ಆ ಒಂದು ಅಕ್ಷರಕ್ಕಾಗಿ 112 ಕೋಟಿ ರೂ. ಕೇಳಿದ್ರು; ಶಾಕಿಂಗ್ ಸಂಗತಿ ಬಿಚ್ಚಿಟ್ಟ ವಿಘ್ನೇಶ್ ಶಿವನ್
ತಮಿಳಿನ 'ಲವ್ ಇನ್ಸುರೆನ್ಸ್ ಕಂಪನಿ' ಕಳೆದ ವಾರ ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿದೆ. ಪ್ರದೀಪ್ ರಂಗನಾಥನ್ ನಟನೆಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ನಯನತಾರಾ ಪತಿ ವಿಘ್ನೇಶ್ ಶಿವನ್ ಚಿತ್ರವನ್ನು ನಿರ್ಮಿಸಿ ನಿರ್ದೇಶನ ಮಾಡಿದ್ದಾರೆ. 2040ರ ವೇಳೆಗೆ ಲವ್ ಸ್ಟೋರಿಗಳು ಹೇಗಿರಬಹುದು ಎನ್ನುವ ಕಾನ್ಸೆಪ್ಟ್‌ನಲ್ಲಿ ಚಿತ್ರ ನಿರ್ಮಾಣವಾಗಿದೆ.
ಪ್ರದೀಪ್ ರಂಗನಾಥನ್ ನಟಿಸಿದ 3 ಸಿನಿಮಾಗಳು 100 ಕೋಟಿ ರೂ. ಕಲೆಕ್ಷನ್ ಮಾಡಿ ಹಿಟ್ ಆಗಿತ್ತು. ಹಾಗಾಗಿ 4ನೇ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆ ಇತ್ತು. ಆದರೆ ಎಲ್ಲವೂ ಹುಸಿಯಾಗಿದೆ. ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸೋಲಿನ ಹಾದಿ ಹಿಡಿದಿದೆ. ಇದೆಲ್ಲದರ ನಡುವೆ ಸಿನಿಮಾ ಟೈಟಲ್ ಬಗ್ಗೆ ವಿಘ್ನೇಶ್ ಇಂಟ್ರೆಸ್ಟಿಂಗ್ ಸಂಗತಿ ಬಿಚ್ಚಿಟ್ಟಿದ್ದಾರೆ. ಚಿತ್ರರಂಗದಲ್ಲಿ ಟೈಟಲ್ ವಿವಾದಗಳು ಹೊಸದೇನು ಅಲ್ಲ. ಆದರೆ ಈ ಟೈಟಲ್‌ನಲ್ಲಿ ಅದೊಂದು ಅಕ್ಷರಕ್ಕಾಗಿ 112 ಕೋಟಿ ರೂ. ಕೇಳಿದ್ರು ಎಂದು ಹೇಳಿದ್ದಾರೆ.

'ಲವ್ ಇನ್ಸುರೆನ್ಸ್ ಕಂಪನಿ' ಎನ್ನುವ ಟೈಟಲ್ ಅನ್ನು ಶಾರ್ಟ್ ಆಗಿ 'LIK' ಎಂದು ಚಿತ್ರತಂಡ ಬಳಿಸಿದೆ. ಸಿನಿಮಾ ಪೋಸ್ಟರ್‌ಗಳಲ್ಲಿ ಕೂಡ ಅದೇ ಟೈಟಲ್ ರಾರಾಜಿಸುತ್ತಿದೆ. 'ಲವ್ ಇನ್ಸುರೆನ್ಸ್ ಕಂಪನಿ' ಅಂದರೆ LIC ಆಗಬೇಕು ಅಲ್ವಾ? 'LIK' ಅಂತ ಬದಲಿಸಿದ್ದು ಯಾಕೆ ಎನ್ನುವುದಕ್ಕೆ ಕಾರಣ ತಿಳಿಸಿದ್ದಾರೆ.
Sudhir Srinivasan ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿಘ್ನೇಶ್ ಶಿವನ್ ಹಾಗೂ ಎಸ್. ಜೆ ಸೂರ್ಯ ಭಾಗಿ ಆಗಿದ್ದರು. ಈ ವೇಳೆ ಟೈಟಲ್ ವಿಚಾರ ಪ್ರಸ್ತಾಪವಾಗಿದೆ.
