'ಎರಡು ಕನಸು' ಸಿನಿಮಾ ನಟಿ ಪುಷ್ಪಲತಾ ಇನ್ನಿಲ್ಲ

ದಕ್ಷಿಣ ಭಾರತದ ಹಿರಿಯ ನಟಿ ಪುಷ್ಪಲತಾ ವಯೋಸಹಜ ಕಾಯಿಲೆಯಿಂದ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಕನ್ನಡದಲ್ಲಿ ಕೂಡ ಕೆಲ ಚಿತ್ರಗಳಿಗೆ ಬಣ್ಣ ಹಚ್ಚಿ ಗೆದ್ದಿದ್ದರು. ಡಾ. ರಾಜ್‌ಕುಮಾರ್ ನಟನೆಯ 'ಎರಡು ಕನಸು' ಚಿತ್ರದಲ್ಲಿ ಕೂಡ ಪುಷ್ಪಲತಾ ಬಣ್ಣ ಹಚ್ಚಿದ್ದರು.

ಒಂದ್ಕಾಲದಲ್ಲಿ ನಾಯಕಿಯಾಗಿ ಪುಷ್ಪಲತಾ ಮಿಂಚಿದ್ದರು. ಬಳಿಕ ನಿಧಾನವಾಗಿ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎವಿಎಂ ರಾಜು ಅವರ ಜೊತೆ ನಾಯಕಿಯಾಗಿ ನಟಿಸಿದ್ದರು. ಇದೇ ವೇಳೆ ಇಬ್ಬರೂ ಪ್ರೀತಿಸಿ 1964ರಲ್ಲಿ ಮದುವೆ ಆಗಿದ್ದರು. ದಶಕಗಳ ಹಿಂದೆಯೇ ಲಕ್ಸ್ ಸೋಪಿಗೆ ಅವರು ಮಾಡೆಲ್ ಆಗಿದ್ದು ವಿಶೇಷ. ಇವರು ಖ್ಯಾತ ನಟಿ ಮಹಾಲಕ್ಷ್ಮಿ ಅವರ ತಾಯಿ.

Veteran Actress Pushpalatha passes away at 87

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಹುಟ್ಟಿ ಬೆಳೆದ ಪುಷ್ಪಲತಾ ಚಿಕ್ಕಂದಿನಲ್ಲೇ ಭರತನಾಟ್ಯ ಕಲಿತರು. 'ನಲ್ಲ ತಂಗೈ' ಚಿತ್ರದ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಬಳಿಕ 'ಕೊಂಗ ನಾಟು ತಂಗಂ' ಚಿತ್ರದ ಮೂಲಕ ಮತ್ತೆ ನಟನೆ ಆರಂಭಿಸಿದ್ದರು. 50ರ ದಶಕದಲ್ಲೇ ಪುಷ್ಪಲತಾ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. 5 ದಶಕಗಳ ಕಾಲ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದರು.

ಪುಷ್ಪಲತಾ ಕ್ರಿಶ್ಚಿಯನ್. ಪತಿ ಎವಿಎಂ ರಾಜು ಹಿಂದೂ ಧರ್ಮದವಾಗಿದ್ದರು. ಸುಬ್ರಮಣ್ಯ ಸ್ವಾಮಿಯ ಪರಮಭಕ್ತರಾಗಿದ್ದರು. ಎರಡು ಸಿನಿಮಾಗಳು ನಿರ್ಮಿಸಿ ಪುಷ್ಪಲತಾ ಸೋತು ನಷ್ಟ ಅನುಭವಿಸಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಮಗಳು ಮಹಾಲಕ್ಷ್ಮಿ ಸಹ ಕನ್ನಡದ ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿದ್ದರು. ಇನ್ನು ಕ್ರೈಸ್ತ ಧರ್ಮಕ್ಕೆ ಕುಟುಂಬ ಸದಸ್ಯರು ಮತಾಂತರಗೊಂಡಿದ್ದರು.

ತಮಿಳು, ತೆಲುಗು, ಕನ್ನಡ, ಮಲಯಾಳಂ ಮಾತ್ರವಲ್ಲ ಒಂದು ಹಿಂದಿ ಚಿತ್ರದಲ್ಲಿ ಕೂಡ ಪುಷ್ಪಲತಾ ನಟಿಸಿದ್ದರು. 1974ರಲ್ಲಿ 'ಎರಡು ಕನಸು' ಚಿತ್ರದ ಪಾತ್ರವೊಂದರಲ್ಲಿ ಅವರು ನಟಿಸಿದ್ದರು. ಬಳಿಕ 'ಹೆಣ್ಣಿನ ಸೇಡು', 'ಒಲವೇ ಬದುಕು' ಹಾಗೂ 'ಜೀವನ ಜ್ಯೋತಿ' ಚಿತ್ರದಲ್ಲಿ ಪೋಷಕ ನಟಿಯಾಗಿ ಮಿಂಚಿದ್ದರು.

ತಮಿಳಿನಲ್ಲಿ ಶಿವಾಜಿ ಗಣೇಶನ್, ಎಂಜಿಆರ್, ಜೈಶಂಕರ್ ಸಿನಿಮಾಗಳಲ್ಲಿ ಪುಷ್ಪಲತಾ ನಟಿಸಿದ್ದರು. ತೆಲುಗಿನಲ್ಲಿ ಎನ್‌ಟಿಆರ್ ನಟಿಸಿದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. 'ಆಟಗಾಡು', 'ಘರಾನಾ ದೊಂಗ', 'ಕೊಂಡವೀಟಿ ಸಿಂಹಂ', 'ಇದ್ದರು ಕೊಡುಕುಲು', 'ರಕ್ತಬಂಧಂ' ತೆಲುಗಿನಲ್ಲಿ ಅವರು ನಟಿಸಿದ ಕೆಲ ಸಿನಿಮಾಗಳು. 'ಪೊಲೀಸ್‌ಕಾರನ್ ಮಗಳ್', 'ನಾನುಂ ಒರು ಪೆಣ್', 'ಕಟ್ಟು ರೋಜಾ', 'ಪಚ್ಚೈ ವಿಳಕ್ಕು', 'ರಕ್ತ ತಿಲಕಂ' 'ದೀರ್ಘ ಸುಮಂಗಲಿ' ತಮಿಳಿನಲ್ಲಿ ನಟಿಸಿದ ಕೆಲ ಚಿತ್ರಗಳು.

More from Filmibeat

English summary
South Actress Pushpalatha dies to age-related illness, she acted more then 100 films
Read more about: actress tamil kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X