For Quick Alerts
  ALLOW NOTIFICATIONS  
  For Daily Alerts

  ನಯನತಾರ ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ಪತಿ ವಿಘ್ನೇಶ್ ಶಿವನ್!

  |

  ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಜೂನ್ 9ರಂದು ನೆರವೇರಿದೆ. ಇಷ್ಟು ದಿನ ಈ ಜೋಡಿಯ ಸುತ್ತಾ ಸುಳಿದಾಡಿದ ಎಲ್ಲಾ ಗಾಸಿಪ್‌ಗಳಿಗೂ ಮದುವೆ ಮೂಲಕ ಬ್ರೇಕ್ ಹಾಕಿದೆ ಈ ಜೋಡಿ. ಮಹಾಬಲಿಪುರಂನಲ್ಲಿ ಮದುವೆ ಆಪ್ತರು ಮತ್ತು ಕುಟುಂಬಸ್ಥರ ಸಮ್ಮುಖದಲ್ಲಿ ನೆರವೇರಿದೆ.

  ಈ ಜೋಡಿಯ ಮದುವೆ ಮಹಾಬಲಿಪುರಂನಲ್ಲಿ ನಡೆದಿದೆ. ಆದರೆ ಇದಕ್ಕೂ ಮೊದಲು ತಿರುಪತಿಯಲ್ಲಿ ಮದುವೆ ಮಾಡಿಕೊಳ್ಳಲು ಈ ಜೋಡಿ ನಿರ್ಧಾರ ಮಾಡಿತ್ತು. ಕಾರಣಾಂತರಗಳಿಂದ ಅದು ಸಾಧ್ಯವಾಗಿಲ್ಲ. ಹಾಗಾಗಿ ಮಹಾಬಲಿಪುರಂನಲ್ಲಿ ವಿವಾಹವಾಗಿದ್ದಾರೆ.

  ನಯನತಾರ 'ಕೆಂಪು ಸೀರೆ' ರಹಸ್ಯ: ಸೀರೆಗಿದೆ ಹೊಯ್ಸಳರ ನಂಟು?ನಯನತಾರ 'ಕೆಂಪು ಸೀರೆ' ರಹಸ್ಯ: ಸೀರೆಗಿದೆ ಹೊಯ್ಸಳರ ನಂಟು?

  ಆದರೆ, ಮದುವೆ ಆದ ಬಳಿಕ ಜೂನ್ 10ರಂದು ಈ ಜೋಡಿ ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟಿದೆ. ಯಾವುದೇ ವಿಘ್ನವಿಲ್ಲದೆ ಮದುವೆ ನೆರವೇರಿದರೂ, ತಿರುಪತಿ ದೇವಸ್ಥಾನ ಭೇಟಿ ವೇಳೆ ಈ ಜೋಡಿಗೆ ವಿಘ್ನ ಎದುರಾಗಿದೆ. ನಯನತಾರಾ ತಿರುಪತಿ ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಹಾಕಿಕೊಂಡು ಓಡಾಡಿದ್ದು, ವಿವಾದಕ್ಕೆ ಕಾರಣ ಆಗಿದೆ.

  ತಿರುಪತಿ ಭೇಟಿ ಕೊಟ್ಟ ನವ ದಂಪತಿ!

  ತಿರುಪತಿ ಭೇಟಿ ಕೊಟ್ಟ ನವ ದಂಪತಿ!

  ಮದುವೆ ಆದ ಮರು ದಿನವೇ ನಯನತಾರಾ ಮತ್ತು ವಿಘ್ನೇಶ್ ತಿರುಪತಿ ದೇವಾಲಯಕ್ಕೆ ಭೇಟಿ ಕೊಟ್ಟಿದ್ದಾರೆ. ತಿರುಪತಿ ದೇವಸ್ಥಾನದ ಜೊತೆ ಈ ಜೋಡಿ ವಿಶೇಷ ನಂಟು ಹೊಂದಿದೆ. ಹಾಗಾಗಿ ಮದುವೆಯನ್ನು ಅಲ್ಲೇ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದ್ದರು. ಅದು ಸಾಧ್ಯವಾಗದ ಕಾರಣ ಮದುವೆಯಾದ ಮರು ದಿನ ನವ ದಂಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ತಿಮ್ಮಪ್ಪನ ದರ್ಶನ ಪಡೆದು ಕೊಂಡಿದ್ದಾರೆ.

  ನಯನತಾರ ವಿಗ್ನೇಶ್ ಶಿವನ್ ಮದುವೆ ಫೊಟೋ ಔಟ್: ಪತ್ನಿಗೆ ಮುತ್ತಿಟ್ಟ ಪತಿ!ನಯನತಾರ ವಿಗ್ನೇಶ್ ಶಿವನ್ ಮದುವೆ ಫೊಟೋ ಔಟ್: ಪತ್ನಿಗೆ ಮುತ್ತಿಟ್ಟ ಪತಿ!

  ತಿರುಪತಿಯಲ್ಲಿ ನಯನತಾರಾ ಚಪ್ಪಲಿ ಅವಾಂತರ!

  ತಿರುಪತಿಯಲ್ಲಿ ನಯನತಾರಾ ಚಪ್ಪಲಿ ಅವಾಂತರ!

