ನಯನತಾರ ಜಾತಕದಲ್ಲಿ ಸಂತಾನಯೋಗ ಇಲ್ಲ, ಮದ್ವೆಗೂ ಮುನ್ನ ಮಕ್ಕಳಿಗಾಗಿ ಏನ್ಮಾಡಿದ್ರು ಅಂದ್ರೆ?; ವೇಣುಸ್ವಾಮಿ
ಟಾಲಿವುಡ್ ಸೆಲೆಬ್ರೆಟಿಗಳ ಬಗ್ಗೆ ಭವಿಷ್ಯ ಹೇಳಿ ನೇಮು ಫೇಮು ಸಂಪಾದಿಸಿಕೊಂಡವರು ವೇಣುಸ್ವಾಮಿ. ನಾಗಚೈತನ್ಯಾ- ಸಮಂತಾ ಡಿವೋರ್ಸ್ ವಿಚಾರದಲ್ಲಿ ಈತನ ಭವಿಷ್ಯ ನಿಜವಾಗಿತ್ತು. ಅದೇ ಕಾರಣಕ್ಕೆ ಈತನ ಹೇಳಿಕೆಗಳನ್ನು ಕೆಲವರು ಗಂಭೀರವಾಗಿ ಪರಿಗಣಿಸುತ್ತಾರೆ. ಇದೀಗ ನಯನತಾರ ಬಗ್ಗೆಯೂ ಇದೇ ರೀತಿ ಮಾತನಾಡಿ ಗಮನ ಸೆಳೆದಿದ್ದಾರೆ.
ನಟಿಯರಾದ ರಶ್ಮಿಕಾ ಮಂದಣ್ಣ, ನಿಧಿ ಅಗರ್ವಾಲ್, ಅಶು ರೆಡ್ಡಿ, ಡಿಂಪಲ್ ಹಯಾತಿ ಸೇರಿದಂತೆ ಕೆಲ ನಟಿಯರು ವೇಣುಸ್ವಾಮಿ ವಿಶೇಷ ಪೂಜೆ ಮಾಡಿಸಿದ್ದಾರೆ. ರಶ್ಮಿಕಾ ತನ್ನ ಬಳಿ ತಾರಾದೇವಿ ಪೂಜೆ ಮಾಡಿಸಿದ ಬಳಿಕವೇ ಆಕೆಗೆ ಸಕ್ಸಸ್ ಸಿಕ್ಕಿದ್ದು ಎಂದು ವೇಣುಸ್ವಾಮಿ ಹೇಳಿಕೊಳ್ಳುತ್ತಾರೆ. ಇದೆಲ್ಲದರ ನಡುವೆ ನಯನತಾರ- ವಿಘ್ನೇಶ್ ಶಿವನ್ ಬಗ್ಗೆ ಹೇಳಿರುವ ವಿಚಾರಗಳು ಭಾರೀ ವೈರಲ್ ಆಗುತ್ತಿದೆ.

ತಮಿಳು ನಟಿ ನಯನತಾರ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಪರಸ್ಪರ ಪ್ರೀತಿಸಿ 2022, ಜೂನ್ 9ರಂದು ಹಸೆಮಣೆ ಏರಿದ್ದರು. ಮದುವೆಯಾದ 4 ತಿಂಗಳಿಗೆ ದಂಪತಿ ಅವಳಿ ಮಕ್ಕಳ ಪೋಷಕರಾಗಿರುವುದಾಗಿ ಘೋಷಿಸಿದರು. ಇದು ಅಭಿಮಾನಿಗಳಿಗೆ ಶಾಕ್ ತಂದಿತ್ತು. ಬಳಿಕ ಸಾರೋಗಸಿ ವಿಧಾನದಲ್ಲಿ ದಂಪತಿ ಮಕ್ಕಳನ್ನು ಪಡೆದ ವಿಚಾರ ಬಯಲಾಗಿತ್ತು. ಈ ಬಗ್ಗೆ ವಿವಾದವೂ ಸೃಷ್ಟಿಯಾಗಿತ್ತು. ಬಳಿಕ ಎಲ್ಲವೂ ತಣ್ಣಗಾಗಿತ್ತು.
ನಯನ್- ವಿಘ್ನೇಶ್ ಸದ್ಯ ಮಕ್ಕಳ ಲಾಲನೆ ಪಾಲನೆ ಜೊತೆಗೆ ತಮ್ಮ ತಮ್ಮ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಂದ ಹಾಳಾಗುತ್ತದೆ ಎನ್ನುವ ಕಾರಣಕ್ಕೆ ನಯನತಾರಾ ಸಾರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆದರು ಎನ್ನುವ ಚರ್ಚೆಯೂ ಆಗ ನಡೆದಿತ್ತು. ಆದರೆ ಇದೆಲ್ಲ ಸುಳ್ಳು ಎಂದು ವೇಣುಸ್ವಾಮಿ ಹೇಳಿದ್ದಾರೆ. ನಯನತಾರ ಜಾತಕದಲ್ಲಿ ಸಂತಾನಯೋಗವೇ ಇಲ್ಲ ಎಂದು ವಿವರಿಸಿದ್ದಾರೆ.
"ನಯನತಾರ ತನ್ನ ಪಿಜಿಕ್ ಡ್ಯಾಮೇಜ್ ಆಗುತ್ತದೆ ಎನ್ನುವ ಕಾರಣಕ್ಕೆ ಸಾರೋಗಸಿ ಪದ್ಧತಿಯಲ್ಲಿ ಮಕ್ಕಳು ಪಡೆದರು ಎಂದುಕೊಳ್ಳುತ್ತಾರೆ. ಆದರೆ ನನ್ನ ಪ್ರಕಾರ ಆಕೆಯ ಜಾತಕದಲ್ಲಿ ಸಂತಾನಯೋಗ ಇಲ್ಲದ ಕಾರಣ, ಎನ್ನುವದು ವೇಣುಸ್ವಾಮಿಗೆ ಗೊತ್ತು. ಕಾಜಲ್ ಅಗರ್‌ವಾಲ್ ಮದುವೆ ಆಗಿ ಒಂದು ಮಗುವಿನ ತಾಯಿಯಾದ ಬಳಿಕ ಮತ್ತೆ ಅದೇ ಚಾರ್ಮ್‌ನಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ" ಎಂದು ಉದಾಹರಣ ಕೊಟ್ಟಿದ್ದಾರೆ.

