Vettaiyan Box Office : ಕಡಿಮೆ ಆಯ್ತಾ ರಜಿನಿ ಕ್ರೇಜ್, ಒಂದು ವಾರದಲ್ಲಿ ವೆಟ್ಟೈಯಾನ್ ಗಳಿಸಿದ್ದೆಷ್ಟು..?

ಸೂಪರ್ ಸ್ಟಾರ್ ರಜಿನಿಕಾಂತ್ ಸಿನಿಮಾಗಳೆಂದರೆ ಅಲ್ಲಿ ಹಬ್ಬದ ವಾತಾವರಣ ಇರುತ್ತೆ. ಅಭಿಮಾನದ ಜಾತ್ರೆ ನಡೆಯುತ್ತೆ. ಟಿಕೆಟ್ ಬೆಲೆ ಗಗನಕ್ಕೇರಿರುತ್ತೆ. ಇನ್ನೂ ರಜಿನಿಕಾಂತ್ ಸಿನಿಮಾ ಅಂದರೆ ವ್ಯಾಪಾರ - ವ್ಯವಹಾರ ಎಲ್ಲವೂ ಮೊದಲೇ ನಡೆದಿರುತ್ತೆ. ದಾಖಲೆಯ ಮೊತ್ತಕ್ಕೆ ಚಿತ್ರದ ಹಕ್ಕುಗಳು ಬಿಡುಗಡೆಗೆ ಮುನ್ನವೇ ಬಿಕರಿಯೂ ಆಗಿರುತ್ತವೆ ಎನ್ನುವ ಮಾತು ಹೆಚ್ಚೇನ್ ಇಲ್ಲ ಕಳೆದ ಐದಾರು ವರ್ಷದ ಹಿಂದೆ ಕೇಳಿ ಬರುತ್ತಿತ್ತು.

ಆದರೆ ಈಗ ಪರಿಸ್ಥಿತಿ ಮೊದಲಿನಂತೆ ಇಲ್ಲ. ಮೊದಲೆಲ್ಲ ಮೊದಲ ದಿನವೇ ಕೋಟಿ ಹಣವನ್ನು ಕೊಳ್ಳೆ ಹೊಡೆಯುತ್ತಿದ್ದ ರಜಿನಿಯ ಚಿತ್ರಗಳು ಈಗ ಒಂದು ವಾರ ಕಳೆದರು ನೂರೈವತ್ತು ಕೋಟಿಯ ಗಡಿಯನ್ನು ತಲುಪುತ್ತಿಲ್ಲ. ಇದಕ್ಕೆ ವೆಟ್ಟೈಯಾನ್' ಸದ್ಯದ ಉದಾಹರಣೆ. ಹೌದು, ವೆಟ್ಟೈಯಾನ್ ತೆರೆಗೆ ಬಂದು ಆರು ದಿನಗಳಾಗಿವೆ. ಆದರೂ ಕೂಡ ಚಿತ್ರದ ಗಳಿಕೆ ಅಷ್ಟಕಷ್ಟೇ.

Vettaiyan Box Office 6 Days Rajinikanth s film crosses 200 crores but may struggle to hit 300 cr

ಬಿಡುಗಡೆಯಾದ ಮೊದಲ ದಿನ ಭಾರತದಲ್ಲಿ ಮೂವತ್ತೊಂದು ಕೋಟಿಯನ್ನು ಗಳಿಸಿದ್ದ ಈ ಚಿತ್ರ ಕಳೆದ ಸೋಮವಾರ ಅಂದರೆ ತನ್ನ ಐದನೇ ದಿನದಂದು ಗಳಿಸಿದ್ದು ಕೇವಲ ಐದು ಕೋಟಿಯನ್ನು ಮಾತ್ರ. ಮೊದಲನೇ ದಿನದಿಂದ ಐದನೇ ದಿನದವರೆಗೆ ಚಿತ್ರದ ಗಳಿಕೆಯಲ್ಲಿ ಶೇಕಡಾ 74 % ಕುಸಿತವಾಗಿದೆ. ಇನ್ನೂ ನಿನ್ನೆ ಭಾರತದಲ್ಲಿ 4.3 ಕೋಟಿಯನ್ನು ಗಳಿಸಿರುವ ಚಿತ್ರ ಇಂದು 4 ಕೋಟಿಯ ಗಡಿಯನ್ನು ಕೂಡ ತಲುಪುವಲ್ಲಿ ವಿಫಲವಾಗಿದೆ. ಚೆನ್ನೈ ಮತ್ತು ಬೆಂಗಳೂರು ಮಹಾ ಮಳೆಯಿಂದ ತತ್ತರಿಸಿರುವ ಕಾರಣ ಇವೆರಡು ಪ್ರೇಕ್ಷಕರ ಕೊರತೆ ಎದ್ದು ಕಾಣುತ್ತಿದೆ.

