ಒಂದೇ ಕಾರಿನಲ್ಲಿ ದಳಪತಿ ವಿಜಯ್ ಹಾಗೂ ತ್ರಿಶಾ ಸುತ್ತಾಟ; ವೀಡಿಯೋ ಫುಲ್ ವೈರಲ್

ತಮಿಳು ನಟ, ಟಿವಿಕೆ ಪಕ್ಷದ ಅಧ್ಯಕ್ಷ ವಿಜಯ್ ಹಾಗೂ ಪತ್ನಿ ಸಂಗೀತಾ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಕೆಲ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರಾಗಲು ಸಂಗೀತಾ ನಿರ್ಧರಿಸಿದ್ದಾರೆ. ಈಗಾಗಲೇ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿಯೊಬ್ಬಳ ಜೊತೆಗಿನ ವಿಜಯ್ ಅನೈತಿಕ ಸಂಬಂಧವೇ ಇದಕ್ಕೆ ಕಾರಣ ಎಂದು ಸಂಗೀತಾ ಆರೋಪಿಸಿದ್ದಾರೆ.

ವಿಜಯ್ ಹಾಗೂ ತ್ರಿಶಾ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಊಹಾಪೋಹ ಇನ್ನು ನಿನ್ನೆಯದ್ದಲ್ಲ. ಇದೀಗ ಆ ವಿಚಾರ ಹೆಚ್ಚು ಚರ್ಚೆಗೆ ಬಂದಿದೆ. ಡಿವೋರ್ಸ್ ವಿಚಾರ ಸದ್ದು ಮಾಡುತ್ತಿರುವಾಗಲೇ ವಿಜಯ್ ಹಾಗೂ ತ್ರಿಶಾ ಒಂದೇ ಕಾರಿನಲ್ಲಿ ಸುತ್ತಾಡಲು ಆರಂಭಿಸಿದ್ದಾರೆ. ಇಂದು(ಮಾರ್ಚ್ 5) ಸಂಜೆ ಚೆನ್ನೈನಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದಕ್ಕೆ ಇಬ್ಬರೂ ಒಟ್ಟಿಗೆ ಬಂದು ಭಾಗವಹಿಸಿದ್ದಾರೆ. ಆ ಮೂಲಕ ಆಡಿಕೊಳ್ಳುವವರ ಬಾಯಿ ಮುಚ್ಚಿಸುವ ಪ್ರಯತ್ನ ಮಾಡಿದಂತೆ ಕಾಣುತ್ತಿದೆ.

Vijay and Trisha Attend Chennai Wedding Together Amid Divorce Rumours with Sangeeta

ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಮಾತುಗಳು ಕೇಳಿಬಂದಾಗ ಸಹಜವಾಗಿಯೇ ಅಂತರ ಕಾಯ್ದುಕೊಳ್ಳುವ ಪ್ರಯತ್ನ ಮಾಡುವವರೇ ಹೆಚ್ಚು. ಆದರೆ ವಿಜಯ್ ಹಾಗೂ ತ್ರಿಶಾ ಎಲ್ಲವನ್ನು ಧೈರ್ಯವಾಗಿ ಎದುರಿಸುವ ಮನಸ್ಸು ಮಾಡಿದಂತೆ ಕಾಣುತ್ತಿದೆ. ಹಾಗಾಗಿ ಒಟ್ಟಿಗೆ ಒಂದೇ ಕಾರಿನಲ್ಲಿ ಬಂದು ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ ಎನ್ನುವ ಚರ್ಚೆ ನಡೀತಿದೆ.

ತಮಿಳು ನಿರ್ಮಾಪಕ ಕಲ್ಪತಿ ಎಸ್. ಸುರೇಶ್ ಮಗನ ಮದುವೆ ಆರತಕ್ಷತೆ ಕಾರ್ಯಕ್ರಮಕ್ಕೆ ವಿಜಯ್ ಹಾಗೂ ತ್ರಿಶಾ ಜೋಡಿಯಾಗಿ ಬಂದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊ, ವಿಡಿಯೋ ವೈರಲ್ ಆಗ್ತಿದೆ. ಆರಂಭದಲ್ಲಿ ಇದು ಎಐ ವಿಡಿಯೋ ಎಂದೇ ಕೆಲವರು ಭಾವಿಸಿದ್ದರು. ಬಳಿಕ ನಿಜ ಎಂದು ಗೊತ್ತಾಗಿ ಕೆಲವರು ಹುಬ್ಬೇರಿಸಿದ್ದಾರೆ.