ಮೊದಲಿಗೆ 'LIC' ಎಂದು ಸಿನಿಮಾ ಟೈಟಲ್ ಡಿಸೈನ್ ಮಾಡಿ ಪೋಸ್ಟರ್ ಬಿಟ್ಟಿದ್ದರು. ಬಳಿಕ 'LIC' ಕಂಪನಿಯಿಂದ ನೋಟಿಸ್ ಬಂದಿತ್ತು. ಹಾಗಾಗಿ 'LIK' ಬದಲಿಸಿದ್ದಾರೆ ಎಸ್. ಜೆ ಸೂರ್ಯ ಹೇಳಿದ್ದಾರೆ. ಪೋಸ್ಟರ್ ಬಿಟ್ಟು ಬಳಿಕ 'LIC' ಅವರು ಈ ಟೈಟಲ್ ಬಳಸಲು 112 ಕೋಟಿ ರೂ. ಕೊಡಬೇಕು ಎಂದು, ಇಲ್ಲದಿದ್ದರೆ ಬಳಸಬೇಡಿ ಎಂದರು. ನಾನು ಅದಕ್ಕೂ ಮುನ್ನ LIP, LIT, LIK, LIF ಎಂದು ನಾಲ್ಕೈದು ಟೈಟಲ್ ಅಂದುಕೊಂಡಿದ್ದೆ. ಕೊನೆಗೆ 'LIK' ಎನ್ನುವ ಟೈಟಲ್ ಫೈನಲ್ ಮಾಡಿದೆವು ಎಂದಿದ್ದಾರೆ. ಈ ವೀಡಿಯೋ ಸಖತ್ ವೈರಲ್ ಆಗ್ತಿದೆ.
112 ಕೋಟಿ ಇದ್ದಿದ್ರೆ ವಿಘ್ನೇಶ್ ಹಾಲಿವುಡ್ ಸಿನಿಮಾ ಮಾಡ್ತಿದ್ರು.. ಹಾಗಾಗಿ 'C' ಬದಲು 'K' ಎನ್ನುವ ಅಕ್ಷರ ಬಳಸಿ 112 ಕೋಟಿ ರೂ. ಉಳಿಸಿದ್ದಾರೆ ಎಂದು ಎಸ್. ಜೆ ಸೂರ್ಯ ತಮಾಷೆಯಾಗಿ ಹೇಳಿದ್ದಾರೆ. ಕೃತಿ ಶೆಟ್ಟಿ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸೀಮನ್, ಯೋಗಿ ಬಾಬು, ಮಾಳವಿಕಾ ಹೀಗೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.
ಮೊದಲೇ ಹೇಳಿದಂತೆ 2040ರ ಕಾಲಘಟ್ಟದಲ್ಲಿ ನಡೆಯುವ ಕಥೆ ಚಿತ್ರದಲ್ಲಿದೆ. ಈಗ ಫೇಸ್‌ಬುಕ್, ಇನ್‌ಸ್ಟಾಗ್ರಾಂ ರೀತಿ 15 ವರ್ಷಗಳ ಬಳಿಕ 'ಲವ್ ಇನ್ಸುರೆನ್ಸ್ ಕಂಪನಿ' ಆಪ್ ಬಳಕೆ ಬರುತ್ತದೆ. ಪ್ರೀತಿಗೆ ಇನ್ಸುರೆನ್ಸ್ ಎಂದು ಶುರುವಾಗುವ ಈ ಆಪ್ ಕಾರಣದಿಂದ ಏನೆಲ್ಲಾ ಆಗುತ್ತದೆ. ಒಂದ್ಕಡೆ ಸದಾ ಫೋನ್‌ನಲ್ಲೇ ಮುಳುಗಿನ ಇನ್‌ಫ್ಲುಯೆನ್ಸರ್ ಧೀಮಾ(ಕೃತಿ ಶೆಟ್ಟಿ), ಮತ್ತೊಂದು ಕಡೆ ಮೊಬೈಲ್ ಫೋನ್ ಇಂದ ದೂರಾಗಿ ಬೆಳೆಯುವ ವಾಸು(ಪ್ರದೀಪ್ ರಂಗನಾಥನ್) ಇಬ್ಬರಿಬ್ಬರ ನಡುವೆ ಪ್ರೀತಿ ಶುರುವಾಗುತ್ತದೆ. ಮುಂದೇನು ಎನ್ನುವುದು ಇನ್ನುಳಿದ ಕಥೆ.
ತೆಲುಗಿಗೂ ಡಬ್ ಆಗಿ ಸಿನಿಮಾ ಬಿಡುಗಡೆ ಆಗಿದೆ. ಆದರೆ ಪ್ರೇಕ್ಷಕರನ್ನು ಸೆಳೆಯುವಲ್ಲಿ 'LIK' ಸಿನಿಮಾ ಸೋತಿದೆ. ಕಾನ್ಸೆಪ್ಟ್ ಚೆನ್ನಾಗಿ ಇದ್ದರೂ ಅದನ್ನು ತೆರೆಗೆ ತರುವಲ್ಲಿ ಚಿತ್ರತಂಡ ಸೋತಿದೆ. ಅದೇ ಕಾರಣಕ್ಕೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಕುಂಟುವಂತಾಗಿದೆ. ಐಪಿಎಲ್ ಫೀವರ್ ಕೂಡ ಸಿನಿಮಾ ಮೇಲೆ ಪರಿಣಾಮ ಬೀರಿದೆ.


Click it and Unblock the Notifications











