ಹಾಸ್ಯ ನಟಿ, ಡ್ಯಾನ್ಸ್ ಕೊರಿಯೋಗ್ರಫರ್ ಬಿಂದು ಘೋಷ್ ಕೊನೆಯುಸಿರು

ತಮಿಳು ನಟಿ, ಕೊರಿಯೋಗ್ರಫರ್ ಬಿಂದು ಘೋಷ್ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಆರ್ಥಿಕ ಸಮಸ್ಯೆ ಹಾಗೂ ವಯೋಸಹಜ ಕಾಯಿಲೆಯಿಂದ ಅವರು ಬಳಲುತ್ತಿದ್ದರು. ರಜನಿಕಾಂತ್, ವಿಜಯ್‌ಕಾಂತ್, ಕಮಲ್ ಹಾಸನ್ ರೀತಿಯ ಸ್ಟಾರ್ ನಟರ ಜೊತೆ ಬಿಂದು ಘೋಷ್ ನಟಿಸಿದ್ದರು.

500ಕ್ಕೂ ಅಧಿಕ ಸಿನಿಮಾಗಳಲ್ಲಿ ಸಹನಟಿಯಾಗಿ ಬಿಂದು ಘೋಷ್ ಬಣ್ಣ ಹಚ್ಚಿದ್ದರು. ತೆಲುಗಿನಲ್ಲಿ ಹಾಸ್ಯ ನಟ ಬ್ರಹ್ಮಾನಂದಂ ಜೋಡಿಯಾಗಿಯೂ ಅವರು ನಟಿಸಿದ್ದರು. ವಿಮಲಾ ಎನ್ನುವುದು ಅವರ ಮೂಲ ಹೆಸರು. ಚಿತ್ರರಂಗದಲ್ಲಿ ಬಿಂದು ಘೋಷ್ ಎಂದು ಗುರ್ತಿಸಿಕೊಂಡಿದ್ದರು. ಚಿಕ್ಕಂದಿನಲ್ಲೇ ಡ್ಯಾನ್ಸ್ ಕಲಿತಿದ್ದು ಆಕೆ 'ಕಳತ್ತೂರ್ ಕಣ್ಣಮ್ಮ' ಚಿತ್ರದಲ್ಲಿ ಸಹ ಡ್ಯಾನ್ಸರ್ ಆಗಿ ಹೆಜ್ಜೆ ಹಾಕಿದ್ದರು.

Veteran Actress Dance choreographer Bindu Ghosh Dies At 76

1982ರಲ್ಲಿ ಬಂದಿದ್ದ 'ಕೋಳಿ ಕೂವತ್ತು' ಚಿತ್ರದಲ್ಲಿ ಮೊದಲ ಬಾರಿಗೆ ಬಿಂದು ಘೋಷ್ ನಟಿಸಿದ್ದರು. ಮುಂದೆ ಸಾಲು ಸಾಲು ಸಿನಿಮಾಗಳಲ್ಲಿ ಮಿಂಚಿದ್ದರು. 'ಉರುವಂಗಲ್ ಮರಲಂ', 'ಡೌರಿ ಕಲ್ಯಾಣಂ', 'ತೂಂಗತೇ ತಂಬಿ ತೂಂಗತೇ', 'ಸೂರಕೊಟ್ಟೈ ಸಿಂಗಕುಟ್ಟಿ', 'ನೀಧಿಯಿನ್ ನಿಜಾಲ್', 'ನವಗ್ರಹ ನಾಯಗಿ' ಆಕೆ ನಟಿಸಿದ ಕೆಲ ಜನಪ್ರಿಯ ಚಿತ್ರಗಳು.

'ಪೆಳ್ಳಿ ಚೇಸಿ ಚೂಡು', ದೊಂಗ ಕಾಪುರಂ', 'ಕೃಷ್ಣಗಾರಿ ಅಬ್ಬಾಯಿ' ಸೇರಿ ಕೆಲ ತೆಲುಗು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. 'ಚಿತ್ರಂ ಭಲಾರೆ ವಿಚಿತ್ರಂ' ಎಂಬ ತೆಲುಗು ಚಿತ್ರದಲ್ಲಿ ಕೊನೆಯದಾಗಿ ಬಿಂದು ಘೋಷ್ ಕಾಣಿಸಿಕೊಂಡಿದ್ದರು. ಬಳಿಕ ಅವಕಾಶಗಳ ಕೊರತೆ ಎದುರಾಗಿತ್ತು. ಹಾಗಾಗಿ ಇದ್ದ ಮನೆಯನ್ನು ಮಾರಿಕೊಂಡು ಬಾಡಿಗೆ ಮನೆಗೆ ಹೋಗುವಂತಾಗಿತ್ತು. ಆಕೆಗೆ ಇಬ್ಬರು ಮಕ್ಕಳು. ಒಬ್ಬ ಮಗ ನೋಡಿಕೊಳ್ಳದೇ ಹೋದಾಗ ಮತ್ತೊಬ್ಬ ಮಗ ತಾಯಿಯ ಆರೈಕೆ ಮಾಡುತ್ತಿದ್ದರು. ಲಿವರ್ ಸಮಸ್ಯೆ ಸೇರಿದಂತೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಚಿಕಿತ್ಸೆಗಾಗಿ ಸಾಕಷ್ಟು ಹಣ ಖರ್ಚು ಮಾಡಿದ್ದರು.

ಚೆನ್ನೈನ ಆಸ್ಪತ್ರೆಯಲ್ಲಿ ಬಿಂದು ಘೋಷ್ ಚಿಕಿತ್ಸೆ ಪಡೆಯುತ್ತಿದ್ದರು. ನಟ ವಿಶಾಲ್, ನಟಿ ಶಕಿಲಾ ಸೇರಿದಂತೆ ಚಿತ್ರರಂಗದ ಕೆಲವರು ಆರ್ಥಿಕ ಸಹಾಯ ಮಾಡಿದ್ದರು. ತಮಿಳುನಾಡು ಸರ್ಕಾರ ಕೂಡ ಸಹಾಯ ಮಾಡಿತ್ತು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಹಿರಿಯ ನಟಿ ಚೇತರಿಸಿಕೊಂಡು ಮತ್ತೆ ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ(ಮಾರ್ಚ್ 16) ನಟಿ ಬಿಂದು ಘೋಷ್ ಕೊನೆಯುಸಿರೆಳೆದಿದ್ದಾರೆ.

More from Filmibeat

English summary
Bindu Ghosh Death: All You Need To Know About The Veteran Actress;
Read more about: actress kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X