For Quick Alerts
  ALLOW NOTIFICATIONS  
  For Daily Alerts

  ಹೊಸ ಅವತಾರದಲ್ಲಿ 'ಮಾಣಿಕ್ಯ' ಸುಂದರಿ ವರಲಕ್ಷ್ಮೀ ಶರತ್ ಕುಮಾರ್

  |

  ಕಿಚ್ಚ ಸುದೀಪ್ ಅಭಿನಯದ 'ಮಾಣಿಕ್ಯ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟ ತಮಿಳು ನಟಿ ವರಲಕ್ಷ್ಮೀ ಶರತ್ ಕುಮಾರ್ ಈಗ ನಿರ್ದೇಶಕಿಯಾಗಿದ್ದಾರೆ. ಕಣ್ಣಮೂಚಿ ಸಿನಿಮಾ ಮೂಲಕ ವರಲಕ್ಷ್ಮೀ ನಿರ್ದೇಶನದಲ್ಲಿ ಅದೃಷ್ಟ ಪರೀಕ್ಷೆಗೆ ನಿಂತಿದ್ದಾರೆ.

  ಅಂದ್ಹಾಗೆ ವರಲಕ್ಷ್ಮೀ ನಿರ್ದೇಶನದ ಮೊದಲ ಸಿನಿಮಾದ ಫಲ್ಟ್ ಲುಕ್ ರಿಲೀಸ್ ಆಗಿದೆ. ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಮತ್ತು ಸಿನಿಮಾರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಫಸ್ಟ್ ಲುಕ್ ಶೇರ್ ಮಾಡಿ ನಟಿ ವರಲಕ್ಷ್ಮೀ, 'ಅಂತಿಮವಾಗಿ ನಿರ್ದೇಶಕಿಯಾಗಿ ಹೊಸ ಅವತಾರಕ್ಕೆ ಕಾಲಿಟ್ಟಿದ್ದೀನಿ. ನಮ್ಮ ಅದ್ಭುತ ಮತ್ತು ಶುಭಾಹಾರೈಕೆಗಳಿಗೆ ಧನ್ಯವಾದಗಳು. ಅತ್ಯುತ್ತಮ ಕೆಲಸ ಮಾಡಲು ನಾನು ಶ್ರಮಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

  ಮುತ್ತಯ್ಯ ಮುರಳೀಧರನ್ ಬಯೋಪಿಕ್ ರಿಜೆಕ್ಟ್ ಮಾಡಿದ ಯುವ ನಟ

  ಅಂದ್ಹಾಗೆ ಈ ಸಿನಿಮಾವನ್ನು ನಟ ವಿಜಯ್ ಅಭಿನಯದ ಮೆರ್ಸಲ್ ಸಿನಿಮಾ ನಿರ್ಮಾಣ ಮಾಡಿದ್ದ ತೆನಾಡಲ್ ಫಿಲ್ಮ್ ಬಂಡವಾಳ ಹೂಡುತ್ತಿದೆ. ಕಣ್ಣಮೂಚ್ಚಿ ಮಹಿಳಾ ಕೇಂದ್ರಿತ ಥ್ರಿಲ್ಲರ್ ಸಿನಿಮಾವಾಗಿದೆ. ಈ ಸಿನಿಮಾ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಸಮಾಜದಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ಹೇಳಲಾಗುತ್ತಿದೆ.

  ಕಣ್ಣಮೂಚ್ಚಿ ಚಿತ್ರದ ಫಸ್ಟ್ ಅನ್ನು ಖ್ಯಾತ ನಟಿಯರಾದ ಖುಷ್ಬೂ, ರಾಧಿಕಾ ಶರತ್ ಕುಮಾರ್, ಲಕ್ಷ್ಮೀ ಮಂಚು, ಆಂಡ್ರಿಯಾ, ಕಾಜಲ್ ಅಗರ್ವಾಲ್, ತಾಪ್ಸಿ ಸೇರಿದಂತೆ ಅನೇಕರು ಫಸ್ಟ್ ಲುಕ್ ಶೇರ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada

  ವರಲಕ್ಷ್ಮೀ ನಿರ್ದೇಶನದ ಜೊತೆಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಕನ್ನಡ 'ರಣಂ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ವರಲಕ್ಷ್ಮೀ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Tamil Actress Varalakshmi Sarathkumar turns director with a film titled Kannamoochi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X