ಮದುವೆಯಾಗಿ 13 ವರ್ಷಗಳ ನಂತ್ರ ಗುಡ್‌ನ್ಯೂಸ್ ಕೊಟ್ಟ 'S/o ಬಂಗಾರದ ಮನುಷ್ಯ' ಚಿತ್ರನಟಿ
ಮಲಯಾಳಿ ನಟಿ ವಿದ್ಯಾ ಪ್ರದೀಪ್ ಕನ್ನಡ, ತಮಿಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಬೇಬಿ ಬಂಪ್ ಫೋಟೊಶೂಟ್ ಮಾಡಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆ ಫೋಟೋಗಳು ವೈರಲ್ ಆಗುತ್ತಿದೆ.
ಚಿಕ್ಕಂದಿನಲ್ಲೇ ಭರತನಾಟ್ಯ ಅಭ್ಯಾಸ ಮಾಡಿದ್ದ ನಟಿ ವಿದ್ಯಾ ಪ್ರದೀಪ್ ಕಾಲೇಜು ದಿನಗಳಲ್ಲಿ ಮಾಡೆಲಿಂಗ್ ಆರಂಭಿಸಿದ್ದರು. ಮುಂದೆ ಚಿತ್ರರಂಗಕ್ಕೆ ಬರುವುದು ಕಷ್ಟವಾಗಲಿಲ್ಲ. 'ಅವಲ್ ಪೇರ್ ತಮಿಳರಸಿ' ಎನ್ನುವ ಚಿತ್ರದ ಮೊದಲಿಗೆ ಬಣ್ಣ ಹಚ್ಚಿದ್ದ ವಿದ್ಯಾ ಮುಂದೆ ಸಾಲು ಸಾಲು ವಿದ್ಯಾ ನಟಿಸಿದರು. 'ಪಸಂಗ- 2', 'ಕಳರಿ', 'ಮಾರಿ-2', 'ತಡಂ' ಹೀಗೆ ಕೆಲ ಹಿಟ್ ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಕನ್ನಡದಲ್ಲಿ ಶಿವರಾಜ್‌ಕುಮಾರ್ ಜೋಡಿಯಾಗಿ ಮಿಂಚಿದ್ದರು.

'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದಲ್ಲಿ ನಾಯಕಿ ನಯನ ಆಗಿ ವಿದ್ಯಾ ಪ್ರದೀಪ್ ನಟಿಸಿದ್ದರು. ಯೋಗಿ ಜಿ. ರಾಜ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿತ್ತು.
ಸದ್ಯ ವಿದ್ಯಾ ತಾವು ಗರ್ಭಿಣಿ ಆಗಿರುವ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಪತಿಯ ಜೊತೆ ಬೇಬಿ ಬಂಪ್ ಫೋಟೊಶೂಟ್ ಮಾಡಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ನಾನು ನಿನಗಾಗಿ ಕಾಯುತ್ತಿದ್ದೇನೆ, ನನ್ನ ಅಮೂಲ್ಯವಾದ, ನನ್ನ ಹೃದಯ, ನನ್ನ ಆತ್ಮ, ನನ್ನ ಉದಯಿಸುವ ಸೂರ್ಯ ನೀನು.
ಚಿಕ್ಕದಾದ, ಶುದ್ಧವಾದ ಪ್ರತಿಯಿಂದ ಸುತ್ತಿದ ಶ್ರೇಷ್ಠವಾದ ಉಡುಗೊರೆ ನೀನು" ಎಂದು ವಿದ್ಯಾ ಬರೆದುಕೊಂಡಿದ್ದಾರೆ.
"ನನ್ನ ಜೀವನ ಈಗ ಪರಿಪೂರ್ಣವಾಗುತ್ತಿದೆ. ಬಹಳ ಸಂತಸವಾಗುತ್ತಿದೆ. ಋತುಗಳು ಬದಲಾದಂತೆ, ಸಮಯ ಹತ್ತಿರವಾದಂತೆ ನಮ್ಮ ಪ್ರೀತಿಯ ಕಥೆ ಸದಾ ಶಾಶ್ವತವಾಗಿರುತ್ತದೆ" ಎಂದು ಆಕೆ ಹಂಚಿಕೊಂಡಿದ್ದಾರೆ. 13 ವರ್ಷಗಳ ಹಿಂದೆ ಫೋಟೊಗ್ರಫರ್ ಮೈಕಲ್ ಪ್ರದೀಪ್ ಜೊತೆ ವಿದ್ಯಾ ಮದುವೆ ನೆರವೇರಿತ್ತು. ಇದೀಗ ದಂಪತಿ ಮೊದಲ ಮಗುವನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.
