ವರಲಕ್ಷ್ಮಿ ಶರತ್ ಕುಮಾರ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆ ಹ್ಯಾಕ್
ತಮಿಳು ನಟಿ ವರಲಕ್ಷ್ಮಿ ಶರತ್ ಕುಮಾರ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆಗಳನ್ನು ಅಪರಿಚಿತರು ಹ್ಯಾಕ್ ಮಾಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಡಿಸೆಂಬರ್ 2 ರಂದು ರಾತ್ರಿ ನಟಿಯ ಸಾಮಾಜಿಕ ಜಾಲತಾಣ ಖಾತೆ ಹ್ಯಾಕ್ ಮಾಡಿರುವುದಾಗಿ ಸ್ವತಃ ನಟಿ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಹ್ಯಾಕ್ ಆಗಿರುವ ಬಗ್ಗೆ ಕೂಡಲೇ ಎಚ್ಚೆತ್ತುಕೊಂಡ ನಟಿ ''ನನ್ನ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ಖಾತೆಯಿಂದ ಯಾವುದೇ ಅಸಭ್ಯ ಸಂದೇಶಗಳು ಬಂದಲ್ಲಿ ಎಚ್ಚವಾಗಿರಿ, ಅಕೌಂಟ್ ಹ್ಯಾಕ್ ಆಗಿದೆ'' ಎಂದು ತಿಳಿಸಿದ್ದಾರೆ.
ಪ್ರಸ್ತುತ ವರಲಕ್ಷ್ಮಿಯ ಟ್ವಿಟ್ಟರ್ ಖಾತೆ ಕಾರ್ಯನಿರ್ವಹಿಸುತ್ತಿಲ್ಲ. ನಟಿಯ ಟ್ವಿಟ್ಟರ್ ಖಾತೆ ಪರಿಶೀಲಿಸಿದರೆ ಓಪನ್ ಆಗ್ತಿಲ್ಲ. ತಮ್ಮ ಖಾತೆಯನ್ನು ಮರಳಿ ಪಡೆಯಲು ನಟಿ ಸೈಬರ್ ತಂಡವನ್ನು ಸಂಪರ್ಕಿಸಿದ್ದು, ಪ್ರಯತ್ನಿಸುತ್ತಿದ್ದಾರೆ.

ಫಾಲೋವರ್ಸ್‌ಗೆ ಮಾಹಿತಿ ನೀಡಿರುವ ವರಲಕ್ಷ್ಮಿ "ನನ್ನ ಇನ್ಸ್ಟಾಗ್ರಾಂ ಅಥವಾ ಟ್ವಿಟ್ಟರ್ ಖಾತೆಯಿಂದ ಯಾವುದೇ ಸಂದೇಶಗ ಬಂದರೂ ಅದರ ಬಗ್ಗೆ ಎಚ್ಚರವಹಿಸಿ. ನನ್ನ ಖಾತೆ ನನಗೆ ಸಿಕ್ಕ ನಂತರ ನಾನು ನಿಮ್ಮನ್ನು ಸಂಪರ್ಕಿಸುತ್ತೇನೆ. ನಿಮ್ಮ ನಿರಂತರ ಬೆಂಬಲಕ್ಕೆ ಧನ್ಯವಾದಗಳು, ಶೀಘ್ರದಲ್ಲೇ ನಿಮ್ಮನ್ನು ಆನ್‌ಲೈನ್‌ನಲ್ಲಿ ಮತ್ತೆ ನೋಡುತ್ತೇನೆ'' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರಲಕ್ಷ್ಮಿ ಕೊನೆಯದಾಗಿ 'ಡ್ಯಾನಿ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ 'ಜೀ-5' ಆನ್‌ಲೈನ್ ಚಾನಲ್‌ನಲ್ಲಿ ತೆರೆಕಂಡಿತ್ತು. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರವಿತೇಜ ಮತ್ತು ಶ್ರುತಿ ಹಾಸನ್ ನಟನೆಯ 'ಕ್ರ್ಯಾಕ್' ಸಿನಿಮಾದಲ್ಲಿ ವರಲಕ್ಷ್ಮಿ ನಟಿಸಿದ್ದು, ಈ ಚಿತ್ರ ಬಿಡುಗಡೆಗೆ ಸಜ್ಜಾಗಿದೆ.


Click it and Unblock the Notifications











