Vettaiyan Box-office day 1; 'ವೆಟ್ಟೆಯಾನ್' ಫಸ್ಟ್ ಡೇ ಕಲೆಕ್ಷನ್? ಕರ್ನಾಟಕದಲ್ಲಿ ದೋಚಿದ್ದೆಷ್ಟು?

ಬಹುನಿರೀಕ್ಷಿತ ತಮಿಳಿನ 'ವೆಟ್ಟೆಯಾನ್' ಸಿನಿಮಾ ಈ ವಾರ ತೆರೆಗೆ ಬಂದಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಆಕ್ಷನ್ ಥ್ರಿಲ್ಲರ್ ಚಿತ್ರಕ್ಕೆ ಜ್ಞಾನವೇಲ್ ಆಕ್ಷನ್ ಕಟ್ ಹೇಳಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ ಚಿತ್ರದಲ್ಲಿ ಘಟಾನುಘಟಿ ಕಲಾವಿದರು ನಟಿಸಿದ್ದಾರೆ. ಚಿತ್ರಕ್ಕೆ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾ ಕಳೆದ ವರ್ಷ ಬಾಕ್ಸಾಫೀಸ್ ಶೇಕ್ ಮಾಡಿತ್ತು. ವಿಶ್ವದಾದ್ಯಂತ ಸಿನಿಮಾ 600 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಗಾಗಿ ಸಹಜವಾಗಿಯೇ 'ವೆಟ್ಟೆಯಾನ್' ಗಳಿಕೆ ಬಗ್ಗೆ ಭಾರೀ ಲೆಕ್ಕಾಚಾರ ನಡೀತಿದೆ. ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿತ್ತು. ಹಾಗಾಗಿ ಮೊದಲ ದಿನವೇ ಗ್ರ್ಯಾಂಡ್ ಓಪನಿಂಗ್ ಸಿಕ್ಕಿರುವ ಅಂದಾಜಿದೆ.

Vettaiyan box-office collection day 1 Rajinikanth film taken the box office by storm

ಅಮಿತಾಬ್ ಬಚ್ಚನ್, ಫಹಾದ್ ಫಾಸಿಲ್, ರಾಣಾ ದಗ್ಗುಬಾಟಿ, ಮಂಜು ವಾರಿಯರ್, ಕಿಶೋರ್ ಸೇರಿದಂತೆ ದೊಡ್ಡ ತಾರಾಗಣವೇ 'ವೆಟ್ಟೆಯಾನ್' ಚಿತ್ರದಲ್ಲಿದೆ. ಕಮರ್ಷಿಯಲ್ ಅಂಶಗಳ ಜೊತೆ ಒಂದು ಗಂಭೀರ ಸಂದೇಶವನ್ನು ಚಿತ್ರತಂಡ ದಾಟಿಸಿದೆ. ಜ್ಞಾನವೇಲ್ ಒಳ್ಳೆ ಕಥೆ ಹೇಳುವ ಜೊತೆಗೆ ರಜನಿಕಾಂತ್ ಸಿನಿಮಾಗಳಿಂದ ಪ್ರೇಕ್ಷಕರು ನಿರೀಕ್ಷಿಸುವುದನ್ನು ಇಲ್ಲಿ ತೋರಿಸಿದ್ದಾರೆ.

ಸಣ್ಣ ಪುಟ್ಟ ತಪ್ಪುಗಳ ಹೊರತಾಗಿಯೂ 'ವೆಟ್ಟೆಯಾನ್' ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತದೆ. ಚಪ್ಪಾಳೆ ಗಿಟ್ಟಿಸುತ್ತದೆ. ಪೊಲೀಸ್ ಎನ್‌ಕೌಂಟರ್‌ ಸಾಧಕ ಬಾಧಕಗಳ ಬಗ್ಗೆ ಚಿತ್ರದಲ್ಲಿ ಚರ್ಚೆ ನಡೆಸಲಾಗಿದೆ. ವಿಶೇಷ ನ್ಯಾಯಾಧೀಶ ಸತ್ಯದೇವ್ ಪಾತ್ರದಲ್ಲಿ ಅಮಿತಾಬ್ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಫಹಾದ್ ಫಾಸಿಲ್ ಪಾತ್ರ ಹಾಗೂ ಅಭಿನಯ ಚಿತ್ರದ ಹೈಲೆಟ್‌ಗಳಲ್ಲಿ ಒಂದು.

Vettaiyan box-office collection day 1 Rajinikanth film taken the box office by storm

ರೆಡ್ ಝೈಂಟ್ ಸಂಸ್ಥೆ 'ವೆಟ್ಟೆಯಾನ್' ಸಿನಿಮಾ ವಿತರಣೆ ಹಕ್ಕು ಕೊಂಡುಕೊಂಡಿದೆ. ವಿಶ್ವದಾದ್ಯಂತ ಸಿನಿಮಾ ಬಹಳ ದೊಡ್ಡಮಟ್ಟದಲ್ಲಿ ಬಿಡುಗಡೆಯಾಗಿದೆ. ಅಮೇಜಾನ್ ಪ್ರೈಂಗೆ ಓಟಿಟಿ ರೈಟ್ಸ್ ಹಾಗೂ ಸನ್ ನೆಟ್‌ವರ್ಕ್‌ಗೆ ಸ್ಯಾಟಲೈಟ್ ರೈಟ್ ಮಾರಾಟವಾಗಿದೆ. ಬಿಡುಗಡೆಗೂ ಮುನ್ನವೇ ಸಿನಿಮಾ ಒಳ್ಳೆ ಬ್ಯುಸಿನೆಸ್ ಮಾಡಿತ್ತು.

