ಅಯೋಧ್ಯೆ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ರಜನಿಕಾಂತ್‌ಗೆ ಅಧಿಕೃತ ಆಹ್ವಾನ

ಅಯೋಧ್ಯೆಯ ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ಗಣ್ಯರು ಮತ್ತು ಸೆಲಬ್ರಿಟಿಗಳಿಗೆ ಆಹ್ವಾನ ನೀಡಲಾಗುತ್ತಿದೆ. ಈ ಹಿಂದೆಯೇ ಹಿರಿಯ ನಟ ರಜನಿಕಾಂತ್ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಮಂಗಳವಾರ ಸೂಪರ್‌ಸ್ಟಾರ್ ರಜಿನಿಗೆ ಅಧಿಕೃತವಾಗಿ ಆಹ್ವಾನ ನೀಡಲಾಗಿದೆ.

ರಜನಿಕಾಂತ್‌ಗೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ

ಬಿಜೆಪಿ ನಾಯಕ ರಾ.ಅರ್ಜುನಮೂರ್ತಿ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಜನಿಕಾಂತ್ ಅವರಿಗೆ ಆಮಂತ್ರಣ ಪತ್ರ ನೀಡುತ್ತಿರುವ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ನಟ ರಜನಿಕಾಂತ್ ಆಮಂತ್ರಣ ಪತ್ರವನ್ನು ಹಿಡಿದಿದ್ದು, ಈ ವೇಳೆ ಬಿಳಿ ಕುರ್ತಾ ಧರಿಸಿದ್ದರು. ಈ ವೇಳೆ ತಮ್ಮ ಮನೆಯ ಮೇಲೆ ಇತರರೊಂದಿಗೆ ಪೋಸ್ ನೀಡಿದ್ದಾರೆ. ಚಿತ್ರಗಳನ್ನು ಹಂಚಿಕೊಂಡ ರಾ.ಅರ್ಜುನಮೂರ್ತಿ, "ಇಂದಿನ ಘಟನೆ ನನ್ನ ಜೀವನದ ಅತ್ಯುತ್ತಮ ಅನುಭವ!" ಎಂದಿದ್ದಾರೆ.

 Veteran actor Rajinikanth invited to Ram Temple inauguration ceremony in Ayodhya

ಫೋಟೋಗಳನ್ನು ಹಂಚಿಕೊಂಡ ಬಿಜೆಪಿ ನಾಯಕ ರಾ.ಅರ್ಜುನಮೂರ್ತಿ

ಬಿಜೆಪಿ ನಾಯಕ ರಾ.ಅರ್ಜುನಮೂರ್ತಿ ಕೆಲವು ಆರ್‌ಎಸ್‌ಎಸ್‌ ನಾಯಕರೊಂದಿಗೆ ರಜನಿಕಾಂತ್ ಮನೆಗೆ ತೆರಳಿ ಆಹ್ವಾನ ಪತ್ರಿಕೆ ನೀಡಿದ್ದಾರೆ. ಟ್ವಿಟರ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಅವರು, "ಇಂದಿನ ಘಟನೆ ನನ್ನ ಜೀವನದ ಅತ್ಯುತ್ತಮ ಅನುಭವ! ನಮ್ಮ ಆತ್ಮೀಯ ನಾಯಕರಾದ ರಜನಿಕಾಂತ್ ಮತ್ತು ಅವರ ಕುಟುಂಬವನ್ನು ಜನವರಿ 22 ರಂದು ನಡೆಯಲಿರುವ ಅಯೋಧ್ಯೆ ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆರ್‌ಎಸ್‌ಎಸ್ ಕಾರ್ಯಕರ್ತರೊಂದಿಗೆ ಅಯೋಧ್ಯೆ ರಾಮಜನ್ಮಭೂಮಿ ತೀರ್ಥ ಕ್ಷೇತ್ರದ ಪರವಾಗಿ ಅ ಆಹ್ವಾನಿಸಲು ನನಗೆ ತುಂಬಾ ಸಂತೋಷವಾಯಿತು" ಎಂದು ಹೇಳಿದ್ದಾರೆ.

ಅಯೋಧ್ಯೆ ರಾಮ ಮಂದಿರ ದೇವಸ್ಥಾನ

ಪ್ರಧಾನಿ ನರೇಂದ್ರ ಮೋದಿ ಅವರು ಪಾಲ್ಗೊಳ್ಳುವ ರಾಮಮಂದಿರದ 'ಪ್ರಾಣ ಪ್ರತಿಷ್ಠಾನ'ಕ್ಕೆ ಜನವರಿ 22 ರಂದು ಅಯೋಧ್ಯೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ರಾಮ ಮಂದಿರ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಈ ಹಿಂದೆ ತಿಳಿಸಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

ಅಯೋಧ್ಯೆ ರಾಮ ಮಂದಿರ ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವಿದ್ದು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.

ರಜನಿಕಾಂತ್ ಅವರ ಮುಂದಿನ ಚಿತ್ರಗಳು

ನಟ ರಜನಿಕಾಂತ್ ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಜೈಲರ್' ಚಿತ್ರದ ಯಶಸ್ಸಿನ ಖುಷಿಯಲ್ಲಿದ್ದಾರೆ. ಈ ಚಿತ್ರದಲ್ಲಿ ಮೋಹನ್ ಲಾಲ್, ಶಿವರಾಜಕುಮಾರ್ ಮತ್ತು ಜಾಕಿ ಶ್ರಾಫ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಮಗಳು ಐಶ್ವರ್ಯಾ ರಜನಿಕಾಂತ್ ಅವರ ಲಾಲ್ ಸಲಾಮ್ ಸಿನಿಮಾ ಮೂಲಕ ಬೆಳ್ಳಿ ಪರದೆಯ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಮುಂಬರುವ ತಿಂಗಳುಗಳಲ್ಲಿ, ಟಿಜೆ ಜ್ಞಾನವೇಲ್ ನಿರ್ದೇಶಿಸುತ್ತಿರುವ ಲೈಕಾ ಪ್ರೊಡಕ್ಷನ್ಸ್‌ನ 'ವೆಟ್ಟೈಯಾನ್‌'ನಲ್ಲಿ ಅವರು ಅಮಿತಾಬ್ ಬಚ್ಚನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದರಲ್ಲಿ ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ರಿತಿಕಾ ಸಿಂಗ್, ಮಂಜು ವಾರಿಯರ್ ಮತ್ತು ದುಶಾರಾ ವಿಜಯನ್ ಕೂಡ ನಟಿಸಿದ್ದಾರೆ.

More from Filmibeat

English summary
Rajinikanth invited to Ram Temple inauguration in Ayodhya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X