ಲಾಕ್ ಡೌನ್ ನಲ್ಲಿ ಬಳಕುವ ಬಳ್ಳಿಯಂತಾಗಿ ಅಚ್ಚರಿ ಮೂಡಿಸಿದ ಗುಂಡಗಿದ್ದ ಹಾಸ್ಯನಟಿ ವಿದ್ಯುಲ್ಲೇಖಾ

ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ಹಾಸ್ಯ ನಟಿ ವಿದ್ಯುಲ್ಲೇಖಾ ರಮಣ್ ಈಗ ಟ್ರೆಂಡಿಂಗ್ ನಲ್ಲಿದ್ದಾರೆ. ಕಾರಣ ವಿದ್ಯುಲ್ಲೇಖಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್. ದಪ್ಪಗೆ, ಗುಂಡಗಿದ್ದ ನಟಿ ವಿದ್ಯುಲ್ಲೇಖಾ ಈಗ ತೆಳ್ಳಗಾಗಿದ್ದಾರೆ. ತೂಕ ಇಳಿಸಿರುವ ಫೋಟೋವನ್ನು ಶೇರ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.

Recommended Video

ಮಯೂರಿ ಮರೆಯಲಾರದ ಸಹಾಯ ಮಾಡಿದ ಜೆಕೆ ತಂದೆ-ತಾಯಿ | JK Parents did all the marriage to Mayuri

ಲಾಕ್ ಡೌನ್ ಸಮಯವನ್ನು ಸಮರ್ಪಕವಾಗಿ ಬಳಿಸಿಕೊಂಡಿರುವ ನಟಿ ವಿದ್ಯುಲ್ಲೇಖಾ ಅಚ್ಚರಿಕರ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡುವ ಜೊತೆಗೆ ತೂಕ ಇಳಿಸಿದ ಬಗ್ಗೆಯು ಬರೆದುಕೊಂಡಿದ್ದಾರೆ. ಮುಂದೆ ಓದಿ...

ನಕಲಿ ಆತ್ಮ ವಿಶ್ವಾಸ ವರ್ಸಸ್ ನಿಜವಾದ ಆತ್ಮವಿಶ್ವಾಸ

ನಕಲಿ ಆತ್ಮ ವಿಶ್ವಾಸ ವರ್ಸಸ್ ನಿಜವಾದ ಆತ್ಮವಿಶ್ವಾಸ

ನಕಲಿ ಆತ್ಮವಿಶ್ವಾಸ ವರ್ಸಸ್ ನಿಜವಾದ ಆತ್ಮವಿಶ್ವಾದ ಬಗ್ಗೆ ವಿದ್ಯುಲ್ಲೇಖಾ ವಿವರಿಸಿದ್ದಾರೆ. ತೂಕ ಇಳಿಸಿ ನಿಜವಾದ ಆತ್ಮವಿಶ್ವಾಸ ಹೊಂದಿರುವುದಾಗಿ ಹೇಳಿದ್ದಾರೆ. ನಾನು ಅಧಿಕ ತೂಕ ವಿದ್ದಾಗ, ಪ್ರತಿಯೊಬ್ಬರು ನನ್ನನ್ನು ನೀವು ಎಷ್ಟು ಆತ್ಮ ವಿಶ್ವಾಸ ಹೊಂದಿದ್ದೀರಿ ಎಂದು ಪ್ರಶ್ನಿಸುತ್ತಿದ್ದರು. ಆಗ ನನಗೆ ಅನಿಸುತ್ತಿತ್ತು, ನಾನು ಜೀವನದುದ್ದಕ್ಕು ಇಷ್ಟೆ ದಪ್ಪಗೆ ಇರಬೇಕಾ ಎಂದು" ಬರೆದುಕೊಂಡಿದ್ದಾರೆ.

