For Quick Alerts
  ALLOW NOTIFICATIONS  
  For Daily Alerts

  'ವಾರಿಸು' Vs 'ತುನಿವು': ವಿಜಯ್ ಹಾಗೂ ಅಜಿತ್ ಫ್ಯಾನ್ಸ್ ಮಧ್ಯೆ ಮಧುರೆಯಲ್ಲಿ ಪೋಸ್ಟರ್ ವಾರ್!

  |

  ಸೂಪರ್ ಸ್ಟಾರ್‌ಗಳ ಫ್ಯಾನ್ಸ್ ವಾರ್ ಹೊಸದೇನು ಅಲ್ಲ. ನಟರ ನಡುವೆ ಯಾವುದೇ ವೈಮನಸ್ಸು ಇಲ್ಲದೇ ಇದ್ದರೂ ಅಭಿಮಾನಿಗಳು ಮಾತ್ರ ತನ್ನ ನೆಚ್ಚಿನ ನಟನೇ ಗ್ರೇಟು, ಬಾಸ್ ಅಂತೆಲ್ಲಾ ಗಲಾಟೆ ಗದ್ದಲ ಮಾಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಇಂತಹ ಫ್ಯಾನ್ಸ್ ವಾರ್ ನಡೀತಾನೆ ಇರುತ್ತದೆ. ಆದರೆ ದಳಪತಿ ವಿಜಯ್ ಹಾಗೂ ಥಲಾ ಅಜಿತ್ ಫ್ಯಾನ್ಸ್ ನಡುವಿನ ವಾರ್ ಮತ್ತೊಂದು ಹಂತಕ್ಕೆ ಹೋಗಿದೆ.

  ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಉಳಗ ನಾಯಗನ್ ಕಮಲ್ ಹಾಸನ್ ನಂತರದ ಸ್ಥಾನದಲ್ಲಿ ನಿಲ್ಲುವ ನಟರು ವಿಜಯ್ ಹಾಗೂ ಅಜಿತ್. ಇವರಿಬ್ಬರಿಗೂ ಬಹಳ ದೊಡ್ಡ ಅಭಿಮಾನಿ ಬಳಗ ಇದೆ. ನಮ್ಮ ನಟನೇ ಎಲ್ಲರಿಗಿಂತ ಹೆಚ್ಚು ಎಂದು ಸಾರುವ ಭರದಿಂದ ಮತ್ತೊಬ್ಬ ನಟನನ್ನು, ಅವರ ಅಭಿಮಾನಿಗಳನ್ನು ಕೆಣಕುವ ಪ್ರಯತ್ನ ನಡೀತಿದೆ. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್‌ ಮಾಡುವುದು ಕೆಟ್ಟ ಕೆಟ್ಟ ಟ್ಯಾಗ್‌ಗಳನ್ನು ಹಾಕಿ ಟ್ರೆಂಡ್ ಮಾಡೋದು ಹೆಚ್ಚಾಗಿದೆ.

  ಥಲಾ ಅಜಿತ್ ಮುಂದಿನ ಸಿನಿಮಾ 'ತುನಿವು': ಈ ಟೈಟಲ್ ಅರ್ಥ ಏನು?ಥಲಾ ಅಜಿತ್ ಮುಂದಿನ ಸಿನಿಮಾ 'ತುನಿವು': ಈ ಟೈಟಲ್ ಅರ್ಥ ಏನು?

  ಇದೀಗ ವಿಜಯ್ ನಟನೆಯ 'ವಾರಿಸು'(ಉತ್ತರಾಧಿಕಾರಿ) ಹಾಗೂ ಅಜಿತ್ ನಟನೆಯ 'ತುನಿವು'(ಧೈರ್ಯ) ಸಿನಿಮಾಗಳು ಒಟ್ಟೊಟ್ಟಿಗೆ ಬಿಡುಗಡೆಗೆ ಸಿದ್ಧವಾಗ್ತಿದೆ. ಆದರೆ ಈ ಸಿನಿಮಾಗಳ ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಇಬ್ಬರ ಫ್ಯಾನ್ಸ್ ಮಧ್ಯೆ ತಿಕ್ಕಾಟ ಶುರುವಾಗಿದೆ.

   ವಿಕೋಪಕ್ಕೆ ತಿರುಗಿದ ಫ್ಯಾನ್ಸ್ ವಾರ್

  ವಿಕೋಪಕ್ಕೆ ತಿರುಗಿದ ಫ್ಯಾನ್ಸ್ ವಾರ್

  ಇತ್ತೀಚೆಗೆ ಅಜಿತ್ ಅಭಿನಯದ 'ತುನಿವು' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿತ್ತು. ಇದನ್ನು ದೊಡ್ಡದಾಗಿ ಪ್ರಿಂಟ್ ಹಾಕಿಸಿ ತಮಿಳುನಾಡಿನ ಮಧುರೈ ಬೀದಿಯ ಗೋಡೆಗಳಲ್ಲಿ ಫ್ಯಾನ್ಸ್ ಅಂಟಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಜಯ್ ಫ್ಯಾನ್ಸ್ 'ತುನಿವು ಆದರೂ ಸರಿ ಯಾರಾದರೂ ಸರಿ ಮೊದಲು ನಮ್ಮ ದಳಪತಿ ಎಂಟ್ರಿ' ಎಂದು ಪೋಸ್ಟರ್‌ಗಳಲ್ಲಿ ಪ್ರಿಂಟ್ ಹಾಕಿಸಿ ಅಂಟಿಸಿದ್ದಾರೆ. ಇದು ಅಜಿತ್ ಫ್ಯಾನ್ಸ್ ಕೆರಳುವಂತೆ ಮಾಡಿತ್ತು.

  'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?'ಭಿಕ್ಷುಕ ವಿಜಯ್' ಸ್ಟಾರ್ ನಟನನ್ನು ಹೀಗೆನ್ನುವುದೇ ನೆಟ್ಟಿಗರು: ಕಾರಣವೇನು?

   ವಿಜಯ್ ಫ್ಯಾನ್ಸ್‌ಗೆ ಅಜಿತ್ ಫ್ಯಾನ್ಸ್ ಕೌಂಟರ್

  ವಿಜಯ್ ಫ್ಯಾನ್ಸ್‌ಗೆ ಅಜಿತ್ ಫ್ಯಾನ್ಸ್ ಕೌಂಟರ್

  ದಳಪತಿ ವಿಜಯ್ ಫ್ಯಾನ್ಸ್ ಅಂಟಿಸಿದ ಪೋಸ್ಟರ್‌ಗೆ ಪ್ರತಿಯಾಗಿ ಅಜಿತ್ ಫ್ಯಾನ್ಸ್ "ನಮಗೆ ಎದುರು ನಿಲ್ಲಬೇಕು ಎಂದು ಯೋಚಿಸಬೇಡ. ಯಾಕೆಂದರೆ ನಮಗೆ 'ತುನಿವು' ಜಾಸ್ತಿ. ಒಂದು ವೇಳೆ ಯೋಚಿಸಿದರೆ 'ವಾರಿಸು'ನ ಮುಗಿಸಿಬಿಡ್ತೀವಿ" ಎಂದು ಕೌಂಟರ್‌ ಕೊಟ್ಟು ಪೋಸ್ಟರ್ ಅಂಟಿಸಿದ್ದಾರೆ. ಈ ಪೋಸ್ಟರ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

   ಅಜಿತ್- ವಿಜಯ್ ಆತ್ಮೀಯ ಸ್ನೇಹಿತರು

  ಅಜಿತ್- ವಿಜಯ್ ಆತ್ಮೀಯ ಸ್ನೇಹಿತರು

  ದಳಪತಿ ವಿಜಯ್ ಹಾಗೂ ಥಲಾ ಅಜಿತ್ ಇಬ್ಬರೂ ಕಾಲಿವುಡ್ ಸೂಪರ್ ಸ್ಟಾರ್‌ಗಳು. ಇಬ್ಬರಿಗೂ ದೇಶ ವಿದೇಶಗಳಲ್ಲಿ ಅಭಿಮಾನಿಗಳ ಬಳಗವಿದೆ. ಹೆಚ್ಚು ಕಡಿಮೆ ಒಂದೇ ಸಮಯದಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಇವರಿಬ್ಬರೂ ಆರಂಭದಲ್ಲಿ ಒಂದೇ ಸಿನಿಮಾದಲ್ಲಿ ಕೂಡ ನಟಿಸಿದ್ದರು. ಇಬ್ಬರ ಮಧ್ಯೆ ವೃತ್ತಿಪರ ಪೈಪೋಟಿ ಇದೆ. ಅದು ಬಿಟ್ಟರೆ ಇಬ್ಬರ ನಡುವೆ ಆತ್ಮೀಯ ಒಡನಾಟವಿದೆ. ಸಾಕಷ್ಟು ವೇದಿಕೆಗಳಲ್ಲಿ ಇದನ್ನು ಹೇಳಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಮಾತ್ರ ಕಚ್ಚಾಡುತ್ತಲೇ ಇದ್ದಾರೆ.

  ಮಹೇಶ್ ಬಾಬು Vs ವಿಜಯ್: ಕೀಳು ಮಟ್ಟಕ್ಕಿಳಿದ ಫ್ಯಾನ್ಸ್ ವಾರ್!ಮಹೇಶ್ ಬಾಬು Vs ವಿಜಯ್: ಕೀಳು ಮಟ್ಟಕ್ಕಿಳಿದ ಫ್ಯಾನ್ಸ್ ವಾರ್!

   ಸಂಕ್ರಾಂತಿಗೆ 'ವಾರಿಸು' Vs 'ತುನಿವು'

  ಸಂಕ್ರಾಂತಿಗೆ 'ವಾರಿಸು' Vs 'ತುನಿವು'

  ಅಜಿತ್ ಹಾಗೂ ವಿಜಯ್ ಫ್ಯಾನ್ಸ್ ನಡುವೆ ಗಲಾಟೆ ನಡೀತಾನೇ ಇರುತ್ತೆ. ಇದೇ ಕಾರಣಕ್ಕೆ ಇಬ್ಬರ ಸಿನಿಮಾಗಳು ಒಟ್ಟಿಗೆ ಬರದಂತೆ ನೋಡಿಕೊಳ್ಳಲಾಗುತ್ತಿತ್ತು. ಆದರೆ ಈ ಬಾರಿ ಸಂಕ್ರಾಂತಿ ಹಬ್ಬಕ್ಕೆ 'ವಾರಿಸು' ಮತ್ತು 'ತುನಿವು' ಸಿನಿಮಾಗಳನ್ನು ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಇದರಿಂದ ಮತ್ತೆ ಫ್ಯಾನ್ಸ್ ಮಧ್ತೆ ತಿಕ್ಕಾಟ, ಗಲಾಟೆ ಹೆಚ್ಚಾಗುವ ಸಾಧ್ಯತೆ ಇದೆ. ಕೊನೆ ಕ್ಷಣದಲ್ಲಿ ಯಾವುದಾದರೂ ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಾ ಕಾದು ನೋಡಬೇಕು.

  English summary
  Vijay And Ajith Fans Thunivu Vs varisu poster War Takes An Ugly Turn. Know More
  Monday, September 26, 2022, 12:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X