'ನನ್ನ ಸೊಸೆ ಬಂಗಾರ' ಎಂದ ನಯನತಾರಾ ಅತ್ತೆ ಮೀನಾ ಕುಮಾರಿ!
ನಟಿ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಜೋಡಿ ಆರೇಳು ವರ್ಷ ಪ್ರೀತಿಸಿ ಹಸೆಮಣೆ ಏರಿದ್ದರು. ಸಾರೋಗಸಿ ಪದ್ಧತಿಯಲ್ಲಿ ಅವಳಿ ಮಕ್ಕಳ ಪೋಷಕರಾಗಿರುವ ದಂಪತಿ ಸಿನಿಮಾ ಕೆಲಸಗಳ ಜೊತೆ ಜೊತೆಗೆ ಮಕ್ಕಳ ಲಾಲನೆ ಪಾಲನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಹೊಸ ಸೊಸೆ ಬಗ್ಗೆ ಅತ್ತೆ ಮೀನಾ ಕುಮಾರಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ವಿಘ್ನೇಶ್ ಶಿವನ್ ತಾಯಿ ತಮ್ಮ ಸೊಸೆ ನಯನತಾರಾ ಬಹಳ ಒಳ್ಳೆಯವಳು. ಆಕೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಇಷ್ಟ ಎಂದಿದ್ದಾರೆ. ಇನ್ನು ಬೀಗರ ಬಗ್ಗೆಯೂ ಪ್ರಶಂಸೆಗಳ ಸುರಿಮಳೆ ಸುರಿಸಿದ್ದಾರೆ. ಎಲ್ಲಾ ವಿಧದಲ್ಲೂ ಒಳ್ಳೆ ಸೊಸೆ ಸಿಕ್ಕಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಸದ್ಯ ಮೀನಾ ಕುಮಾರಿ ಅವರ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಘ್ನೇಶ್ ಶಿವನ್ ನಿರ್ದೇಶನದ 'ನಾನುಂ ರೌಡಿತಾನ್' ಚಿತ್ರದಲ್ಲಿ ನಯನತಾರಾ ನಟಿಸಿದ್ದರು. ಇದೇ ವೇಳೆ ಇಬ್ಬರು ಸ್ನೇಹಿತರಾಗಿದ್ದರು. ನಂತರ ಆ ಸ್ನೇಹ ಪ್ರೀತಿಗೆ ತಿರುಗಿತ್ತು. ನಂತರ ಪೋಷಕರ ಒಪ್ಪಿಗೆ ಪಡೆದು ವಿಕ್ಕಿ, ನಯನ್ ಖಾಸಗಿ ರೆಸಾರ್ಟ್‌ನಲ್ಲಿ ಮದುವೆ ಆಗಿದ್ದರು.

ಕೆಲಸದಾಕೆ ಸಾಲ ತೀರಿಸಿದ್ದ ನಯನ್
"ನನ್ನ ಮಗ ಸಕ್ಸಸ್ ಫುಲ್ ಡೈರೆಕ್ಟರ್, ಸೊಸೆ ಸ್ಟಾರ್ ಹೀರೊಯಿನ್. ಇಬ್ಬರು ತುಂಬಾ ಕಷ್ಟಪಡುತ್ತಾರೆ. ಹಾಗೆಯೇ ನಯನತಾರ ಸಹಾಯ ಗುಣ ಇರುವಂತಹ ಹುಡುಗಿ. ಅವರ ಮನೆಯಲ್ಲಿ 8 ಮಂದಿ ಕೆಲಸದವರು ಇದ್ದಾರೆ. ಅದರಲ್ಲಿ ಒಬ್ಬ ವಯಸ್ಸಾದ ಮಹಿಳೆ 4 ಲಕ್ಷ ರೂಪಾಯಿ ಸಾಲ ತೀರಿಸಲಾಗದೇ ತೊಂದರೆಗೆ ಸಿಲುಕಿದ್ದ ವಿಷಯ ತಿಳಿದು ನಯನತಾರ ಕೂಡಲೇ ಆಕೆಯ ಸಾಲ ತೀರಿಸಿದ್ದಳು. ಆಕೆಗೆ ಒಳ್ಳೆ ಸಂಭಾವನೆ ಬರುತ್ತದೆ. 4 ಲಕ್ಷ ದೊಡ್ಡದಲ್ಲ. ಆದರೆ ಕೊಡುವ ಮನಸ್ಸು ಇರಬೇಕು ಅಲ್ಲವೇ" ಎಂದು ಸೊಸೆಯ ಬಗ್ಗೆ ಪ್ರಶಂಸೆಯ ಮಳೆ ಸುರಿಸಿದ್ದಾರೆ

