Vidamuyarchi Box office Day 2 ; ಮೊದಲ ದಿನ ಅಜಿತ್ ಅಬ್ಬರ, ಎರಡನೇ ದಿನ ಕಥೆ ಹರೋಹರ...!

ಅಭಿಮಾನಿಗಳಿಂದ ತಲಾ ಮತ್ತು ತಲೈ ಎಂದು ಕರೆಸಿಕೊಳ್ಳುವ ಅಜಿತ್ ಭಾರತೀಯ ಚಿತ್ರರಂಗದ ಅತ್ಯಂತ ವಿಕ್ಷಿಪ್ತ ಹೀರೋ. ಸಾಮಾನ್ಯವಾಗಿ ಚಿತ್ರದ ಸ್ಟಾರ್‌ಗಳ ತಾವು ಅಭಿನಯಿಸಿದ ಚಿತ್ರದ ಪ್ರಚಾರ ಮಾಡುತ್ತಾರೆ. ಚಿತ್ರ ಹೇಗಾದರೂ ಮೂಡಿ ಬಂದಿರಲಿ ಕಾಸು ಪಡೆದ ತಪ್ಪಿಗಾದರೂ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ತಮ್ಮ ಅಭಿಮಾನಿಗಳಿಗೆ ದರ್ಶನ ನೀಡುತ್ತಾರೆ.

ಆದರೆ ಅಜಿತ್ ಆಗಲ್ಲ. ತಾವು ಒಪ್ಪಿಕೊಂಡ ಚಿತ್ರದ ಕೆಲಸಗಳೆಲ್ಲ ಮುಗಿದ ಮೇಲೆ ಆ ಕಡೆ ಅಜಿತ್ ತಿರುಗಿಯೂ ನೋಡುವುದಿಲ್ಲ. ಚಿತ್ರದ ಗಳಿಕೆಯ ಕುರಿತು ಲೆಕ್ಕವನ್ನು ಕೂಡ ನಿರ್ಮಾಪಕರ ಬಳಿಯಾಗಲಿ ವಿತರಕರ ಬಳಿಯಾಗಲಿ ಕೇಳುವುದಿಲ್ಲ. ಯಾರೆಂದರೆ ಯಾರ ಕೈಗೂ ಸಿಗುವುದಿಲ್ಲ. ಸೋಲು-ಗೆಲುವು ಲಾಭ-ನಷ್ಟ ಏನೇ ಇರಲಿ ಎಲ್ಲವನ್ನು ಬಂಡವಾಳ ಹೂಡಿದ ನಿರ್ಮಾಪಕನೇ ಅನುಭವಿಸಬೇಕು. ಇದಕ್ಕೆ 'ವಿಡಾಮುಯಾರ್ಚಿ' ಸದ್ಯದ ಮತ್ತೊಂದು ಉದಾಹರಣೆ.

Vidaamuyarchi Box Office Day 2 Ajith Kumar s film drops 65 after strong opening

ಹೌದು, ಮೊನ್ನೆ ಮೊನ್ನೆ ತೆರೆಗೆ ಬಂದ ವಿಡಾಮುಯಾರ್ಚಿ ಮೊದಲ ದಿನ ಭರ್ಜರಿ ಗಳಿಕೆಯನ್ನು ಮಾಡಿತ್ತು. ಭಾರತದಲ್ಲಿ 26 ಕೋಟಿಯನ್ನು ಕೊಳ್ಳೆ ಹೊಡೆದಿತ್ತು. ಆದರೆ. ನಿನ್ನೆ ವಿಡಮುಯಾರ್ಚಿ ಲಯ ತಪ್ಪಿದೆ. ಸ್ಯಾಕ್ನಿಲ್ಕ್.ಕಾಮ್ ಪ್ರಕಾರ ನಿನ್ನೆ ವಿಡಾಮುಯಾರ್ಚಿ ಕೇವಲ ₹ ₹8.75 ಕೋಟಿಯನ್ನು ಮಾತ್ರ ಗಳಿಸಿದೆ. ಈ ಮೂಲಕ ಚಿತ್ರದ ಗಳಿಕೆಯಲ್ಲಿ ಶೇಕಡಾ -66.35% ಕುಸಿತವಾಗಿದೆ.

ಗಳಿಕೆ ಕಡಿಮೆಯಾಗಲು ಕಾರಣವೇನು ?

ಮೊದಲ ದಿನ ಚಿತ್ರವನ್ನು ನೋಡಿದ್ದ ಪ್ರೇಕ್ಷಕರು ಮಿಶ್ರ ಅಭಿಪ್ರಾಯ ವ್ಯಕ್ತಪಡಿಸಿದ್ದರು.ಕೆಲವರು ಫಸ್ಟ್ ಹಾಫ್ ಕೊಟ್ಟ ಮಜಾ ಸೆಕೆಂಡ್ ಹಾಫ್ ಕೊಡಲ್ಲ ಎಂದರೆ ಇನ್ನು ಕೆಲವರು ಹಾಲಿವುಡ್ ಶೈಲಿಯ ಚಿತ್ರ ತುಂಬಾ ಚೆನ್ನಾಗಿದೆ ಎಂದು ಹೇಳಿದ್ದರು. ಇನ್ನು ವಿಮರ್ಷಕರ ಪ್ರೀತಿಯನ್ನು ಚಿತ್ರ ಗಳಿಸಲಿಲ್ಲ. ಈ ಹಿನ್ನೆಲೆ ಚಿತ್ರಮಂದಿರಕ್ಕೆ ಬರಲು ಪ್ರೇಕ್ಷಕರು ಆಲೋಚನೆಯನ್ನು ಮಾಡುತ್ತಿದ್ದಾರೆ. ಇನ್ನು 'ವಿಡಾಮುಯಾರ್ಚಿ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕಿಡಿಗೇಡಿಗಳು ಚಿತ್ರದ HD ಪ್ರಿಂಟ್‌ನ ಲೀಕ್ ಮಾಡಿದ್ದರು. ಅನಧಿಕೃತ ವೆಬ್ ಸೈಟ್‌ಗಳ ಮೂಲಕ ಚಿತ್ರವನ್ನು ಹಂಚಿದ್ದರು. 'ವಿಡಾಮುಯಾರ್ಚಿ' ಚಿತ್ರದ ಗಳಿಕೆ ಕುಸಿಯಲು ಇದು ಕೂಡ ಪ್ರಮುಖ ಕಾರಣ

