For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುನ್ನವೇ ತನ್ನ ಬೃಹತ್ ಬಜೆಟ್ ದುಡ್ಡನ್ನು ಬಾಚಿಕೊಂಡ ವಿಜಯ್-ರಶ್ಮಿಕಾ ಅಭಿನಯದ 'ವಾರಿಸು'!

  |

  ಈ ವರ್ಷ ಬೀಸ್ಟ್ ಎಂಬ ಚಿತ್ರದ ಮೂಲಕ ನಿರೀಕ್ಷಿಸಿದ್ದ ಗೆಲುವನ್ನು ಕಾಣುವಲ್ಲಿ ವಿಫಲವಾದ ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ಅಭಿನಯದ ಮುಂದಿನ ಚಿತ್ರ ವಾರಿಸು ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಗೆಟಿವ್ ಹಾಗೂ ಪಾಸಿಟಿವ್ ಎರಡೂ ವಿಚಾರಗಳಿಂದಾಗಿ ವಾರಿಸು ಕಳೆದ ಕೆಲ ತಿಂಗಳುಗಳಿಂದ ಟ್ರೆಂಡಿಂಗ್ ಪಟ್ಟಿಯಲ್ಲಿದೆ. ಈ ಚಿತ್ರಕ್ಕೆ ತೆಲುಗು ನಿರ್ದೇಶಕ ವಂಶಿ ಪಡಿಪಲ್ಲಿ ಆಕ್ಷನ್ ಕಟ್ ಹೇಳಿದ್ದಾರೆ ಹಾಗೂ ತೆಲುಗು ನಿರ್ಮಾಪಕರಾದ ದಿಲ್ ರಾಜು ಹಾಗೂ ಸಿರೀಶ್ ಬಂಡವಾಳ ಹೂಡಿದ್ದಾರೆ.

  ಹೀಗೆ ತೆಲುಗು ಹಾಗೂ ತಮಿಳಿನ ಕಲಾವಿದರ ಕಾಂಬಿನೇಶನ್‌ನಲ್ಲಿ ಮೂಡಿ ಬರುತ್ತಿರುವ ವಾರಿಸು ಚಿತ್ರಕ್ಕೆ ಕನ್ನಡದ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. 2022ರ ಏಪ್ರಿಲ್ ತಿಂಗಳಿನಲ್ಲಿ ಫೋಟೋಶೂಟ್ ನಡೆಸುವ ಮೂಲಕ ಕೆಲಸ ಆರಂಭಿಸಿದ ವಾರಿಸು ಚಿತ್ರತಂಡ ಇತ್ತೀಚೆಗಷ್ಟೆ ಚಿತ್ರ ಮೊದಲ ಹಾಡು 'ರಂಜಿದಮೆ'ಯನ್ನು ಬಿಡುಗಡೆ ಮಾಡುವ ಮೂಲಕ ಸದ್ದು ಮಾಡಿತ್ತು.

  ಇದಾದ ಬೆನ್ನಲ್ಲೇ ಚಿತ್ರದ ಹಕ್ಕುಗಳ ಮಾರಾಟಕ್ಕೆ ಇಳಿದಿರುವ ನಿರ್ಮಾಪಕ ದಿಲ್ ರಾಜು ಬಿಡುಗಡೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ವಿವಿಧ ಹಕ್ಕುಗಳ ಮೂಲಕ ಚಿತ್ರದ ಬಜೆಟ್‌ಗಿಂತ ಹೆಚ್ಚು ಹಣವನ್ನು ಬಾಚಿಕೊಂಡಿದ್ದಾರೆ. ಇನ್ನು ವಾರಿಸು ಚಿತ್ರ ಕಲಾವಿದರ ಸಂಭಾವನೆಯೂ ಸೇರಿದಂತೆ ಸುಮಾರು 200 ಕೋಟಿ ವೆಚ್ಚದಲ್ಲಿ ತಯಾರಾಗುತ್ತಿದ್ದು, ಈಗಾಗಲೇ ಇದಕ್ಕಿಂತ ಹೆಚ್ಚು ಹಣವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹಾಗಿದ್ದರೆ ವಾರಿಸು ಚಿತ್ರದ ಪ್ರಿ ರಿಲೀಸ್ ಬ್ಯುಸಿನೆಸ್‌ನ ಅಂಕಿಅಂಶಗಳು ಹೇಗಿವೆ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ ನೋಡಿ..