ಕಳೆದೊಂದು ವಾರದಿಂದ ವಿಜಯ್ ಹಾಗೂ ಸಂಗೀತಾ ದಂಪತಿ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ಎರುರಾಳಿ ಪಕ್ಷದ ನಾಯಕರು ಇದನ್ನು ಅಸ್ತ್ರವಾಗಿ ಬಳಸಿಕೊಂಡು ವಿಜಯ್ ವಿರುದ್ಧ ಮುಗಿಬಿದ್ದಿದ್ದಾರೆ. ಆದರೆ ವಿಜಯ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಕ್ಷದ ಸಮಾವೇಶಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೀಗ ತ್ರಿಶಾ ಜೊತೆಗೆ ಮದುವೆ ಸಮಾರಂಭಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ.

ಇನ್ನು ಹೀಗೆ ವಿಜಯ್, ತ್ರಿಶಾ ಬಹಿರಂಗವಾಗಿ ಸುತ್ತಾಡುತ್ತಿರುವ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ. ಇದು ಅವರಿಬ್ಬರ ವೈಯಕ್ತಿಕ ವಿಚಾರ. ಆಡಿಕೊಳ್ಳುವವರ ಬಾಯಿಗೆ ಆಹಾರವಾಗುವ ಬದಲು ಅಂತಹ ಬಾಯಿ ಮುಚ್ಚಿಸಲು ವಿಜಯ್, ತ್ರಿಶಾ ಈಗ ಧೈರ್ಯವಾಗಿ ಸುತ್ತಾಡುತ್ತಿದ್ದಾರೆ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ನಟಿಯೊಬ್ಬಳ ಜೊತೆ ವಿಜಯ್‌ಗೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ ಮೇಲೆ ಮುಚ್ಚುಮರೆ ಯಾಕೆ ಎಂದು ಇಬ್ಬರೂ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಕಷ್ಟು ಜನ ವಿಜಯ್ ನಡೆಯನ್ನು ಟೀಕಿಸುತ್ತಿದ್ದಾರೆ. ದಳಪತಿ ಈ ಮೂಲಕ ಯಾವ ಸಂದೇಶ ರವಾನಿಸಲು ಮುಂದಾಗಿದ್ದಾರೆ. ಇಬ್ಬರು ಮಕ್ಕಳು ಇದ್ದಾರೆ. ಮಕ್ಕಳಿಗೆ ಇದು ನೋವಿನ ಸಂಗತಿ. ಅವರ ಬಗ್ಗೆ ಆದರೂ ವಿಜಯ್ ಯೋಚಿಸಬೇಕಿತ್ತು. ತಮ್ಮ ಸ್ವಂತ ಮಕ್ಕಳ ಬಗ್ಗೆ ಯೋಸಿದವರು ರಾಜಕೀಯಕ್ಕೆ ಬಂದು ಜನರ ಬಗ್ಗೆ ಏನು ಯೋಚಿಸಲು ಸಾಧ್ಯ ಎಂದು ಅಣಕವಾಡುತ್ತಿದ್ದಾರೆ.

ವಿಜಯ್ ಹಾಗೂ ತ್ರಿಶಾ ಹಿಟ್ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿ ಮೋಡಿ ಮಾಡಿದ್ದರು. 'ಗಿಲ್ಲಿ', 'ತಿರುಪಾಚ್ಚಿ', 'ಆಥಿ', 'ಕುರುವಿ' ಹಾಗೂ 'ಲಿಯೋ' ಚಿತ್ರಗಳಲ್ಲಿ ಒಟ್ಟಿಗೆ ತೆರೆ ಹಂಚಿಕೊಂಡಿದ್ದರು. ಕಳೆದ ವರ್ಷ ಬಂದಿದ್ದ 'GOAT' ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಇಬ್ಬರು ಬಿಂದಾಸ್ ಆಗಿ ಹೆಜ್ಜೆ ಹಾಕಿದ್ದರು.

ವಯಸ್ಸು 40 ದಾಟಿದ್ರು ನಟಿ ತ್ರಿಶಾ ಇನ್ನು ಮದುವೆ ಆಗಿಲ್ಲ. 10 ವರ್ಷಗಳ ಹಿಂದೆ ವರುಣ್ ಮಣಿಯನ್ ಎಂಬ ಉದ್ಯಮಿ ಜೊತೆ ಆಕೆಯ ಮದುವೆ ನಿಶ್ಚಯವಾಗಿತ್ತು. ಎಂಗೇಜ್‌ಮೆಂಟ್ ಕೂಡ ನಡೆದಿತ್ತು. ಆದರೆ ಬಳಿಕ ಅದು ಮುರಿದುಬಿದ್ದಿತ್ತು. ನಂತರ ಸಿನಿಮಾಗಳ ಕಡೆ ತ್ರಿಶಾ ಹೆಚ್ಚು ಒಲವು ತೋರಿದರು. ಸಮಯ ಬಂದಾಗ ಮದುವೆ ಆಗೋಣ ಎನ್ನುತ್ತಾ ಬರ್ತಿದ್ದಾರೆ.

More from Filmibeat

Read more about: vijay trisha kollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X