  ತಿರುಪತಿ ದೇವಸ್ಥಾನಕ್ಕೆ ಭೇಟಿ ಕೊಟ್ಟ ನವ ದಂಪತಿ ವಿಘ್ನೇಶ್ ಮತ್ತು ನಯನತಾರಾ ದೇವಸ್ಥಾನದಲ್ಲಿ ಸುತ್ತಾಡಿದ್ದಾರೆ. ಈ ವೇಳೆ ವಿಘ್ನೇಶ್ ಬರಿಗಾಲಿಲ್ಲಿ ಇದ್ದರು. ಆದರೆ ನಯನತಾರಾ ಮಾತ್ರ ಚಪ್ಪಲಿ ಧರಿಸಿ ಶ್ರೀವಾರಿಯ ರಸ್ತೆಗಳಲ್ಲಿ ನಡೆದಾಡಿದ್ದಾರೆ. ದೇವಸ್ಥಾನದ ಬೀದಿಗಳಲ್ಲಿ ಚಪ್ಪಲಿ ಧರಿಸಿ ಓಡಾಡಿದ್ದರಿಂದ ಇದು ವಿವಾದಕ್ಕೆ ಕಾರಣವಾಗಿದೆ. ಹಾಗಾಗಿ ನಯನತಾರಾ ಪರವಾಗಿ ಪತಿ ವಿಘ್ನೇಶ್ ಶಿವನ್ ತಿರುಪತಿ ಮಂಡಳಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ.

  ನಯನತಾರಾ ಪರವಾಗಿ ವಿಘ್ನೇಶ್ ಕ್ಷಮೆ!

  ನಯನತಾರಾ ಪರವಾಗಿ ವಿಘ್ನೇಶ್ ಕ್ಷಮೆ!

  ಮಂಡಳಿಗೆ ಬರೆದ ಪತ್ರದಲ್ಲಿ " ನನ್ನ ಪತ್ನಿ ನಯನತಾರಾ ಭಗವಂತ ವೆಂಕಟೇಶ್ವರ ಸ್ವಾಮಿಯ ಮೇಲೆ ಹೆಚ್ಚಿನ ಭಕ್ತಿಯನ್ನು ಹೊಂದಿದ್ದಾರೆ. ಮತ್ತು ನಾವು ತಿರುಮಲದಲ್ಲಿ ಮದುವೆಯಾಗಲು ಪ್ರಯತ್ನಿಸಿದ್ದೇವೆ. ಕಳೆದ 30 ದಿನಗಳಲ್ಲಿ ಐದು ಬಾರಿ ತಿರುಮಲಕ್ಕೆ ಭೇಟಿ ನೀಡಿದ್ದೇವೆ. ನಮ್ಮ ಸುತ್ತಲು ಸಾಕಷ್ಟು ಜನ ಸುತ್ತುವರೆದಿದ್ದು ಫೋಟೊಗಳನ್ನು ತೆಗೆದುಕೊಳ್ಳುತ್ತಾ ಇದ್ದರು. ಹಾಗಾಗಿ ಚಪ್ಪಲಿ ಹಾಕಿರುವುದು ಗಮನಕ್ಕೆ ಬಂದಿಲ್ಲ." ಎಂದು ಪತ್ರದಲ್ಲಿ ನಮೂದಿಸಿ ಕ್ಷಮೆಯಾಚಿಸಿದ್ದಾರೆ.

  ನಯನತಾರಾ ಹಿಂದೆ ಸುತ್ತಿದ ಆ ಇಬ್ಬರು ನಟರಿಗೆ ನಟಿ ಸಿಗಲಿಲ್ಲವೇಕೆ?ನಯನತಾರಾ ಹಿಂದೆ ಸುತ್ತಿದ ಆ ಇಬ್ಬರು ನಟರಿಗೆ ನಟಿ ಸಿಗಲಿಲ್ಲವೇಕೆ?

  ದೇವಸ್ಥಾನ ಮಂಡಳಿಯಿಂದ ದೂರು!

  ದೇವಸ್ಥಾನ ಮಂಡಳಿಯಿಂದ ದೂರು!

  ಇನ್ನು ಈ ವಿವಾದ ಹೆಚ್ಚಾಗಿ ಸದ್ದು ಮಾಡುತ್ತಲೇ ತಿರುಪತಿ ದೇವಸ್ಥಾನ ಮಂಡಳಿ, ಪೊಲೀಸ್ ಠಾಣೆಗೆ ದೂರು ನೀಡಲು ನಿರ್ಧರಿಸಲಾಗಿದೆಯಂತೆ. ಆದರೆ ಈಗ ವಿಘ್ನೇಶ್ ಪತ್ರ ಬರೆದ ಹಿನ್ನೆಲೆ ದೂರು ನೀಡದೇ ಇರುವ ಸಾಧ್ಯತೆ ಇದೆ. ಇನ್ನು ಇವರ ಜೊತೆಗೆ ಇದ್ದ ಕೆಲವರು ಕೂಡ ಚಪ್ಪಲಿಧರಿಸಿದ್ದರು. ಆದರೆ ನಯನತಾರಾ ನಟಿ ಎನ್ನುವ ಕಾರಣಕ್ಕೆ ಆಕೆಯ ಹೆಸರಿನಲ್ಲಿ ವಿವಾದ ಸದ್ದು ಮಾಡಿದೆ.

  English summary
  Vignesh Shivan Apologizes For Nayanthara Mistake At Tirumala Temple By Wearing Slipper, Know More Details,
  Saturday, June 11, 2022, 16:07
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X