'ವೆಟ್ಟೆಯಾನ್' ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಎಷ್ಟು ಎನ್ನುವ ಚರ್ಚೆ ಶುರುವಾಗಿದೆ. ಬಾಕ್ಸಾಫೀಸ್ ಪಂಡಿತರ ಪ್ರಕಾರ ಮೊದಲ ದಿನ ವಿಶ್ವದಾದ್ಯಂತ ಸಿನಿಮಾ ಅಂದಾಜು 60 ಕೋಟಿ ರೂ. ಗಳಿಕೆ ಕಂಡಿದೆ ಎನ್ನಲಾಗ್ತಿದೆ. ಭಾರತದಲ್ಲಿ ನೆಟ್ ಕಲೆಕ್ಷನ್ 30 ಕೋಟಿ ರೂ. ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತವಾಗಿ ಸಿನಿಮಾ ಕಲೆಕ್ಷನ್ ಬಗ್ಗೆ ಚಿತ್ರತಂಡ ಇನ್ನು ಮಾಹಿತಿ ನೀಡಿಲ್ಲ.

ಕರ್ನಾಟಕದಲ್ಲಿ ರಜನಿಕಾಂತ್ ಸಿನಿಮಾಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಗುತ್ತದೆ. 'ಜೈಲರ್' ಸಿನಿಮಾ ಕೂಡ ಇಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬೆಳಗ್ಗೆ 4 ಗಂಟೆಗೆ ನಗರದ ಹಲವೆಡೆ 'ವೆಟ್ಟೆಯಾನ್' ಮೊದಲ ಪ್ರದರ್ಶನ ಆರಂಭವಾಗಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕೂಡ ಚೆನ್ನಾಗಿತ್ತು. ಕರ್ನಾಟಕದಲ್ಲಿ ಆಕ್ಷನ್ ಥ್ರಿಲ್ಲರ್ ಸಿನಿಮಾ ಮೊದಲ ದಿನ 5.5 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ.

ಗುರುವಾರ(ಅಕ್ಟೋಬರ್ 10)ವೇ 'ವೆಟ್ಟೆಯಾನ್' ಚಿತ್ರ ತೆರೆಗೆ ಬಂದಿದೆ. ವಾರದ ದಿನದಲ್ಲಿ ಮಾರ್ನಿಂಗ್ ಶೋಗಳಿಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಮಧ್ಯಾಹ್ನದ ವೇಳೆಗೆ ಕೊಂಚ ಕಮ್ಮಿ ಆಗುತ್ತು. ಸಂಜೆ ಮತ್ತೆ ಶೋಗಳು ಹೌಸ್‌ಫುಲ್ ಆಗಿತ್ತು. ಎರಡನೇ ದಿನ ಆಯುಧ ಪೂಜೆ ರಜೆ ಇದೆ. ಕೆಲವೆಡೆ ಬುಕ್ಕಿಂಗ್ ಚೆನ್ನಾಗಿದೆ. ಹಾಗಾಗಿ ಶುಕ್ರವಾರವೂ ಸಿನಿಮಾ ಉತ್ತಮ ಗಳಿಕೆ ಕಾಣುವ ನಿರೀಕ್ಷೆಯಿದೆ.

'ವೆಟ್ಟೆಯಾನ್' ಚಿತ್ರಕ್ಕೆ ಪಾಸಿಟಿವ್ ಟಾಕ್ ಬಂದಿರುವುದರಿಂದ ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ರಜನಿಕಾಂತ್ ಅಭಿಮಾನಿಗಳು ಸಿನಿಮಾ 500 ಕೋಟಿ, 1000 ಕೋಟಿ ಕಲೆಕ್ಷನ್ ಮಾಡುತ್ತದೆ ಎಂದು ಹೇಳುತ್ತಿದ್ದರು. ಆ ಮಟ್ಟಿಗೆ ಅಲ್ಲದಿದ್ದರೂ ಒಳ್ಳೆ ಕಲೆಕ್ಷನ್ ಮಾಡುವ ಸಾಧ್ಯತೆ ದಟ್ಟವಾಗಿದೆ. ಮುಂದಿನ ದಿನಗಳಲ್ಲಿ ಚಿತ್ರಕ್ಕೆ ಯಾವ ರೀತಿಯ ರೆಸ್ಪಾನ್ಸ್ ಸಿಗುತ್ತದೆ ಕಾದು ನೋಡಬೇಕಿದೆ.

More from Filmibeat

English summary
Rajinikanth starrer Vettaiyan is running successfully, smashing records.
Read more about: rajinikanth kollywood box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X