ದಿನಕ್ಕೆ ಇಷ್ಟು ಆದಾಯ ಬರುವಂತಾದ್ರೆ, ಕೆಲಸ ಬಿಟ್ಟು ಹ್ಯಾಪಿಯಾಗಿ ಜೀವನ ಮಾಡ್ಬೋದು
ಆಸೆಗೆ ಕೊನೆಯೇ ಇಲ್ಲ. ಇಷ್ಟು ಇರುವಾಗ ಅಷ್ಟು ಬೇಗ ಎಂಬ ಆಸೆ.. ಅಷ್ಟು ಬಂದಾಗ ಇನ್ನಷ್ಟು ಬೇಕೆಂಬ ಆಸೆ.. ಇನ್ನಷ್ಟು ಬಂದಾಗ ಮತ್ತಷ್ಟು ಪಡೆಯಬೇಕೆಂಬ ಆಸೆ.. ಅದಕ್ಕೆ ಆಸೆ ದುಃಖಕ್ಕೆ ಮೂಲ ಎನ್ನುತ್ತಾರೆ. ಇದು 'ಶಬರಿಮಲೆ ಸ್ವಾಮಿ ಅಯ್ಯಪ್ಪ' ಚಿತ್ರದ ಡೈಲಾಗ್.. ಇದು ಸತ್ಯ ಕೂಡ.. ಎಲ್ಲರೂ ಹಣದ ಹಿಂದೆ ಓಡುವವರೇ. ತಮಿಳು ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಆಸೆಯನ್ನು ಬಿಚ್ಚಿಟ್ಟಿದ್ದಾರೆ.
ಖ್ಯಾತ ನಟಿ ನಯತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ಅದ್ಧೂರಿಯಾಗಿ ನಡೆದಿತ್ತು. ಸಾರೋಗಸಿ ಪದ್ಧತಿಯಲ್ಲಿ ದಂಪತಿ ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಮಕ್ಕಳ ಲಾಲನೆ ಪಾಲನೆ ಜೊತೆ ಜೊತೆಗೆ ಇಬ್ಬರೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಘ್ನೇಶ್ ನಿರ್ಮಿಸಿ ನಿರ್ದೇಶಿಸಿದ 'ಲವ್ ಇನ್ಸುರೆನ್ಸ್ ಕಂಪನಿ' ಸಿನಿಮಾ ಇತ್ತೀಚೆಗೆ ತೆರೆಕಂಡು ಸೋತಿತ್ತು. ಪ್ರದೀಪ್ ರಂಗನಾಥನ್ ಹಾಗೂ ಕೃತಿ ಶೆಟ್ಟಿ ನಟನೆಯ ಸಿನಿಮಾ ನಿರಾಸೆ ಮೂಡಿಸಿತ್ತು.

ನಯನಯತಾರಾ ಈಗ ಬಹುಬೇಡಿಕೆಯ ನಟಿಯಾಗಿ ಗುರ್ತಿಸಿಕೊಂಡಿದ್ದಾರೆ. 'ಟಾಕ್ಸಿಕ್' ಚಿತ್ರದಲ್ಲಿ ಯಶ್ ಸಹೋದರಿ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಸಲ್ಮಾನ್ ಖಾನ್ ಜೋಡಿಯಾಗಿ ಹಿಂದಿ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಘ್ನೇಶ್ ನಿರ್ದೇಶಕರಾಗಿ ತಮ್ಮದೇ ಹಾದಿಯಲ್ಲಿ ಮುಂದುವರೆದಿದ್ದಾರೆ. ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕು ಎಂದು Behindwoods TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ವಿಘ್ನೇಶ್ ಹೇಳಿದ್ದಾರೆ. ದೊಡ್ಡ ಮೊತ್ತದ ಹಣ ಸಂಪಾದಿಸಿಬಿಟ್ರೆ ಬಳಿಕ ನೆಮ್ಮದಿಯಾಗಿ ಮಕ್ಕಳ ಜೊತೆ ಕಾಲ ಕಳೆಯಬಹುದು ಎಂದಿದ್ದಾರೆ.
ವಿಘ್ನೇಶ್ ಶಿವನ್ ಮಾತನಾಡಿ "ನನಗೆ ಅವಕಾಶ ಸಿಕ್ಕರೆ, ಕೆಲಸ ಮಾಡುವುದು ಬೇಡ ಎನಿಸಿದರೆ ಮಕ್ಕಳ ಜೊತೆ ಕಾಲ ಕಳೆಯಲು ಬಯಸುತ್ತೇನೆ.. 350 ಕೋಟಿ ರೂ. ಫಿಕ್ಸೆಡ್ ಡೆಪಾಸಿಟ್ ಇಟ್ಟುಬಿಟ್ರೆ ಜೀವನದಲ್ಲಿ ಸೆಟ್ಲ್ ಆಗಿಬಿಡಬಹುದು" ಎಂದು ವಿಘ್ನೇಶ್ ತಮ್ಮದೇ ಲೆಕ್ಕ ಮುಂದಿಟ್ಟಿದ್ದಾರೆ. "ಅಷ್ಟು ಹಣ ಬ್ಯಾಂಕ್‌ನಲ್ಲಿ ಇಟ್ರೆ ವರ್ಷಕ್ಕೆ 7% ಬಡ್ಡಿ ಅಂದ್ರೆ 21 ಕೋಟಿ ರೂ. ಸಿಗುತ್ತೆ.. ತಿಂಗಳಿಗೆ 1.50 ಕೋಟಿ ರೂ. ಅಂದ್ರು ದಿನಕ್ಕೆ 30 ಲಕ್ಷ ರೂ.. ಪಡೆಯಬಹುದು.. ಅಷ್ಟು ಇದ್ರೆ ವಿಮಾನದಲ್ಲೇ ಸುತ್ತಾಡಬಹುದು" ಎಂದು ತಮಾಷೆ ಮಾಡಿದ್ದಾರೆ.