"ಸಾಕಷ್ಟು ಜನ ನಟಿಯರು ಇದೇ ರೀತಿ ಮಕ್ಕಳನ್ನು ಹೆತ್ತ ಬಳಿಕ ಬಂದು ನಾಯಕಿಯರಾಗಿ ನಟಿಸುತ್ತಿದ್ದಾರೆ. ಹಾಗಾಗಿ ನಯನತಾರಾ ಸಾರೋಗಸಿ ಪದ್ಧತಿ ಆಯ್ಕೆ ಮಾಡಿಕೊಳ್ಳಲು ಆಕೆಯ ಪಿಜಿಕ್ ಏರುಪೇರಾಗುತ್ತದೆ ಎನ್ನುವ ಕಾರಣಕ್ಕೆ ಅಲ್ಲ" ಎಂದು ಹೇಳಿದ್ದರು. ಇನ್ನು ನಯನತಾರಾ ಹಾಗೂ ವಿಘ್ನೇಶ್ ಮದುವೆಗೂ ಮುನ್ನದೇ ಸಾರೋಗಸಿ ಪದ್ಧತಿ ಒಪ್ಪಂದ ಮಾಡಿಕೊಂಡಿದ್ದರು ಎನ್ನುವ ಚರ್ಚೆ ಕೂಡ ನಡೆದಿತ್ತು.
ಬಾಡಿಗೆ ತಾಯ್ತನದಿಂದ ಮಗು ಪಡೆಯಲು ಅನುಸರಿಸಬೇಕಾದ ನಿಯಮಗಳನ್ನು ವಿಕ್ಕಿ-ನಯನ್ ದಂಪತಿ ಪಾಲಿಸಿಲ್ಲ ಎಂದು ಗುಲ್ಲಾಗಿತ್ತು. ಇನ್ನು ಮದುವೆಗೂ 4 ತಿಂಗಳು ಮುನ್ನ ಜೋಡಿ ಸಾರೋಗಸಿ ಮೂಲಕ ಮಗು ಪಡೆಯಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಕೊನೆಗೆ ಅದು ನಿಜವಾಗಿತ್ತು. ಇನ್ನು ಸರ್ಕಾರದ ತನಿಖೆ ಬಳಿಕ ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವಲ್ಲಿ ವಿಕ್ಕಿ-ನಯನ್ ಯಾವುದೇ ನಿಯಮ ಮೀರಿಲ್ಲ ಎನ್ನಲಾಯಿತು.
ಕಳೆದ ವರ್ಷ 'ಜವಾನ್' ಚಿತ್ರದಲ್ಲಿ ನಟಿಸಿ ನಯನತಾರಾ ಸಕ್ಸಸ್ ಕಂಡರು. ಬಾಲಿವುಡ್ ಪ್ರವೇಶಿಸಿ ಕಮಾಲ್ ಮಾಡಿದ್ದರು. ಬಳಿಕ ಬಂದ 'ಅನ್ನಪೂರ್ಣಿ' ಸಿನಿಮಾ ವಿವಾದಕ್ಕೆ ಕಾರಣವಾಗಿತ್ತು. 'ಟೆಸ್ಟ್', 'ಮನ್ನಗಟ್ಟಿ ಸಿನ್ಸ್ 1960' ಎನ್ನುವ ಮತ್ತೆರಡು ಸಿನಿಮಾಗಳಲ್ಲಿ ನಯನ್ ಸದ್ಯ ನಟಿಸುತ್ತಿದ್ದಾರೆ.


Click it and Unblock the Notifications