  271 ಕೋಟಿ ಗಳಿಸಿದ ವಾರಿಸು

  271 ಕೋಟಿ ಗಳಿಸಿದ ವಾರಿಸು

  ವಾರಿಸು ಚಿತ್ರದ ಆಡಿಯೋ, ಡಿಜಿಟಲ್, ಸ್ಯಾಟಲೈಟ್ ಹಾಗೂ ವಿತರಣಾ ಹಕ್ಕುಗಳು ಈಗಾಗಲೇ ಮಾರಾಟವಾಗಿದ್ದು ಚಿತ್ರ ಈ ಹಕ್ಕುಗಳ ಮೂಲಕವೇ ಬರೋಬ್ಬರಿ 271 ಕೋಟಿ ಗಳಿಸಿದೆ.

  ವಿತರಣಾ ಹಕ್ಕು:

  ತಮಿಳು ನಾಡು - 70 ಕೋಟಿ

  ಕರ್ನಾಟಕ - 7.5 ಕೋಟಿ

  ಕೇರಳ - 6.5 ಕೋಟಿ

  ವಿದೇಶ - 35 ಕೋಟಿ

  ಹಿಂದಿ ಡಬ್ಬಿಂಗ್ ಹಕ್ಕು - 32 ಕೋಟಿ

  ಆಡಿಯೊ ಹಕ್ಕು - 10 ಕೋಟಿ

  ಡಿಜಿಟಲ್ ಸ್ಟ್ರೀಮಿಂಗ್ ಹಕ್ಕು - 60 ಕೋಟಿ

  ಸ್ಯಾಟಲೈಟ್ ಹಕ್ಕು - 50 ಕೋಟಿ

  ತೆಲುಗು ರಾಜ್ಯಗಳಲ್ಲಿ ಸ್ವಂತ ರಿಲೀಸ್

  ತೆಲುಗು ರಾಜ್ಯಗಳಲ್ಲಿ ಸ್ವಂತ ರಿಲೀಸ್

  ಇನ್ನು ಚಿತ್ರವನ್ನು ತೆಲುಗಿನ ನಿರ್ಮಾಪಕ ದಿಲ್ ರಾಜು ನಿರ್ಮಿಸುತ್ತಿರುವ ಕಾರಣ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ವಿತರಣಾ ಹಕ್ಕನ್ನು ಯಾರಿಗೂ ಮಾರಾಟ ಮಾಡಿಲ್ಲ. ದಿಲ್ ರಾಜು ತಮ್ಮದೇ ಆದ ವಿತರಣಾ ಸಂಸ್ಥೆ ಹೊಂದಿರುವ ಕಾರಣ ತಾವೇ ಸ್ವಂತವಾಗಿ ತಮ್ಮ ರಾಜ್ಯಗಳಲ್ಲಿ ಚಿತ್ರವನ್ನು ವಿತರಿಸಲಿದ್ದಾರೆ.

  ವಾರಿಸು vs ತುನಿವು

  ವಾರಿಸು vs ತುನಿವು

  ವಾರಿಸು ಚಿತ್ರ ಮುಂದಿನ ವರ್ಷದ ಸಂಕ್ರಾಂತಿ ಹಬ್ಬದ ಪ್ರಯುಕ್ತ 2023ರ ಜನವರಿ 12ರಂದು ಬಿಡುಗಡೆಗೊಳ್ಳಲಿದೆ. ಇದೇ ದಿನ ತಮಿಳಿನ ಮತ್ತೋರ್ವ ದೊಡ್ಡ ನಟ ಅಜಿತ್ ಕುಮಾರ್ ಅಭಿನಯದ ತುನಿವು ಚಿತ್ರ ಕೂಡ ಬಿಡುಗಡೆಗೊಳ್ಳಲಿದ್ದು ಬಾಕ್ಸ್ ಆಫೀಸ್‌ನಲ್ಲಿ ಸಂಕ್ರಾಂತಿ ಕಾಳಗ ಜೋರಾಗಿರಲಿದೆ.

  English summary
  Vijay and Rashmika Mandanna starrer Varisu made pre release business of 271 crores and recovered budget. Read on
  Tuesday, November 15, 2022, 19:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X