ಹೀಗೆ ಈ ಆರು ದಿನದಲ್ಲಿ ಭಾರತದಲ್ಲಿ 117 ಕೋಟಿಯನ್ನು ಗಳಿಸಿರುವ ವೆಟ್ಟೈಯಾನ್ ಹೊರದೇಶದಲ್ಲಿ ಇಲ್ಲಿಯವರೆಗೆ 70 ಕೋಟಿಯನ್ನು ಗಳಿಸಿದೆ. ಈ ಮೂಲಕ ವೆಟ್ಟೈಯಾನ್ ಗಳಿಕೆ 200 ಕೋಟಿ ಗಡಿಯನ್ನು ದಾಟಿದೆ. ಆದರೂ ಕೂಡ ಅಪಸ್ವರ ಕೇಳಿ ಬರುತ್ತಿದೆ. ಯಾಕೆಂದರೆ ರಜಿನಿಯ ಹೆಸರು ಮತ್ತು ಖದರ್‌ಗೆ ಈ ಗಳಿಕೆ ತುಂಬಾ ಕಡಿಮೆ ಎನ್ನುವುದು ಅನೇಕರ ವಾದ. ಅದರಲ್ಲಿಯೂ ಕೂಡ ಈ ಚಿತ್ರದಲ್ಲಿ ರಜಿನಿಕಾಂತ್ ಮಾತ್ರವಲ್ಲ ಅಮಿತಾಭ್ ಬಚ್ಚನ್ ಕೂಡ ಇದ್ದಾರೆ. ಹೀಗಾಗಿಯೇ ಚಿತ್ರದಲ್ಲಿ ಭಾರತದ ಇಬ್ಬರು ಸೂಪರ್ ಸ್ಟಾರ್‌ಗಳಿದ್ದರೂ ಕೂಡ ಚಿತ್ರ ಕೇವಲ 200 ಕೋಟಿಯನ್ನಷ್ಟೇ ಗಳಿಸಿದೆ ಎಂದು ಅನೇಕರು ವ್ಯಂಗ್ಯವಾಡುತ್ತಿದ್ಧಾರೆ. ರಜಿನಿ ಸ್ಟಾರ್ ಪವರ್ ಕಡಿಮೆ ಆಯ್ತು ಎನ್ನುತ್ತಿದ್ದಾರೆ. ಮೊದಲು ರಜಿನಿಕಾಂತ್ ಅವರ ಚಿತ್ರಗಳಿರುತ್ತಿದ್ದ ಕ್ರೇಜ್ ಈಗ ಇಲ್ಲ ಎನ್ನುವುದಕ್ಕೆ ವೆಟ್ಟೈಯಾನ್ ಚಿತ್ರದ ಈ ಗಳಿಕೆಯೇ ಸಾಕ್ಷಿ ಎನ್ನುವ ಅಭಿಪ್ರಾಯವನ್ನು ಕೂಡ ವ್ಯಕ್ತ ಪಡಿಸುತ್ತಿದ್ದಾರೆ.

ಅಂದ್ಹಾಗೇ ರಜಿನಿಕಾಂತ್ ಅಭಿನಯದ ಹಿಂದಿನ ಚಿತ್ರ ಜೈಲರ್ ವಿಶ್ವವ್ಯಾಪಿ 600 ಕೋಟಿಗೂ ಅಧಿಕ ಹಣವನ್ನು ಗಳಿಸಿತ್ತು. ಈ ಮೂಲಕ ಇತಿಹಾಸವನ್ನು ಬರೆದಿತ್ತು. ಆದರೆ.. ಸದ್ಯದ ಲೆಕ್ಕಾಚಾರವನ್ನು ನೋಡುತ್ತಿದ್ದರೆ ರಜಿನಿಕಾಂತ್ ಅಭಿನಯದ ವೆಟ್ಟೈಯಾನ್ 300 ಕೋಟಿಯ ಗಡಿಯನ್ನು ಕೂಡ ತಲುಪುವುದು ಕಷ್ಟವೆನ್ನುವ ಮಾತು ಕೇಳಿ ಬರುತ್ತಿದೆ. ಹಾಗಂಥ 300 ಕೋಟಿ ಅಸಾಧ್ಯ ಏನಿಲ್ಲ. ತಲುಪಿದರು ತಲುಪಬಹುದು. ಆದರೆ ಅದು ಸಾಧ್ಯವಾಗುವುದು ಚಿತ್ರದ ಪ್ರಚಾರವನ್ನು ಪ್ರೇಕ್ಷಕರೇ ಖುದ್ದು ಮಾಡಿದಾಗ, ಚಿತ್ರ ನೋಡಿಯೆಂದು ಬೇರೆಯವರಿಗೆ ಹೇಳಿದಾಗ. ಈ ಪವಾಡ ನಡೆಯುವುದು ಸದ್ಯಕ್ಕೆ ತುಸು ಕಷ್ಟ. ಈ ಕಾರಣಕ್ಕೆ ಹೆಚ್ಚೆಂದರೆ ಇನ್ನು ಇಪ್ಪತ್ತು ಕೋಟಿಯನ್ನು ಚಿತ್ರ ಗಳಿಸಬಹುದು ಎನ್ನುವ ಅಭಿಪ್ರಾಯವನ್ನು ಬಾಕ್ಸಾಫೀಸ್ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X