ಧನುಶ್ ಕೈಬಿಟ್ಟು ವಿಜಯ್ ಕೈಹಿಡಿದ ನಿರ್ದೇಶಕ ವೆಟ್ರಿಮಾರನ್

ಅಸುರನ್, ವಡಾ ಚೆನ್ನೈ, ವಿಸಾರಣೈ ರೀತಿಯ ಸೂಕ್ಷ್ಮ ಹಾಗೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ವೆಟ್ರಿಮಾರನ್ ತಮಿಳಿನ ನಂಬರ್ 1 ಮಾಸ್ ಹೀರೋ ಜೊತೆ ಸಿನಿಮಾ ಮಾಡಲು ತಯಾರಾಗಿದ್ದಾರೆ.

Recommended Video

ಡಿಬಾಸ್ ದರ್ಶನ್ ಮುಂದಿನ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ | Filmibeat Kannada

ವೆಟ್ರಿಮಾರನ್ ನೈಜತೆಗೆ ಹತ್ತಿರವಾಗಿರುವ, ಸಮಾಜದ ಕಪ್ಪು ಎತ್ತಿತೋರಿಸುವ ಸಿನಿಮಾಗಳಿಗೆ ಖ್ಯಾತರು. ಇಂಥಹಾ ನಿರ್ದೇಶಕ ತಮಿಳುನಾಡಿನಲ್ಲಿ ಅತಿ ಹೆಚ್ಚು ಮಾಸ್ ಅಭಿಮಾನಿಗಳನ್ನು ಹೊಂದಿರುವ ವಿಜಯ್ ಜೊತೆಗೆ ಸಿನಿಮಾ ಮಾಡಲು ತಯಾರಾಗಿದ್ದಾರೆ.

ವೆಟ್ರಿಮಾರನ್ ಅವರ ಮುಂದಿನ ಸಿನಿಮಾಕ್ಕೆ ವಿಜಯ್ ನಾಯಕರಾಗಿದ್ದು, ಈ ಸಿನಿಮಾ ಭಾರಿ ಕುತೂಹಲ ಕೆರಳಿಸಿದೆ. ಧನುಶ್ ಹೊರತುಪಡಿಸಿ ಇನ್ನಾವ ಸ್ಟಾರ್ ನಟರಿಗೂ ಸಿನಿಮಾ ನಿರ್ದೇಶಿಸದಿದ್ದ ವೆಟ್ರಿಮಾರನ್ ಇತ್ತೀಚೆಗೆ ಅದನ್ನು ಮುರಿದು ಬೇರೆ ಸ್ಟಾರ್‌ಗಳಿಗೂ ಆಕ್ಷನ್-ಕಟ್ ಹೇಳುತ್ತಿದ್ದಾರೆ.

ಸೂರ್ಯ ಜೊತೆಗೆ ವಾಡಿವಾಸಲ್ ಸಿನಿಮಾ

ಸೂರ್ಯ ಜೊತೆಗೆ ವಾಡಿವಾಸಲ್ ಸಿನಿಮಾ

ನಿರ್ದೇಶಕ ವೆಟ್ರಿಮಾರನ್ ಪ್ರಸ್ತುತ ಸ್ಟಾರ್ ನಟ ಸೂರ್ಯ ನಾಯಕರಾಗಿರುವ 'ವಾಡಿವಾಸಲ್' ನಿರ್ದೇಶಿಸುತ್ತಿದ್ದಾರೆ. ಸಿನಿಮಾವು ಜಲ್ಲಿಕಟ್ಟು ವಿಷಯವನ್ನು ಒಳಗೊಂಡಿರುತ್ತದೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಕೊರೊನಾ ಕಾರಣಕ್ಕೆ ಬಂದ್ ಆಗಿದೆ.

ವಿಜಯ್ ಜೊತೆಗೆ ವೆಟ್ರಿಮಾರನ್

ವಿಜಯ್ ಜೊತೆಗೆ ವೆಟ್ರಿಮಾರನ್

ವಿಜಯ್ ಜೊತೆಗೆ ವೆಟ್ರಿಮಾರನ್ ಸಿನಿಮಾ ನಿರ್ದೇಶಿಸುವುದು ಬಹುತೇಕ ಖಚಿತವಾಗಿದೆ. ವಿಜಯ್ ಕೈಯಲ್ಲಿರುವ ಸಿನಿಮಾ ಒಂದನ್ನು ಮುಗಿಸಿದ ಬಳಿಕ ವೆಟ್ರಿಮಾರನ್ ಜೊತೆಗಿನ ಸಿನಿಮಾ ಸೆಟ್ಟೇರಲಿದೆ. ಇದರ ನಿರ್ಮಾಣವನ್ನು ಎಲ್ರೆಡ್ ಕುಮಾರ್ ಮಾಡಲಿದ್ದಾರೆ.

ಧನುಶ್‌ ಗಾಗಿ ರಚಿಸಿದ್ದ ಕತೆ

ಧನುಶ್‌ ಗಾಗಿ ರಚಿಸಿದ್ದ ಕತೆ

ಧನುಶ್‌ಗಾಗಿ ರಚಿಸಿದ್ದ ಕತೆಯನ್ನು ವೆಟ್ರಿಮಾರನ್ ವಿಜಯ್‌ ಸಿನಿಮಾಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಧನುಶ್ ಅವರ ಡೇಟ್ಸ್ ಹೊಂದಾಣಿಕೆಯಾಗದ ಕಾರಣ ವಿಜಯ್ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ, ಅವರಿಗಾಗಿ ಕತೆಯಲ್ಲಿ ಕೆಲ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ ವೆಟ್ರಿಮಾರನ್.

ಮಾಸ್ಟರ್‌ ಶೀಘ್ರದಲ್ಲಿ ತೆರೆಗೆ ಬರಲಿದೆ

ಮಾಸ್ಟರ್‌ ಶೀಘ್ರದಲ್ಲಿ ತೆರೆಗೆ ಬರಲಿದೆ

ವಿಜಯ್ ಅವರ ಮಾಸ್ಟರ್ ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು, ಚಿತ್ರಮಂದಿರಗಳು ತೆರೆದ ಕೂಡಲೇ ಪ್ರೇಕ್ಷಕರ ಮುಂದೆ ಬರಲಿದೆ. ಈ ಸಿನಿಮಾದಲ್ಲಿ ವಿಲನ್ ಆಗಿ ವಿಜಯ್ ಸೇತುಪತಿ ಇದ್ದಾರೆ.

More from Filmibeat

English summary
Director Vetrimaran directing movie for star actor Vijay. He is now doing vaadivasi movie with Suriya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X