ವೃತ್ತಿಯಲ್ಲಿ ಸೈಂಟಿಸ್ಟ್ ಕೂಡ ಆಗಿರುವ ವಿದ್ಯಾ ಪ್ರದೀಪ್ ಜೊತೆ ಜೊತೆಗೆ ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಸದ್ಯ ದಂಪತಿ ಅಮೆರಿಕಾದಲ್ಲಿ ನೆಲೆಸಿದ್ದಾರೆ. 'ನಾಯಗಿ' ಎಂಬ ತಮಿಳು ಕಿರುತೆರೆ ಧಾರಾವಾಹಿಯಲ್ಲಿ ಆನಂದಿ ಎನ್ನುವ ಪಾತ್ರದಲ್ಲಿ ವಿದ್ಯಾ ವೀಕ್ಷಕರ ಮನಗೆದ್ದಿದ್ದರು.
ಕೆಲ ತಿಂಗಳ ಹಿಂದೆಯಷ್ಟೆ ತಮ್ಮ 13ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟಿ ವಿದ್ಯಾ ಮಾಡಿದ್ದ ಪೋಸ್ಟ್ ವೈರಲ್ ಆಗಿತ್ತು. ಅಂದಹಾಗೆ ವಿದ್ಯಾ ಪತಿ ಪ್ರದೀಪ್ ಅಮೆರಿಕಾದಲ್ಲಿ ಸೆಲೆಬ್ರೆಟಿ ಫೋಟೊಗ್ರಾಫರ್ ಆಗಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಗುರ್ತಿಸಿಕೊಂಡಿದ್ದಾರೆ. ಕೆಲ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ.
13 ವರ್ಷಗಳ ಪ್ರೀತಿ, ನೀನು ನನ್ನ ಜೀವನಕ್ಕೆ ತಂದ ಅಂದಕ್ಕೆ ಹಾಗೂ ಅರ್ಥವನ್ನು ಪದಗಳಲ್ಲಿ ಸೆರೆ ಹಿಡಿಯಲು ಸಾಧ್ಯವಿಲ್ಲ. ನಾವಿಬ್ಬರು ಒಟ್ಟಾಗಿ ಮರೆಯಲಾಗದ ನೆನಪುಗಳನ್ನು ಸೃಷ್ಟಿಸಿದ್ದೇವೆ. ಅದನ್ನು ಮರೆಯಲು ಸಾಧ್ಯವಿಲ್ಲ. ನೀನು ಸದಾ ನನ್ನೊಂದಿಗೆ ಇದ್ದೀಯಾ, ನನ್ನ ಜೊತೆಯಾಗಿದ್ದೀಯಾ. ನಿನ್ನ ಪ್ರೀತಿ ಆಳ ಹೇಳತೀರದು. ನೀನು ಸದಾ ನನ್ನ ಮುಖದಲ್ಲಿ ನಗುತಂದು ಸಮಸ್ಯೆಗಳನ್ನು ಕರಗಿಸುತ್ತೀಯಾ" ಎಂದು ಪತಿ ಬಗ್ಗೆ ವಿದ್ಯಾ ಬರೆದುಕೊಂಡಿದ್ದರು.
ನನಗೆ ಏನು ಬೇಕು ಎನ್ನುವುದನ್ನು ಹೇಳುವುದಕ್ಕೆ ಮುನ್ನ ಅರ್ಥ ಮಾಡಿಕೊಳ್ಳುತ್ತೀಯಾ. ನೀನು ನನ್ನನ್ನು ಮಗುವಿನ ರೀತಿ ಕೇರ್ ಮಾಡುತ್ತೀಯಾ. ದೇವರೇ ಈ 13 ಸುಂದರ ವರ್ಷಗಳನ್ನು ನೀಡಿದಕ್ಕೆ ಧನ್ಯವಾದ. ಇದು ಹೀಗೆ ಮುಂದುವರೆಯಲಿ. ನಿನ್ನಿಂದ ನನ್ನ ಜೀವನ ಸುಂದರ, ಇದಕ್ಕಿಂತ ಹೆಚ್ಚು ನಾನು ಏನು ಕೇಳಲ್ಲ ಎಂದು ನಟಿ ವಿದ್ಯಾ ಪ್ರದೀಪ್ ತಮ್ಮ ಮನದಾಳ ತೆರೆದಿಟ್ಟಿದ್ದರು.


Click it and Unblock the Notifications