ನಿರ್ದೇಶಕ ವಿಘ್ನೇಶ್ ಶಿವನ್ ಹೇಳಿಕೆ ವೈರಲ್ ಆಗ್ತಿದೆ. ನಯನತಾರಾ ಹಾಗೂ ವಿಘ್ನೇಶ್ ಖುಷಿಯಾಗಿ ಜೀವನ ನಡೆಸಲು ದಿನಕ್ಕೆ 30 ಲಕ್ಷ ರೂ. ಬೇಕಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಾನು ಈಗ ಹಣ ಸಂಪಾದನೆ ಕಡೆ ಗಮನ ಹರಿಸಿದ್ದೀನಿ.. ದೊಡ್ಡ ಉದ್ಯಮಿಗಳು ಸಿಕ್ಕರೆ ಸಲಹೆ ಸೂಚನೆ ಕೇಳ್ತೀನಿ ಎಂದಿದ್ದಾರೆ. ಈಗ ಎಷ್ಟು ಕೋಟಿ ರೂ. ಗಳಿಸಿದ್ದೀರಾ? ಎಂಬ ಪ್ರಶ್ನೆಗೆ ವಿಘ್ನೇಶ್ ನಸುನಕ್ಕು ಸುಮ್ಮನಾಗಿದ್ದಾರೆ.
14 ವರ್ಷಗಳ ಹಿಂದೆ 'ಪೋಡ ಪೋಡಿ' ಚಿತ್ರದ ಮೂಲಕ ವಿಘ್ನೇಶ್ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದರು. 2015ರಲ್ಲಿ ಬಂದ 'ನಾನುಂ ರೌಡಿದಾನ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಚಿತ್ರದಲ್ಲಿ ನಯನತಾರಾ ನಾಯಕಿಯಾಗಿ ನಟಿಸಿದ್ದರು. ಅಷ್ಟರಲ್ಲಾಗಲೇ ಎರಡು ಬಾರಿ ಪ್ರೀತಿಯಲ್ಲಿ ಸೋತಿದ್ದ ನಯನ್, 3ನೇ ಬಾರಿ ವಿಘ್ನೇಶ್ ಪ್ರೀತಿಲಿ ಬಿದ್ದಿದ್ದರು. 2022ರಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಜೋಡಿ ಹಸೆಮಣೆ ಏರಿದ್ದರು. ನೆಟ್‌ಫ್ಲಿಕ್ಸ್‌ನಲ್ಲಿ ಇಬ್ಬರ ಮದುವೆ ಹಾಗೂ ವೈಯಕ್ತಿಕ ಜೀವನದ ಸಂಗತಿಯನ್ನು ಡಾಕ್ಯುಮೆಂಟರಿ ರೂಪದಲ್ಲಿ ಸ್ಟ್ರೀಮಿಂಗ್ ಮಾಡಲಾಗುತ್ತು.
ನಯನ್- ವಿಘ್ನೇಶ್ ದಂಪತಿ 'ರೌಡಿ ಪಿಕ್ಚರ್ಸ್' ಹೆಸರಿನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಹುಟ್ಟಾಕ್ಕಿದ್ದಾರೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ. ಇತ್ತೀಚೆಗೆ ವಿಘ್ನೇಶ್ ಸಿನಿಮಾ ನಿರ್ದೇಶನ ಕಮ್ಮಿ ಮಾಡಿದ್ದಾರೆ. ನಯನತಾರಾ ಮಾತ್ರ ಮದುವೆ ಬಳಿಕ ಕೂಡ ಬಹುಬೇಡಿಕೆಯ ನಟಿಯಾಗಿ ಮಿಂಚುತ್ತಿದ್ದಾರೆ.


Click it and Unblock the Notifications