಸರಿನಲ್ಲಿ ಯಾವ ಆಸ್ತಿ ಕೂಡ ಇಲ್ಲ ಎಂದು ಹೇಳಿದ್ದಾರೆ.

ಆಸ್ತಿ-ಪಾಸ್ತಿಯ ಕಥೆ ಬಿಡಿ ಇರಲು ನನ್ನ ಹತ್ತಿರ ಸ್ವಂತ ಮನೆ ಕೂಡ ಇಲ್ಲ ಎಂದು ಹೇಳಿರುವ ವನಿತಾ, ನಾನು ನನ್ನ ದುಡಿಮೆಯಿಂದ ಏನೆಂದರೆ ಏನನ್ನೂ ಇಲ್ಲಿಯವರೆಗೆ ಖರೀದಿ ಮಾಡಿಲ್ಲ ಎಂದಿದ್ದಾರೆ. ಆಭರಣ, ಸ್ಥಿರ ಠೇವಣಿಗಳಂತಹ ಯಾವುದೇ ಸ್ವತ್ತುಗಳು ತಮ್ಮ ಹೆಸರಿನಲ್ಲಿಲ್ಲ ಎಂದು ಹೇಳಿರುವ ವನಿತಾ ನನಗಾಗಿ ಯಾರು ಏನನ್ನೂ ಮಾಡಿಲ್ಲ ಅಥವಾ ಕೊಟ್ಟಿಲ್ಲ ಎಂದಿದ್ದಾರೆ.

ಮೂರು ಬಾರಿ ಮದುವೆಯಾಯ್ತು, ವಿಚ್ಚೇದನ ಆಯ್ತು, ಆದರೆ.. ನಾನು ಯಾವತ್ತು ನನ್ನ ಮಾಜಿ ಪತಿಯರ ಬಳಿ ಜೀವನಾಂಶವನ್ನು ಕೇಳಿಲ್ಲ, ಅವರೆದುರು ಕೈ ಚಾಚಿಲ್ಲ ಎಂದು ಹೇಳಿರುವ ವನಿತಾ ವಿಜಯ್ ಕುಮಾರ್, ತಿಂಗಳ ಖರ್ಚು-ವೆಚ್ಚ, ಮಕ್ಕಳ ಲಾಲನೆ-ಪಾಲನೆ, ಎಲ್ಲವನ್ನೂ ನಾನೊಬ್ಬಳೇ ನಿಭಾಯಿಸಿದ್ದೇನೆ, ಮುಂದೆಯೂ ನಿಭಾಯಿಸುತ್ತೇನೆ ಎಂದಿದ್ಧಾರೆ. ಜೀವನಾಂಶ ಪಡೆಯದಿರುವುದು ನನ್ನ ವೈಯಕ್ತಿಕ ನಿರ್ಧಾರ ಎಂದಿದ್ಧಾರೆ.

ಸ್ವತಂತ್ರವಾಗಿ ಬದುಕಬೇಕು, ಸ್ವಂತ ಕಾಲ ಮೇಲೆ ನಿಲ್ಲಬೇಕು, ಯಾವತ್ತು ಯಾರ ಮೇಲೆಯೂ ಅವಲಂಬಿತವಾಗಿರಬಾರದು, ಎಷ್ಟೇ ಕಷ್ಟ ಆದರೂ ಸ್ವಾವಲಂಬಿಯಾಗಿ ಬದುಕಬೇಕು ಎಂಬ ಬದುಕಿನ ಪಾಠವನ್ನು 22ನೇ ವಯಸ್ಸಿನಲ್ಲಿಯೇ ನಾನು ಕಲಿತೆ ಎಂದು ಹೇಳಿರುವ ವನಿತಾ ವಿಜಯ್ ಕುಮಾರ್, ಕಳೆದ 25 ವರ್ಷಗಳಿಂದ ನಾನು ಹಲವರ ಜೊತೆ ಮದುವೆ ಆದರೆ, ಅದು ನನ್ನ ವೈಯಕ್ತಿಕ, ಆದರೆ ನಾನು ಯಾವತ್ತೂ ಯಾರ ಬಳಿಯೂ ಹಣ ಕೇಳಿಲ್ಲ ಎಂದು ಹೇಳಿದ್ದಾರೆ. ನನ್ನ ಈ ನಿಲುವು ಮತ್ತು ನಿರ್ಧಾರದ ಬಗ್ಗೆ ನನಗೆ ತುಂಬಾನೇ ಹೆಮ್ಮೆ ಇದೆ ಎಂದಿದ್ದಾರೆ.

English summary
Vanitha Vijayakumar stuns fans by revealing she never sought alimony despite two high-profile divorces. Discover the raw truth behind her decision to choose financial independence over legal settlements.
Read more about: divorce alimony kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X