ಕೆಲಸದಾಕೆಗೆ ಚಿನ್ನದ ಬಳೆ ಕೊಟ್ಟ ಬೀಗರು
ಪೊಲೀಸ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಮೀನಾ ಕುಮಾರಿ, ಮಕ್ಕಳು ಮೊಮ್ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದಾರೆ. ಇನ್ನು ಬೀಗರ ಬಗ್ಗೆ ಮಾತನಾಡುತ್ತಾ "ನಯನತಾರ ಅವರ ಅಮ್ಮ ಒಮ್ಮೆ ಕೇರಳದಿಂದ ಬಂದಿದ್ದರು. ನಾವೆಲ್ಲಾ ಕೂತು ಮಾತನಾಡುತ್ತಿದ್ದೆವು. ಕೂಡಲೇ ಅವರು ಎರಡು ಚಿನ್ನದ ಬಳೆಯನ್ನು ಮನೆ ಕೆಲಸದಾಕೆ ಕೈ ತೊಡಿಸಿದರು" ಎಂದಿದ್ದಾರೆ.

10 ಜನರ ಕೆಲಸ ನಯನತಾರ ಒಬ್ಳೆ ಮಾಡ್ತಾಳೆ
"ನಯನತಾರಗೆ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು, ಹಿರಿಯರ ಯೋಗಕ್ಷೇಮ ವಿಚಾರಿಸುವುದು ಎಲ್ಲವೂ ಗೊತ್ತು. 10 ಜನ ಮಾಡುವ ಕೆಲವನ್ನು ನಯನತಾರಾ ಒಬ್ಬಳೇ ಮಾಡುತ್ತಾಳೆ. ನಾವು ನಮ್ಮ ಮಕ್ಕಳಿಗೆ ಕಷ್ಟಪಡುವುದನ್ನು ಕಲಿಸಿದ್ದೇವೆ. ನಯನತಾರ ಕೂಡ ಕಷ್ಟಪಡುವುದು ಗೊತ್ತಿರುವ ಹುಡುಗಿ. ನಯನತಾರ, ವಿಗ್ನೇಶ್ ಅವರ ವೃತ್ತಿಯನ್ನು ಗೌರವಿಸುತ್ತಾರೆ. ಅದರಲ್ಲಿ ಉನ್ನತ ಸ್ಥಾನಕ್ಕೇರಲು ಶ್ರಮಿಸಿದರು" ಎಂದು ವಿಘ್ನೇಶ್ ತಾಯಿ ತಿಳಿಸಿದ್ದಾರೆ.

ಸರೋಗಸಿ ಪದ್ದತಿಯಿಂದ ಅವಳಿ ಮಕ್ಕಳು
ನಯನತಾರ ಹಾಗೂ ವಿಘ್ನೇಶ್ ಶಿವನ್ ಇದೇ ವರ್ಷ ಜೂನ್‌ನಲ್ಲಿ ಮದುವೆ ಆಗಿದ್ದರು. ಮಹಾಬಲೇಶ್ವರದಲ್ಲಿ ಇವರ ವಿವಾಹ ನಡೆಯಿತು. ಮದುವೆ ಆದ 6 ತಿಂಗಳಿಗೆ ಅವಳಿ ಮಕ್ಕಳ ಪೋಕಷರಾಗಿರುವುದಾಗಿ ಘೋಷಿಸಿ ಶಾಕ್ ಕೊಟ್ಟಿದ್ದರು. ನಂತರ ಸರೋಗಸಿ ಪದ್ದತಿಯಲ್ಲಿ ಮಕ್ಕಳನ್ನು ಪಡೆದಿರುವುದು ಗೊತ್ತಾಯಿತು. ಇದು ವಿವಾದಕ್ಕೂ ಕಾರಣವಾಗಿತ್ತು. ಆದರೆ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಿಯೇ ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆದಿದ್ದಾಗಿ ನಿರೂಪಿಸಿದ್ದಾರೆ.


Click it and Unblock the Notifications











