ಮೂರನೇ ಪತಿ ಜೊತೆ ವನಿತಾ ವಿಜಯಕುಮಾರ್ ಮತ್ತೆ ಒಂದಾಗುವ ಯತ್ನ!
ತಮಿಳು ನಟಿ ಮತ್ತು ಬಿಗ್ ಬಾಸ್ ಮಾಜಿ ಸ್ಪರ್ಧಿ ವನಿತಾ ವಿಜಯ್ ಕುಮಾರ್ ಲಾಕ್ ಡೌನ್ ಸಮಯದಲ್ಲಿ ಮೂರನೇ ಮದುವೆಯಾಗಿದ್ದರು. ವಿ ಎಕ್ಸ್ ಎಫ್ ತಂತ್ರಜ್ಞ ಪೀಟರ್ ಪೌಲ್ ಜೊತೆ ಸರಳವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು.
ಆದ್ರೆ, ಅದೇನ್ ಆಯ್ತೋ ಗೊತ್ತಿಲ್ಲ. ಕೆಲವು ತಿಂಗಳ ಬಳಿಕ ಪತಿ ಪೀಟರ್ ಪೌಲ್ ನನಗೆ ಮೋಸ ಮಾಡಿದರು ಎಂದು ವನಿತಾ ವಿಜಯ್ ಕುಮಾರ್ ಹೇಳಿಕೊಂಡು ಕಣ್ಣೀರಿಟ್ಟಿದ್ದರು. ಅಲ್ಲಿಗೆ, ಇವರಿಬ್ಬರು ದೂರವಾಗಿದ್ದು ಖಚಿತವಾಗಿತ್ತು.
ಇದೀಗ, ಪೀಟರ್ ಪೌಲ್ ಜೊತೆ ಒಂದಾಗಲು ಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿದೆ. ಪೀಟರ್ ಜೊತೆ ಮತ್ತೆ ದಾಂಪತ್ಯ ನಡೆಸಲು ವನಿತಾ ಪ್ರಯತ್ನಿಸುತ್ತಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

ಈ ಸುದ್ದಿಗಳಿಗೆ ಬ್ರೇಕ್ ಹಾಕಿರುವ ವನಿತಾ ವಿಜಯ್ ಕುಮಾರ್ ''ಇದೆಲ್ಲ ಸುಳ್ಳು, ನಾನು ಪೀಟರ್ ಪೌಲ್ ಜೊತೆ ಒಂದಾಗುವ ಮಾತೇ ಇಲ್ಲ'' ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ವನಿತಾ ''ನನ್ನ ಬಗ್ಗೆ ಆಧಾರರಹಿತ ವದಂತಿಗಳನ್ನು ಪ್ರಸಾರ ಮಾಡಲಾಗುತ್ತಿದೆ. ನಾನು ಹಿಂತಿರುಗಲು ಪ್ರಯತ್ನಿಸುತ್ತಿದ್ದೇನೆ ಮತ್ತು ನನ್ನನ್ನು ತಿರಸ್ಕರಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ನನ್ನ ಜೀವನದಲ್ಲಿ ನಾನು ಎಂದಿಗೂ ತಿರಸ್ಕರಿಸದ ಕಾರಣ ಅಂತಹ ಭ್ರಮೆಗಳನ್ನು ವರದಿ ಮಾಡುವುದು ನಿಲ್ಲಿಸಿ'' ಎಂದು ಸರಣಿ ಟ್ವೀಟ್ ಮಾಡಿದ್ದಾರೆ.

ಅಂದ್ಹಾಗೆ, ವನಿತಾ ವಿಜಯ್ ಕುಮಾರ್ ಮತ್ತು ಪೀಟರ್ ಪೌಲ್ ಮದುವೆಯಲ್ಲಿ ತನ್ನ ಇಬ್ಬರು ಹೆಣ್ಣು ಮಕ್ಕಳು ಸಹ ಪಾಲ್ಗೊಂಡಿದ್ದರು. ಜೂನ್ ನಲ್ಲಿ ಹಸೆಮಣೆ ಏರಿದ್ದ ಈ ಜೋಡಿ ನಾಲ್ಕು ತಿಂಗಳೊಳಗೆ ಬೇರೆ ಬೇರೆ ಆಗಿದ್ದಾರೆ.


Click it and Unblock the Notifications











