For Quick Alerts
  ALLOW NOTIFICATIONS  
  For Daily Alerts

  ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಯನತಾರಾ? ಶುಭಾಶಯ ತಿಳಿಸುತ್ತಿದ್ದಾರೆ ಅಭಿಮಾನಿಗಳು

  |

  ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿ ನಯನತಾರಾ ಇತ್ತೀಚಿಗೆ ಸಿನಿಮಾ ವಿಚಾರಗಳಿಗಿಂತ ಹೆಚ್ಚಾಗಿ ಡೇಟಿಂಗ್, ಪ್ರೀತಿ, ಮದುವೆ ವಿಚಾರಗಳಿಗೆ ಸುದ್ದಿಯಲ್ಲಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಯನತಾರಾ ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಪ್ರೀತಿಯಲ್ಲಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ.

  ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುವ ಈ ಜೋಡಿ ಮದುವೆ ವಿಚಾರವನ್ನು ಯಾವತ್ತು ಬಾಯ್ಬಿಟ್ಟಿಲ್ಲ. ಇಬ್ಬರು ಗುಟ್ಟಾಗಿ ಮದುವೆ ಆಗಿದ್ದಾರೆ ಎನ್ನುವ ಸುದ್ದಿ ಅನೇಕ ಬಾರಿ ವೈರಲ್ ಆಗಿದೆ. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಇವರು ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ.

  ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?ನಯನತಾರಾ ಹುಟ್ಟುಹಬ್ಬಕ್ಕೆ ಬಾಯ್‌ಫ್ರೆಂಡ್ ವಿಘ್ನೇಶ್ ಬಂದಿಲ್ಲವೇಕೆ?

  ಇದೀಗ ನಯನತಾರಾ ಮತ್ತು ವಿಘ್ನೇನ್ ಶಿವನ್ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇಂದು ವಿಘ್ನೇಶ್ ಶಿವನ್ ಹಂಚಿಕೊಂಡಿರುವ ಫೋಟೋ. ವಿಘ್ನೇಶ್ ಶಿವನ್ ಎದೆಯ ಮೇಲೆ ನಯನತಾರಾ ಕೈ ಇಟ್ಟಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ನಯನತಾರಾ ಕೈಯಲ್ಲಿರುವ ಉಂಗುರ ಹೈಲೆಟ್ ಆಗಿದೆ.

  ಉಂಗುರ ಹೈಲೆಟ್ ಆಗಲೆಂದೆ ವಿಘ್ನೇಶ್ ಈ ಫೋಟೋ ಹಂಚಿಕೊಂಡಿದ್ದಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಜೊತೆಗೆ ಇಬ್ಬರು ಆಗಲೇ ಎಂಗೇಜ್ ಆಗಿದ್ದಾರೆ ಎಂದು ನಯನತಾರಾ ಮತ್ತು ವಿಘ್ನೇಶ್ ಜೋಡಿಗೆ ಶುಭಾಶಯ ತಿಳಿಸುತ್ತಿದ್ದಾರೆ.

  ನಿರ್ದೇಶಕ ಮಹೇಶ್ ಗೆ ಭರ್ಜರಿ ಉಡುಗೊರೆ ಕೊಟ್ಟ ರಾಬರ್ಟ್ ನಿರ್ಮಾಪಕ | Filmibeat Kannada

  ಆದರೆ ಈ ಜೋಡಿ ನಿಜಕ್ಕೂ ಎಂಗೇಜ್ ಆಗಿದ್ದಾರಾ ಅಥವಾ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡಿದ್ದಾರಾ ಎನ್ನುವುದು ಅಭಿಮಾನಿಗಳ ಪ್ರಶ್ನೆ. ಅಂದಹಾಗೆ ನಾನಮ್ ರೌಡಿ ಧಾನ್ ಸಿನಿಮಾ ಬಳಿಕ ನಯನತಾರಾ ಮತ್ತು ವಿಘ್ನೇಶ್ ನಡುವೆ ಪ್ರೀತಿ ಪ್ರಾರಂಭವಾಗಿದ್ದು, ಇದೀಗ ಮದುವೆವರೆಗೂ ಬಂದಿದೆ. ಈ ಜೋಡಿ ಯಾವಾಗ ಹಸೆಮಣೆ ಏರುತ್ತಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  English summary
  Vignesh Shivan shares a photo with his ladylove Nayanthara. Fans are curious to know if they are engaged.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X