ಏನೇ ಆಗಿದ್ರು ಅವ್ರೇ ನನ್ನ ಬಯೊಲಾಜಿಕಲ್ ಫಾದರ್.. ನಮ್ಮ ಅಪ್ಪ, ಅಮ್ಮ ದೂರಾಗೋಕೆ ರಾಧಿಕಾ ಕಾರಣ ಅದ್ಕೊಂಡಿದ್ದೆ
ತಮಿಳು ನಟಿ ವರಲಕ್ಷ್ಮಿ ಶರತ್‌ಕುಮಾರ್ ಕನ್ನಡ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. 'ಮಾಣಿಕ್ಯ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಮಿಂಚಿದ್ದರು. ಇನ್ನು ಆಕೆಯ ತಂದೆ ಶರತ್‌ಕುಮಾರ್ ಕೂಡ ಕನ್ನಡದ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಛಾಯಾ ಎಂಬುವವರನ್ನು ಮದುವೆಯಾಗಿದ್ದ ಶರತ್‌ಕುಮಾರ್ ಬಳಿಕ ಡಿವೋರ್ಸ್ ಪಡೆದಿದ್ದರು. ಅವರಿಬ್ಬರ ಮಗಳು ವರಲಕ್ಷ್ಮಿ.
ಡಿವೋರ್ಸ್ ಬಳಿಕ ನಟಿ ರಾಧಿಕಾ ಅವರನ್ನು ಶರತ್‌ಕುಮಾರ್ 2ನೇ ಮದುವೆ ಆಗಿದ್ದರು. ಅದಾಗಲೇ ಇಬ್ಬರನ್ನು ಮದುವೆಯಾಗಿ ರಾಧಿಕಾ ಕೂಡ ಡಿವೋರ್ಸ್ ಪಡೆದಿದ್ದರು. ಆರಂಭದಲ್ಲಿ ನಮ್ಮ ತಂದೆ ಹಾಗೂ ತಾಯಿ ಡಿವೋರ್ಸ್ ಪಡೆದು ದೂರಾಗಲು ರಾಧಿಕಾ ಆಂಟಿ ಕಾರಣ ಎಂದು ಭಾವಿಸಿದ್ದಾಗಿ ವರಲಕ್ಷ್ಮಿ ಹೇಳಿದ್ದಾರೆ. ರಯಾನೆ ಪಾಡ್‌ಕಾಸ್ಟ್‌ನಲ್ಲಿ ಈ ವಿಚಾರವನ್ನು ನೆನಪಿಸಿಕೊಂಡಿದ್ದಾರೆ.

ತಮ್ಮ ಪೋಷಕರ ವಿಚ್ಛೇದನ ಕುರಿತಂತೆ ಕಾಲಕ್ರಮೇಣ ತಮ್ಮ ದೃಷ್ಟಿಕೋನ ಹೇಗೆ ಬದಲಾಯಿತು ಎಂದು ವರಲಕ್ಷ್ಮಿ ಶರತ್‌ಕುಮಾರ್ ತಿಳಿಸಿದ್ದಾರೆ. ತಮ್ಮ ತಂದೆ ಶರತ್‌ಕುಮಾರ್ ಮತ್ತು ತಾಯಿ ಛಾಯಾ ಡಿವೋರ್ಸ್ ಸಂದರ್ಭದಲ್ಲಿ, ತಮಗೆ ಅಗಾಧ ಅಸಮಾಧಾನ ಹಾಗೂ ಸಾಕಷ್ಟು ಪ್ರಶ್ನೆಗಳಿದ್ದವು ಎಂದು ವರಲಕ್ಷ್ಮಿ ನೆನಪಿಸಿಕೊಂಡಿದ್ದಾರೆ. ಬಾಲ್ಯದಲ್ಲಿ ಶರತ್‌ಕುಮಾರ್ ಅವರ 2ನೇ ಪತ್ನಿ ನಟಿ ರಾಧಿಕಾ ಅವರನ್ನು ಬಹಳ ದೂಷಿಸಿದ್ದಾಗಿ ಹೇಳಿದ್ದಾರೆ. ಆದರೆ ಪ್ರಬುದ್ಧರಾದಂತೆ ಅಸಲಿ ವಿಚಾರ ಗೊತ್ತಾಯಿತು ಎಂದಿದ್ದಾರೆ. ಹಿಂದೆ ದ್ವೇಷ ಎಂದು ಕಂಡಿದ್ದು ನಂತರ ತಿಳುವಳಿಕೆಯಾಯಿತು. ಬಳಿಕ ಅವರಿಬ್ಬರು ಸಂಬಂಧವನ್ನು ಒಪ್ಪಿಕೊಂಡಿದ್ದಾಗಿ ಹೇಳಿದ್ದಾರೆ.
ಇತ್ತೀಚೆಗೆ ನನ್ನ ತಂದೆಯನ್ನು ಕ್ಷಮಿಸಿದೆ ಎಂದು ವರಲಕ್ಷ್ಮಿ ಹೇಳಿದ್ದಾರೆ. "ನನ್ನ ಪ್ರಕಾರ ಅಪ್ಪ ಅಂದ್ರೆ ಅಪ್ಪ. ಅವರೇ ನನಗೆ ಬಯೊಲಾಜಿಕಲ್ ಫಾದರ್. ಹಾಗಾಗಿ ಖಂಡಿತ ಗೌರವಿಸುತ್ತೇನೆ. ಆದರೆ ಅಪ್ಪ- ಅಮ್ಮ ದೂರಾಗಿದ್ದು ಬಹಳ ಕೋಪ ತಂದಿತ್ತು. ಅಪ್ಪ ಮತ್ತೊಂದು ಮತ್ತೊಂದು ಮದುವೆ ಆಗಿದ್ದು ಅದಕ್ಕೆ ಮತ್ತಷ್ಟು ಇಂಬು ನೀಡಿತ್ತು. ಆದರೆ ಬಳಿಕ ಆ ಕೋಪ ಕಮ್ಮಿ ಆಯಿತು. ಡಿವೋರ್ಸ್ ವಿಚಾರದಲ್ಲಿ ಇಬ್ಬರೂ ಒಳ್ಳೆ ನಿರ್ಧಾರ ತೆಗೆದುಕೊಂಡಿದ್ದಾರೆ. ಹಾಗಾಗಿ ಇಬ್ಬರೂ ಕೂಡ ಸಂತೋಷವಾಗಿದ್ದಾರೆ" ಎಂದು ವರಲಕ್ಷ್ಮಿ ತಿಳಿಸಿದ್ದಾರೆ.

