ಖ್ಯಾತ ಉದ್ಯಮಿ ಜೊತೆ 'ಮಾಣಿಕ್ಯ' ನಟಿಯ ಮದುವೆ ವದಂತಿ: ಗರಂ ಆದ ವರಲಕ್ಷ್ಮಿ

ತೆಲುಗು ಚಿತ್ರರಂಗದ ಖ್ಯಾತ ನಟಿ ವರಲಕ್ಷ್ಮಿ ಶರತ್ ಕುಮಾರ್ ಮತ್ತೆ ಸುದ್ದಿಯಲ್ಲಿದ್ದಾರೆ. ಬೋಲ್ಡ್ ಹೇಳಿಕೆಗಳ ಮೂಲಕ ವರಲಕ್ಷ್ಮಿ ಆಗಾಗ ಸದ್ದು ಮಾಡುತ್ತಿರುತ್ತಾರೆ. ಈಗ ಮದುವೆ ವಿಚಾರವಾಗಿ ವರಲಕ್ಷ್ಮಿ ಹೆಸರು ಮತ್ತೆ ವೈರಲ್ ಆಗಿದೆ.

Recommended Video

Shwetha srivatsav playing with her cute daughter.

ಕನ್ನಡದಲ್ಲಿ ಮಾಣಿಕ್ಯ, ರನ್ನ ವಿಸ್ಮಯ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡಾಭಿಮಾನಿಗಳ ಮನಗೆದ್ದಿರುವ ವರಲಕ್ಷ್ಮಿ, ಸದ್ಯ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ವರಲಕ್ಷ್ಮಿ ಮದುವೆ ವಿಚಾರ ಸದ್ದು ಮಾಡುತ್ತಿದೆ. ಮಾಣಿಕ್ಯ ಸುಂದರಿ ಹಸೆಮಣೆ ಏರಲು ನಿರ್ಧರಿಸಿದ್ದು, ಚಿತ್ರರಂಗ ತೊರೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಮುಂದೆ ಓದಿ...

ಖ್ಯಾತ ಉದ್ಯಮಿ ಜೊತೆ ವರಲಕ್ಷ್ಮಿ ಮದುವೆ?

ಖ್ಯಾತ ಉದ್ಯಮಿ ಜೊತೆ ವರಲಕ್ಷ್ಮಿ ಮದುವೆ?

ವರಲಕ್ಷ್ಮಿ ಶರತ್ ಕುಮಾರ್ ಮದುವೆ ಆಗುತ್ತಿದ್ದಾರೆ. ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಭಾರತೀಯ ಕ್ರಿಕೆಟ್ ತಂಡದ ಜೊತೆ ಸಂಬಂಧ ಹೊಂದಿರುವ ಉದ್ಯಮಿ ಜೊತೆ ವರಲಕ್ಷ್ಮಿ ಡೇಟಿಂಗ್ ಮಾಡುತ್ತಿದ್ದಾರೆ. ಸಧ್ಯದಲ್ಲೇ ಇಬ್ಬರು ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಆ ಉದ್ಯಮಿ ಯಾರು ಎನ್ನುವುದು ರಿವೀಲ್ ಆಗಿಲ್ಲ.

ಲಾಕ್ ಡೌನ್ ಮುಗಿದ ಬಳಿಕ ವಿವಾಹ

ಲಾಕ್ ಡೌನ್ ಮುಗಿದ ಬಳಿಕ ವಿವಾಹ

ಸದ್ಯ ಕೊರೊನಾ ಲಾಕ್ ಡೌನ್ ನಿಂದ ಎಲ್ಲರೂ ಮನೆಯಲ್ಲಿಯೇ ಕಾಲಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ನಟಿ ವರಲಕ್ಷ್ಮಿ ಸಹ ಮನೆಯಲ್ಲಿಯೇ ಇದ್ದು ಮದುವೆ ತಯಾರಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಲಾಕ್ ಡೌನ್ ಮುಗಿದ ಬಳಿಕ ವರಲಕ್ಷ್ಮಿ ಖ್ಯಾತ ಉದ್ಯಮಿ ಜೊತೆ ಹಸೆಮಣೆ ಏರಲಿದ್ದಾರಂತೆ.

ಗರಂ ಆದ ನಟಿ ವರಲಕ್ಷ್ಮಿ

ಗರಂ ಆದ ನಟಿ ವರಲಕ್ಷ್ಮಿ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ವರಲಕ್ಷ್ಮಿ "ನನ್ನ ಮದುವೆ ಸುದ್ದಿ ನನಗೆ ಯಾಕೆ ಕೊನೆಗೆ ಗೊತ್ತಾಗುತ್ತೆ. ನಾನ್ ಸೆನ್ಸ್ ವದಂತಿಗಳು ಇವು. ಯಾಕೆ ಎಲ್ಲರಿಗೂ ನನ್ನ ಮದುವೆ ಬಗ್ಗೆ ಅಷ್ಟು ಆಸಕ್ತಿ. ನಾನು ಒಂದು ವೇಳೆ ಮದುವೆ ಆಗುವುದೇ ಆದರೆ ಎಲ್ಲರಿಗೂ ಗೊತ್ತಾಗುವ ಹಾಗೆ ಕೂಗಿ ಹೇಳುತ್ತೇನೆ. ಇದರ ಬಗ್ಗೆ ಬರೆಯುತ್ತಿರುವ ಮೀಡಿಯಾದವರಿಗೆ ಹೇಳುವುದೇನಂದರೆ ನಾನು ಮದುವೆ ಆಗುತ್ತಿಲ್ಲ, ಸಿನಿಮಾನೂ ಬಿಡ್ತಾ ಇಲ್ಲ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ವರಲಕ್ಷ್ಮಿ ಬ್ಯುಸಿ

ಸಾಲು ಸಾಲು ಸಿನಿಮಾಗಳಲ್ಲಿ ವರಲಕ್ಷ್ಮಿ ಬ್ಯುಸಿ

ವರಲಕ್ಷ್ಮಿ ಶರತ್ ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಸಿನಿಮಾ ಸೇರಿದಂತೆ ಸುಮಾರು 10 ಸಿನಿಮಾಗಳು ವರಲಕ್ಷ್ಮಿ ಕೈಯಲ್ಲಿವೆ. ಕನ್ನಡದಲ್ಲಿ ಸದ್ಯ ರಣಂ ಸಿನಿಮಾದಲ್ಲಿ ವರಲಕ್ಷ್ಮಿ ಅಭಿನಯಿಸುತ್ತಿದ್ದಾರೆ. ಇನ್ನೂ ತಮಿಳು ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳಿವೆ. ಕೈತುಂಬ ಸಿನಿಮಾಗಳನ್ನಿಟ್ಟುಕೊಂಡಿರುವ ನಟಿ, ಸದ್ಯಕ್ಕೆ ಮದುವೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

More from Filmibeat

English summary
Actress Varalaxmi Sarathkumar reaction about her wedding rumours.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X