ಜೀವನ ಶೈಲಿ, ಅಭ್ಯಾಸಗಳು ಬದಲಾಗಿದೆ

ಜೀವನ ಶೈಲಿ, ಅಭ್ಯಾಸಗಳು ಬದಲಾಗಿದೆ

"ಆದರೀಗ ನಾನು ನಿಜವಾದ ಆತ್ಮವಿಶ್ವಾಸ ಹೊಂದಿದ್ದೇನೆ. ಏಕೆಂದರೆ ನಾನು ಊಹಿಸಲಾಗದ ಕೆಲಸ ಮಾಡಿದ್ದೀನಿ. ನನ್ನ ಜೀವನ ಶೈಲಿ ಮತ್ತು ಅಭ್ಯಾಸಗಳನ್ನು ಬದಲಾಯಿಸಿದ್ದೇನೆ. ಮನಸ್ಸಿಟ್ಟರೆ ಎಲ್ಲವೂ ಸಾಧ್ಯವಾಗುತ್ತೆ ಎನ್ನುವುದನ್ನು ಅರಿತುಕೊಂಡೆ" ಎಂದಿದ್ದಾರೆ.

ಹಾರ್ಡ್ ವರ್ಕ್ ಮಾಡಬೇಕು

ಹಾರ್ಡ್ ವರ್ಕ್ ಮಾಡಬೇಕು

"ನೀವು ಶಿಸ್ತುಬದ್ಧವಾಗಿರಬೇಕು, ವಾರಕ್ಕೆ ಆರು ಬಾರಿ ವರ್ಕೌಟ್ ಮಾಡಬೇಕು. ಮತ್ತು ಸಮತೋಲನ ಆಹಾರ ಸೇವಿಸಬೇಕು. ಫಲಿತಾಂಶಕ್ಕೆ ಯಾವುದೆ ರಹಸ್ಯ ಮಾತ್ರೆ, ಮದ್ದು ಸೇವಿಸಬಾರದು. ಕೇವಲ ಹಾರ್ಡ್ ವರ್ಕ್ ಮಾಡಬೇಕು. ಜೀವನದಲ್ಲಿ ಏನು ಸುಲಭವಾಗಿ ಬರುವುದಿಲ್ಲ. ಆದರೆ ನೀವು ಫಲಿತಾಂಶವನ್ನು ನೋಡಿದಾಗ, ಅದು ಎಲ್ಲಾ ಬೆವರು ಮತ್ತು ಕಣ್ಣೀರಿಗೆ ಯೋಗ್ಯವಾಗಿರುತ್ತದೆ" ಎಂದು ಹೇಳಿದ್ದಾರೆ.

ವಿದ್ಯುಲ್ಲೇಖಾ ಸಿನಿಮಾಗಳು

ವಿದ್ಯುಲ್ಲೇಖಾ ಸಿನಿಮಾಗಳು

ನೀಥಾನೆ ಎನ್ ಪೊನ್ವಸಂತಂ ಎನ್ನುವ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ವಿದ್ಯುಲ್ಲೇಖಾ ಸಾಕಷ್ಟು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಹಾಸ್ಯಕಲಾವಿದೆಯಾಗಿ ಸಿನಿಪ್ರೇಕ್ಷಕರನ್ನು ರಂಜಿಸಿದ್ದಾರೆ. ತೆರೆಮೇಲೂ ಸಹ ವಿದ್ಯುಲ್ಲೇಖಾ ಡುಮ್ಮಿಯ ಪಾತ್ರದಲ್ಲಿಯೆ ಮಿಂಚುತ್ತಿದ್ದರು. ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿರುವ ವಿದ್ಯುಲ್ಲೇಖಾ ಕನ್ನಡದಲ್ಲಿಯೂ ಮಿಂಚಿದ್ದಾರೆ. ರ್ಯಾಂಬೊ-2 ಮೂಲಕ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದಾರೆ.

More from Filmibeat

English summary
Kollywood Actress Vidyullekha Raman weight loss photo viral in Social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X