ಇಂದು ಮತ್ತು ನಾಳೆಯ ಮೇಲೆ ನಿಂತಿದೆ ಭವಿಷ್ಯ..!

ಇನ್ನು ಇಂದು ಮತ್ತು ನಾಳೆ ವಾರಾಂತ್ಯವಾದ ಹಿನ್ನೆಲೆ ಚಿತ್ರದ ಗಳಿಕೆಯಲ್ಲಿ ಏರಿಕೆಯಾಗುತ್ತೆ ಎನ್ನುವ ವಿಶ್ವಾಸ ಕಾಲಿವುಡ್ ಪಂಡಿತರಲ್ಲಿದೆ. ಶನಿವಾರ ಮತ್ತು ಭಾನುವಾರ ಚಿತ್ರದ ಗಳಿಕೆ ಎರಡಂಕಿ ದಾಟುವ ನಿರೀಕ್ಷೆ ಇದೆ. ಇನ್ನು ವಿಡಾಮುಯಾರ್ಚಿ ಚಿತ್ರದ ಎದುರು ಬೇರೆ ಭಾಷೆಯಲ್ಲಿ ದೊಡ್ಡ ಸ್ಟಾರ್‌ ಚಿತ್ರಗಳು ಬಿಡುಗಡೆಯಾಗಿಲ್ಲ. ಇದು ಕೂಡ ಚಿತ್ರದ ಗಳಿಕೆ ಹೆಚ್ಚಾಗಲು ಸಹಕಾರಿಯಾಗಲಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಎಲ್ಲೆಲ್ಲಿ ಹೇಗಿದೆ ಆಕ್ಯುಪೆನ್ಸಿ ?

ನಿನ್ನೆ ಚೆನ್ನೈನಲ್ಲಿ ಶೇಕಡಾ 52.75% ಆಕ್ಯುಪೆನ್ಸಿ ಕಂಡು ಬಂದಿದ್ದರೆ, ಪಾಂಡಿಚೇರಿಯಲ್ಲಿ ಶೇಕಡಾ 46.75% ಆಕ್ಯುಪೆನ್ಸಿ ಕಂಡು ಬಂದಿದೆ. ಮಧುರೈ ಮತ್ತು ವೆಲ್ಲೊರನಲ್ಲಿ ಕೂಡ ಚಿತ್ರಮಂದಿರದ ಅರ್ಧದಷ್ಟು ಪ್ರೇಕ್ಷಕರು ಬಂದಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಮೊದಲ ದಿನದ ಮೊದಲ ಪ್ರದರ್ಶನದ ಸಮಯದಲ್ಲಿ ಚಿತ್ರಮಂದಿರದ ಆವರಣ ಅಜಿತ್ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. ಆದರೆ ನಿನ್ನೆ ಬೆಂಗಳೂರಿನಲ್ಲಿ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ಸಿಕ್ಕಿದೆ. ಕೇವಲ 15.75% ಮಾತ್ರ ಆಕ್ಯುಪೆನ್ಸಿ ಕಂಡು ಬಂದಿದೆ.

ಒಟ್ನಲ್ಲಿ ಸದ್ಯ ಅಜಿತ್ ಗೆ 'ವಿಡಾಮುಯಾರ್ಚಿ' ಚಿತ್ರದ ಸೋಲು ಅಥವಾ ಗೆಲುವು ಯಾರಡು ಮುಖ್ಯವಲ್ಲ. ಅಜಿತ್ ಅದರ ಬಗ್ಗೆ ತಲೆಯನ್ನು ಕೂಡ ಕೆಡಿಸಿಕೊಳ್ಳುವುದಿಲ್ಲ. ಈಗ ತಲೆ ಕೆಡಿಸಿಕೊಳ್ಳಬೇಕಿರುವುದು ನಿರ್ಮಾಪಕರು ಮಾತ್ರ. ಹಾಕಿದ ಬಂಡವಾಳದ ಮೇಲೆ ವಿಡಾಮುಯಾರ್ಚಿ ನಿರ್ಮಾಪಕರಿಗೆ ಲಾಭ ಸಿಗುತ್ತಾ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

Disclaimer: ಈ ಸಿನಿಮಾದ ಕಲೆಕ್ಷನ್ ಅನ್ನು ಬೇರೆ ಬೇರೆ ಮೂಲಗಳಿಂದ ಸಂಗ್ರಹಿಸಲಾಗಿದೆ. ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ ಅಧಿಕೃತ ಮಾಹಿತಿಯನ್ನು ನೀಡಬೇಕಿದೆ.

More from Filmibeat

Read more about: ajith box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X