ಮಲತಾಯಿ ರಾಧಿಕಾ ಬಗ್ಗೆ ಕೂಡ ವರಲಕ್ಷ್ಮಿ ಶರತ್‌ಕುಮಾರ್ ಮಾತನಾಡಿದ್ದಾರೆ. "ಅಪ್ಪ, ಅಮ್ಮನ ಸಂಬಂಧವನ್ನು ರಾಧಿಕಾ ಬಂದು ಮುರಿದರು ಎಂದು ಸಾಕಷ್ಟು ಜನ ಅಂದುಕೊಂಡಿದ್ದಾರೆ. ನೀವು ಹೇಗೆ ರಾಧಿಕಾ ಜೊತೆ ಅನ್ಯೋನ್ಯವಾಗಿರುತ್ತೀರಾ ಎಂದು ಕೇಳುತ್ತಾರೆ. ಯಾಕಂದರೆ ನಮ್ಮಪ್ಪ ಅಮ್ಮ ದೂರಾಗಲೂ ರಾಧಿಕಾ ಕಾರಣ ಅಲ್ಲ, ಅದಕ್ಕೆ ಎಂದು ನಾನು ಹೇಳ್ತೀನಿ. ಆಂಟಿ(ರಾಧಿಕಾ) ನಮ್ಮ ಅಪ್ಪನ ಜೀವನಕ್ಕೆ ಬಂದಾಗ ಆಕೆ ಜೊತೆ ನನಗೆ ಅಷ್ಟೇನು ಒಡನಾಡ ಇರಲಿಲ್ಲ. ಆಕೆಯಿಂದಲೇ ನಮ್ಮ ತಾಯಿ ಜೀವನ ಆ ರೀತಿ ಆಯ್ತು ಎಂದುಕೊಂಡಿದ್ದೆ ಅದಕ್ಕೆ ಕಾರಣ" ಎಂದು ವರಲಕ್ಷ್ಮಿ ವಿವರಿಸಿದ್ದಾರೆ.
ನಾನು ದೊಡ್ಡವಳಾದ ಬಳಿಕ ಎಲ್ಲಾ ವಿಷಯ ಅರ್ಥವಾಯಿತು. ಸದ್ಯ ಆಂಟಿ ಜೊತೆ ನನಗೆ ಒಳ್ಳೆ ರಿಲೇಷನ್‌ಶಿಪ್ ಇದೆ. ನಮ್ಮ ಅಮ್ಮನ ಜೊತೆ ಕೂಡ ಆಂಟಿಗೆ ಒಳ್ಳೆ ಅನುಬಂಧ ಇದೆ ಎಂದು ವರಲಕ್ಷ್ಮಿ ಶರತ್‌ಕುಮಾರ್ ತಿಳಿಸಿದ್ದಾರೆ. ತಮಿಳಿನಲ್ಲಿ ಹೀರೊ ಆಗಿ ಮಿಂಚಿದ್ದ ಶರತ್‌ಕುಮಾರ್ ಈಗ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾಜಕೀಯರಂಗದಲ್ಲಿ ಕೂಡ ಗುರ್ತಿಸಿಕೊಂಡಿದ್ದಾರೆ. 'ರಾಜಕುಮಾರ್', 'ಸಾರಥಿ' ಸೇರಿದಂತೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿ ಮೋಡಿ ಮಾಡಿದ್ದಾರೆ.
ಕಳೆದ ವರ್ಷವಷ್ಟೆ ನಿಕೊಲಸ್ ಸಚಿದೇವ್ ಎಂಬುವವರ ಜೊತೆ ವರಲಕ್ಷ್ಮಿ ಮದುವೆ ನಡೆದಿತ್ತು. ಈ ವರ್ಷ ವರಲಕ್ಷ್ಮಿ ನಟಿಸಿದ 4 ಸಿನಿಮಾಗಳು ಬಿಡುಗಡೆ ಆಗಿತ್ತು.


Click it and Unblock the Notifications











