ನಯನತಾರಾ ಜೊತೆಗಿನ ಮದುವೆ ಪ್ಲಾನ್ ಬಹಿರಂಗ ಪಡಿಸಿದ ವಿಘ್ನೇಶ್ ಶಿವನ್
ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ಸುದ್ದಿ ಎಲ್ಲೆಡೆ ವೈರಲ್ ಆಗಿತ್ತು. ಲಾಕ್ ಡೌನ್ ಸಮಯದಲ್ಲಿ ಇಬ್ಬರೂ ದೇವಸ್ಥಾನದಲ್ಲಿ ಗುಟ್ಟಾಗಿ ಮದುವೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು. ಇಬ್ಬರೂ ತಮ್ಮ ಪ್ರೀತಿಯ ವಿಚಾರವನ್ನೇನೂ ಮುಚ್ಚಿಟ್ಟವರಲ್ಲ. ಸದಾ ಜೊತೆಯಲ್ಲಿಯೇ ಇರುವ ಇವರು ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.
Recommended Video
ವದಂತಿಗಳ ನಡುವೆಯೇ ಇಬ್ಬರು ದೇವಸ್ಥಾನಗಳಿಗೆ ಭೇಟಿ ನೀಡುತ್ತ, ದೇವರ ಪೂಜೆ ಮಾಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಮದುವೆ ಬಗ್ಗೆ ದೊಡ್ಡ ಮಟ್ಟದಲ್ಲಿ ಸುದ್ದಿಯಾದರು ನಯನತಾರಾ ಆಗಲಿ ಅಥವಾ ವಿಘ್ನೇಶ್ ಶಿವನ್ ಯಾವುದೆ ಪ್ರತಿಕ್ರಿಯೆ ನೀಡಿರಲಿಲ್ಲ. ಇದೀಗ ಮದುವೆ ವಿಚಾರವಾಗಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮತ್ತೆ ಸುದ್ದಿಯಲ್ಲಿದ್ದಾರೆ.
ವೆಬ್ ಪೋರ್ಟಲ್ ಗೆ ನೀಡಿದ ಸಂದರ್ಶನವೊಂದರಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ಬಗ್ಗೆ ಮಾತನಾಡಿದ್ದಾರೆ. "ಮದುವೆ ಬಗ್ಗೆ ವದಂತಿಗಳು ಆಗಾಗ ಬರುತ್ತಲೆ ಇರುತ್ತೆ. ಮದುವೆ ಬಗ್ಗೆ ಯೋಚಿಸುವ ಮೊದಲು ಇಬ್ಬರು ಸಾಧಿಸಲು ಸಾಕಷ್ಟಿದೆ. ಗುರಿಯ ಕಡೆ ಗಮನ ಕೊಡಬೇಕು. ಅದಕ್ಕೂ ಮೊದಲು ಮದುವೆ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಇದೀಗ ನಾವು ಸಂತೋಷವಾಗಿದ್ದೇವೆ" ಎಂದಿದ್ದಾರೆ. ಬಳಿಕ ತಮಾಷೆಗಾಗಿ ಎನ್ನುತ್ತ, ಮಾಧ್ಯಮದ ವರದಿಗಳ ಪ್ರಕಾರ ಈಗಾಗಲೆ ಸುಮಾರು 22 ಬಾರಿ ವಿವಾಹವಾಗಿದೆ. ಡೇಟಿಂಗ್ ಬಗ್ಗೆ ಬೇಸರವಾದ ಬಳಿಕ ಮದುವೆಯಾಗುವುದಾಗಿ ಹೇಳಿದ್ದಾರೆ.

ಇನ್ನೂ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆಯೂ ಮಾತನಾಡಿರುವ ವಿಘ್ನೇಶ್" ಇದು ವದಂತಿ ಅಷ್ಟೆ. ಇಂತಹ ಸುದ್ದಿಗಳನ್ನು ಹಬ್ಬಿಸುವುದು ಒಳ್ಳೆಯದಲ್ಲ" ಎಂದಿದ್ದಾರೆ.
'ನಾನುಮ್ ರೌಡಿ ಧಾನ್' ಚಿತ್ರದ ಮೂಲಕ ನಯನತಾರಾ ಕಮ್ ಬ್ಯಾಕ್ ಮಾಡಿದ್ದರು. ಈ ಚಿತ್ರ ಅವರ ವೈಯಕ್ತಿಕ ಜೀವನದ ದಿಕ್ಕನ್ನೂ ಬದಲಿಸಿತು. ಏಕೆಂದರೆ ಚಿತ್ರದ ನಿರ್ದೇಶಕ ವಿಘ್ನೇಶ್ ಮತ್ತು ನಯನತಾರಾ ಪ್ರೀತಿಯಲ್ಲಿ ಬೀಳಲು ಕಾರಣವಾಗಿದ್ದು ಇದೇ ಚಿತ್ರ. ನಯನತಾರಾ ಸದ್ಯ ವಿಜಯ್ ಸೇತುಪತಿ ಜೊತೆ ನಟಿಸುತ್ತಿದ್ದಾರೆ. ಬ್ಯುಸಿಯಾಗಿದ್ದಾರೆ. ಚಿತ್ರದಲ್ಲಿ ಸಮಂತಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.


Click it and Unblock the Notifications











